ನವದೆಹಲಿ:ಕೆಲವು ಸಿನಿಮಾಗಳ ಭಯಾನಕ ದೃಶ್ಯಗಳು ಆಗಾಗ ನಮ್ಮನ್ನು ಕಾಡುತ್ತಿರುವುದು ಸಹಜ. ಅದೇ ರೀತಿ ವಿದ್ಯಾ ಬಾಲನ್ ಅದ್ಭುತ ನಟನೆಯ ಭೂಲ್ ಭೂಲೈಯಾ ಚಿತ್ರದ ಮಂಜುಲಿಕಾ ಪಾತ್ರ ಕೂಡಾ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸುವಂತೆ ಮಾಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಮಹಿಳೆಯೊಬ್ಬಳು ಮಂಜುಲಿಕಾ ವೇಷ ಧರಿಸಿ ಮೆಟ್ರೋದೊಳಗೆ ದಿಢೀರ್ ಕಾಣಿಸಿಕೊಳ್ಳುವ ಮೂಲಕ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಕೋಡಿಬೇಂಗ್ರೆ: ಶಿಕ್ಷಕರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ; ಪೊಲೀಸರೊಂದಿಗೆ ಮಾತಿನ ಚಕಮಕಿ
ಈ ವಿಡಿಯೋ ಆನ್ ಲೈನ್ ನಲ್ಲಿ ಹಲವು ವೀಕ್ಷಕರ ಮೆಚ್ಚುಗೆ ಪಡೆದಿದೆ. ಆದರೆ ಕೆಲವರು ಆಕ್ಷೇಪವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮಂಜುಲಿಕಾ ವೇಷಧರಿಸಿ ಬಂದು ಮೆಟ್ರೋ ಕಂಪಾರ್ಟ್ ಮೆಂಟ್ ನಲ್ಲಿ ಸುತ್ತಾಡುತ್ತಿರುವುದನ್ನು ಕಾಣಬಹುದಾಗಿದೆ.
ಅಸ್ತವ್ಯಸ್ತ ಕೂದಲು, ಮೇಕಪ್ ಹಾಕಿಕೊಂಡು ಬಂದ ಮಹಿಳೆ ಮೆಟ್ರೋ ಕಂಪಾರ್ಟ್ ಮೆಂಟ್ ನೊಳಗೆ ಕುಳಿತಿದ್ದ ಪ್ರಯಾಣಿಕರನ್ನು ಹೆದರಿಸಲು ಬಯಸಿದ್ದು, ಕೆಲವರು ಹೆದರಿಕೊಂಡಂತೆ ಕಂಡು ಬಂದಿದ್ದು, ಇನ್ನು ಕೆಲವರು ತಮ್ಮಪಾಡಿಗೆ ತಾವು ಕುಳಿತುಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
Related Articles
ಈಕೆಯ ಮಂಜುಲಿಕಾ ವೇಷಕ್ಕೆ ಟ್ವೀಟರ್ ಬಳಕೆದಾರರೊಬ್ಬರು, ಒಂದು ವೇಳೆ ಈಕೆ ಈ ವೇಷವನ್ನು ಯಾವುದಾದರು ವೇದಿಕೆಯಲ್ಲಿ ಪ್ರದರ್ಶಿಸಿದ್ದರೆ ಉತ್ತಮ ನಟನಾ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತಿತ್ತು. ನಾಟಕವನ್ನು ವೇದಿಕೆಯಲ್ಲೇ ಮಾಡಬೇಕೇ ವಿನಃ, ನಿಜ ಜೀವನದಲ್ಲಿ ಅಲ್ಲ ಎಂದು ತಿಳಿಸಿದ್ದಾರೆ.
“ನನಗೆ ಈವಾಗಲೂ ಅಚ್ಚರಿಯಾಗುತ್ತಿದೆ, ಈಕೆ ಭದ್ರತೆಯ ಕಣ್ತಪ್ಪಿಸಿ ಹೇಗೆ ಮೆಟ್ರೋದೊಳಗೆ ಬಂದಿದ್ದಾಳೆ” ಎಂಬುದಾಗಿ ಮತ್ತೊಬ್ಬ ಟ್ವೀಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.