Advertisement

ಮಾರಾಮಾರಿಗೆ ಕಾರಣವಾದ ಅನೈತಿಕ ಸಂಬಂಧ: ಮಹಿಳೆ ಆತ್ಮಹತ್ಯೆ

12:22 PM Oct 22, 2018 | udayavani editorial |

ಹೊಸದಿಲ್ಲಿ : ನೆರೆಮನೆಯ ವ್ಯಕ್ತಿಯೊಂದಿಗಿನ ಅನೈತಿಕ ಸಂಬಂಧ ಉಭಯ ಕುಟುಂಬಗಳ ಸದಸ್ಯರೊಳಗೆ ಮಾರಾಮಾರಿಗೆ ಕಾರಣವಾದುದನ್ನು ಅನುಸರಿಸಿ ಮನನೊಂದ 21ರ ಹರೆಯದ ಆರೋಪಿ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ದಿಲ್ಲಿಯ ಬುರಾರಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಮಹಿಳೆಯು ಯಾವುದೇ ಡೆತ್‌ ನೋಟ್‌ ಬರೆದಿಟ್ಟಿಲ್ಲ. ತನ್ನ ಅನೈತಿಕ ಸಂಬಂಧವೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಯಿತೆಂದು ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. 

ಮಹಿಳೆ ಮತ್ತು ಪುರುಷನ ಮನೆಯವರು ಪರಸ್ಪರರ ವಿರುದ್ದ ಹಲ್ಲೆ ದೂರನ್ನು ಪೊಲೀಸರಲ್ಲಿ ದಾಖಲಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next