Advertisement

ದೆಹಲಿ:ಮಹಿಳೆಯ ಅಪಹರಣ,ಗನ್‌ಪಾಯಿಂಟ್‌ನಲ್ಲಿ ಗ್ಯಾಂಗ್‌ರೇಪ್‌ 

11:22 AM Nov 17, 2017 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರು ಸುರಕ್ಷತೆಗೆ ಸವಾಲೆನಿಸುವಂತಹ ಇನ್ನೊಂದು ಹೇಯ ಕೃತ್ಯ ನಡೆದಿದ್ದು, ಮಹಿಳೆಯೊ ಬ್ಬಳನ್ನು ಟ್ಯಾಕ್ಸಿಯಲ್ಲಿ ಅಪಹರಿಸಿ ಗನ್‌ ಪಾಯಿಂಟ್‌ನಲ್ಲಿ ಇಬ್ಬರು ಗ್ಯಾಂಗ್‌ ರೇಪ್‌ ನಡೆಸಿದ್ದಾರೆ.

Advertisement

ಗ್ರೇಟರ್‌ ನೋಯ್ಡಾ ಪ್ರದೇಶದಅನ್ಸಲ್‌ ಪ್ಲಾಜಾ ಬಳಿ ಮಹಿಳೆಯನ್ನು ಇಬ್ಬರು ಅಪಹರಿಸಿ ಗನ್‌ ಪಾಯಿಂಟ್‌ನಲ್ಲಿ ಗ್ಯಾಂಗ್‌ರೇಪ್‌ ಎಸಗಿ  ವಿಡಿಯೋ ಚಿತ್ರೀಕರಿಸಿದ್ದಾರೆ. ಯಾರಿಗಾದರೂ ವಿಚಾರ ತಿಳಿಸಿದರೆ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ನವೆಂಬರ್‌ 14 ರಂದು ತಡ ರಾತ್ರಿ ಘಟನೆ ನಡೆದಿದ್ದು, ‘ರೋಹಿಣಿ ಪ್ರದೇಶಕ್ಕೆ ತೆರಳಲು ಟ್ಯಾಕ್ಸಿ ಮಾಡಿಕೊಂಡು ಹೋಗುತ್ತಿದ್ದಾಗ , ಮಾರ್ಗಮಧ್ಯೆ ಇನ್ನೋರ್ವ ಹತ್ತಿಕೊಂಡಿದ್ದು ಇಬ್ಬರು ಸೇರಿ ಕೃತ್ಯ ಎಸಗಿ, ಬಳಿಕ ನನ್ನ 12 ಸಾವಿರ ರೂ ಮೌಲ್ಯದ ಮೊಬೈಲ್‌, ಚಿನ್ನಾಭರಣಗಳು ಮತ್ತು ನನ್ನಲ್ಲಿದ್ದ ಹಣವನ್ನು ಕಸಿದುಕೊಂಡು  ಗ್ರೇಟರ್‌ ನೋಯ್ಡಾ ದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ’.  ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಹೌಜ್‌ ಕಾಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next