Advertisement

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

11:10 PM May 30, 2023 | Team Udayavani |

ರಬಕವಿ-ಬನಹಟ್ಟಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಬೀಸಿದ ಬಿರುಗಾಳಿಗೆ ಗ್ರಾಮದ ರಾಮಣ್ಣ ನೇಸೂರ ಅವರ ಮನೆಯ ಪತ್ರಾಸ ಗೋಡೆಗೆ ಹೊಂದಿಕೊಂಡಿದ್ದ ಕಚ್ಚಾ ಇಟ್ಟಿಗೆ ಗೋಡೆ ಕುಸಿದ ಪರಿಣಾಮವಾಗಿ ಪಾರ್ವತಿ ನೇಸರೂ(೪೫) ಎಂಬ ಮಹಿಳೆ ಬಲಿಯಾದ ವರದಿಯಾಗಿದೆ.

Advertisement

ಗೋಡೆ ಕುಸಿದು ಗಾಯಗೊಂಡಿದ್ದ ಪಾರ್ವತಿಯವರನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಆದರೆ ಮಾರ್ಗ ಮಧ್ಯದಲ್ಲಿ ನಿಧನರಾದರು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಗ್ರಾಮ ಲೆಕ್ಕಾಧಿಕಾರಿ ಅಮಸಿದ್ಧ ಬಿರಾದಾರ ಇದ್ದರು.

ತಹಶೀಲ್ದಾರ್ ಡಾ.ಹೂಗಾರ ದೂರವಾಣಿಯ ಮೂಲಕ ಪತ್ರಿಕೆಯ ಜೊತೆಗೆ ಮಾತನಾಡಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮೃತರ ಕುಟುಂಬಕ್ಕೆ ಪ್ರಕೃತಿ ವಿಕೋಪದ ಅಡಿಯಲ್ಲಿ ಸರ್ಕಾರದಿಂದ ದೊರೆಯಬಹುದಾದ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next