ಮದುವೆ ಒಂದು ಸಂಭ್ರಮ. ಆ ಸಂಭ್ರಮದಲ್ಲಿ ನೆಂಟರು, ಆಪ್ತರು, ಸ್ನೇಹಿತರೆಲ್ಲ ಸೇರಿಕೊಂಡು ಸಂತಸ ಪಡುತ್ತಾರೆ. ವಧು – ವರರ ಜೀವನದ ಅಮೂಲ್ಯ ಕ್ಷಣದಲ್ಲಿ ನಾವೆಲ್ಲ ಒಟ್ಟುಗೂಡಿ ಸೆಲೆಬ್ರೆಟ್ ಮಾಡುತ್ತೇವೆ.
ಆದರೆ ಮದುವೆ ಖುಷಿಯ ವೇಳೆ ನಾವು ಕೆಲವೊಮ್ಮೆ ಮುಜುಗರ ಪಡುವ ಪ್ರಸಂಗಗಳು ನಡೆಯುವುದುಂಟು. ಅದು ಹೊಸದಾಗಿ ಹಾಕಿಕೊಂಡ ಬಟ್ಟೆಯ ವಿಷಯದಲ್ಲಿ ಆಗಬಹುದು ಅಥವಾ ಬೇರೆ ಯಾವುದೋ ವಿಷಯದಲ್ಲಿರಬಹುದು. ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿಗಳು ಕೆಲವೊಮ್ಮೆ ಎದುರಾಗುವುದುಂಟು.
ಇದನ್ನೂ ಓದಿ: ರೈಲುಗಳ ಮುಖಾಮುಖಿ ಢಿಕ್ಕಿ: ಭೀಕರ ಅಪಘಾತದಲ್ಲಿ 26 ಮಂದಿಯ ದಾರುಣ ಅಂತ್ಯ
ಇಂತದ್ದೇ ಒಂದು ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಧು – ವರರು ಮದುವೆ ಮಂಟಪದಿಂದ ಹೊರ ಬರುವ ವೇಳೆ ಅನೇಕರು ಫೋಟೋಗಳನ್ನು ತೆಗೆಯುತ್ತಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ಫೋಟೋ ತೆಗೆಯಲು ಹೋಗಿದ್ದಾರೆ. ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸುತ್ತಲೇ ಹಿಂದೆ ಇದ್ದ ಚರಂಡಿಯನ್ನು ನೋಡದೆ ಮೊಬೈಲ್ ಒಟ್ಟಿಗೆಯೇ ಜಾರಿ ಬಿದ್ದಿದ್ದಾರೆ. ಇದನ್ನು ನೋಡಿದ ವಧು – ವರರು, ನೆರೆದಿದ್ದ ಜನರಿಗೆ ನಗಬೇಕೋ, ಏನು ಹೇಳಬೇಕೋ ಎನ್ನುವುದು ತಿಳಿಯದೆ ಸುಮ್ಮನೆ ನಿಂತಿದ್ದಾರೆ.
Related Articles
ಈ ವಿಡಿಯೋ 10 ಮಿಲಿಯನ್ ಅಧಿಕ ವೀಕ್ಷಣೆಯಾಗಿದೆ. ಆದರೆ ಇದು ಯಾವ ಊರಿನದು ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ವಿದೇಶದಲ್ಲಿ ನಡೆದ ಮದುವೆ ಕಾರ್ಯಕ್ರಮದ ಹಾಗೆ ಕಾಣುತ್ತದೆ.