Advertisement

ಶವದ ಮರ್ಮಾಂಗ ಹಿಡಿದು ಮಹಿಳೆ ರೋಧನ!ಕಲಬುರಗಿಯಲ್ಲಿ  ವಿಲಕ್ಷಣ ಘಟನೆ 

02:31 PM May 17, 2017 | |

ಕಲಬುರಗಿ : ಇಲ್ಲಿನ ರೈಲು ನಿಲ್ದಾಣದಲ್ಲಿ ಪುರುಷನೊಬ್ಬನ ಶವದ ಮರ್ಮಾಂಗ ಹಿಡಿದು ಮಹಿಳೆಯೊಬ್ಬಳು ರೋಧಿಸುತ್ತಿದ್ದ ವಿಲಕ್ಷಣ ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು, ಜನರು ದೃಶ್ಯ ನೋಡಿ ಅಸಹ್ಯ ಪಡಬೇಕಾಯಿತು. 

Advertisement

ಶವ ಅಪರಿಚಿತ ಪುರುಷನದ್ದಾಗಿದ್ದು, ಮಾನಸಿಕವಾಗಿ ಅಸ್ವಸ್ಥೆ ಎನ್ನಲಾದ ಮಹಿಳೆ ನನ್ನ ಗಂಡ ಸತ್ತಿದ್ದಾನೆ ಎಂದು ಮರ್ಮಾಂಗ ಹಿಡಿದು ಅಳುತ್ತಿದ್ದಳು.ಇದನ್ನು ನೋಡಿದ ಸಾರ್ವಜನಿಕರು ಮುಜಗರಕ್ಕೀಡಾಗಿ ದೂರು ಹೋಗುವಂತೆ ಹೇಳಿದ್ದಾರೆ. ಜನರು ಹೇಳಿದರೂ ಆಕೆ ಅಳು ಮುಂದುವರಿಸಿ ಮರ್ಮಾಂಗದಿಂದ ಕೈ ತೆಗೆಯಲಿಲ್ಲ. ಕೂಡಲೇ ಯುವತಿಯೊಬ್ಬಳು ಕೋಲಿನಿಂನ ಆಕೆಯನ್ನು ಚೆನ್ನಾಗಿ ಥಳಿಸಿದ್ದಾಳೆ. ಬಳಿಕ ಆಕೆಯ ಕೈಗಳನ್ನು ಹಗ್ಗದಿಂದ ಕಟ್ಟಿ ಹಾಕಲಾಗಿದೆ.

ಸ್ಥಳಕ್ಕೆ ರೈಲ್ವೇ ಪೊಲೀಸರು,ಪೊಲೀಸರು ಆಗಮಿಸಿ ಶವವನ್ನು ತೆರವುಗೊಳಿಸಿ,ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next