ಮುಂಬೈ:ವಿಚ್ಛೇದನದ ಬಳಿಕವೂ ಮಹಿಳೆಯು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ವಯ ಜೀವನಾಂಶಕ್ಕೆ ಅರ್ಹಳಾಗಿರುತ್ತಾಳೆ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ಜತೆಗೆ, ವಿಚ್ಛೇದಿತ ಪತ್ನಿಗೆ ಮಾಸಿಕ 6 ಸಾವಿರ ರೂ.ಗಳ ಜೀವನಾಂಶವನ್ನು ಪಾವತಿಸುವಂತೆ ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರಿಗೆ ಆದೇಶಿಸಿ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನೂ ಹೈಕೋರ್ಟ್‌ನ ಏಕಸದಸ್ಯ ಪೀಠ ಎತ್ತಿಹಿಡಿದಿದೆ.
ಈ ಪ್ರಕರಣವು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ವಿಚ್ಛೇದಿತ ಮಹಿಳೆಯೂ ಜೀವನಾಂಶ ಪಡೆಯಲು ಅರ್ಹಳೇ ಎಂಬ ಪ್ರಶ್ನೆ ಮೂಡಿಸಿದೆ. ಪತಿಯಾದವನು ತನ್ನ ಪತ್ನಿಗೆ ಜೀವನಾಂಶವನ್ನು ಒದಗಿಸಬೇಕಾದ್ದು ಆತನ ಶಾಸನಬದ್ಧ ಹೊಣೆಗಾರಿಕೆಯಾಗಿದೆ.
ಈ ಕೇಸಿನಲ್ಲಿ ಪತಿಯು ಪೊಲೀಸ್ ಸೇವೆಯಲ್ಲಿದ್ದು, ಮಾಸಿಕ 25 ಸಾವಿರಕ್ಕೂ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಹೀಗಾಗಿ, ಕೇವಲ 6 ಸಾವಿರ ರೂ. ಜೀವನಾಂಶ ಪಾವತಿಸುವ ಅವಕಾಶ ಪಡೆದಿದ್ದು ಅವನ ಅದೃಷ್ಟ ಎಂದೂ ನ್ಯಾ. ಆರ್.ಜಿ. ಅವಾಚತ್ ಹೇಳಿದ್ದಾರೆ.