ಚೆನ್ನೈ: ಖ್ಯಾತ ಯೂಟ್ಯೂಬರ್ ಕಾರು ಢಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ (ಮೇ.26 ರಂದು) ತಮಿಳುನಾಡಿನ ಚೆನ್ನೈ ಸಮೀಪದ ಮರೈಮಲೈ ನಗರದಲ್ಲಿ ನಡೆದಿದೆ.
ಪದ್ಮಾವತಿ (52) ಮೃತ ಮಹಿಳೆ.
ಕಾರು ಜನಪ್ರಿಯ ಯೂಟ್ಯೂಬರ್ ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಇರ್ಫಾನ್ ಕುಟುಂಬದೊಂದಿಗೆ ತಂಜಾವೂರಿನಿಂದ ಚೆನ್ನೈಗೆ ಮರಳುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದಪದ್ಮಾವತಿ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಆಕೆ ಮೃತಪಟ್ಟಿದ್ದಾರೆ.
ಮೊಹಮ್ಮದ್ ಇರ್ಫಾನ್ ಅವರ ಕಾರು ಚಾಲಕ ಅಜರುದ್ದೀನ್ ಕಾರು ಚಲಾಯಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅತೀ ವೇಗದಿಂದ ಕಾರು ಚಲಾಯಿಸಿದ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Related Articles
ಮೊಹಮ್ಮದ್ ಇರ್ಫಾನ್ ಅವರು “ಇರ್ಫಾನ್ ವಿವ್ಯೂʼ ಎನ್ನುವ ಯೂಟ್ಯೂಬ್ ಚಾನೆಲ್ ನ್ನು ಹೊಂದಿದ್ದು, 3.64 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಆಹಾರ ಸಂಬಂಧಿತ ವಿಷಯ ಮತ್ತು ಸೆಲೆಬ್ರಿಟಿಗಳ ಸಂದರ್ಶನಗಳನ್ನು ಅವರು ಪೋಸ್ಟ್ ಮಾಡುತ್ತಾರೆ.