Advertisement
ಹೌದು, ಈ ಮಹಿಳೆ ಎಲ್ಲರಂತಲ್ಲ. ತಮ್ಮ 93 ನೇ ವಯಸ್ಸಿನ ತನಕ ವೃತ್ತಿಪರರಾಗಿದ್ದು ಈಗ ವೃತ್ತಿ ಜೀವನಕ್ಕೆ ಬ್ರೇಕ್ ಹಾಕುತ್ತಿದ್ದಾರೆ ಈ ಮಹಿಳೆ. ಅವರೇ, ವರ್ಜೀನಿಯಾದ “ಗಿನ್ನಿ” ಬಹರ್.
Related Articles
Advertisement
“ನಾನು ಪ್ರತಿದಿನ ಜನರನ್ನು ನೋಡುವ ಎಲ್ಲ ಉತ್ಸಾಹವನ್ನು ಕಳೆದುಕೊಳ್ಳಲಿದ್ದೇನೆ. “ನಾನು ತುಂಬಾ ಅದೃಷ್ಟ ಶಾಲಿಯಾಗಿದ್ದೇನೆ,ನನ್ನ ಕಂಪೆನಿಯೊಂದಿಗಿನ ದೀರ್ಘ ಕಾಲದ ಸೇವೆ ಜೀವನದ ಶ್ರೇಷ್ಠ ದಿನಗಳು” ಎಂದು ಬಹರ್ ಹೇಳಿಕೊಳ್ಳುತ್ತಾರೆ.
ಬಹರ್, ಆರಂಭದ ಹಂತದಲ್ಲಿ ಒಂದು ಪ್ರಕಾಶನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ನನಗೆ ನನ್ನ ಬಗ್ಗೆ ತೃಪ್ತಿ ಇರಲಿಲ್ಲ. ಅಲ್ಲಿ ನನ್ನ ವೃತ್ತಿ ಜೀವನದಲ್ಲಿ ಅನೇಕ ಏಳು ಬೀಳುಗಳಾಗಿವೆ. ಅವೆಲ್ಲವನ್ನೂ ನಾನು ಸಹಿಸಿಕೊಂಡು ಇದುವರೆಗೆ ಬಂದಿದ್ದೇನೆ. ನಾನು ನಡೆದು ಬಂದ ಹಾದಿಯ ಬಗ್ಗೆ ನನಗೆ ಹೆಮ್ಮೆ ಇದೆ ಎನ್ನುತ್ತಾರೆ ಬಹರ್.
ಓದಿ : ಹಳೆಯಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ ; ಓರ್ವ ಸಾವು
ಕಂಪೆನಿ, ಅವರ ನಿವೃತ್ತಿಯ ಗೌರವಾರ್ಥವಾಗಿ, ಬಹರ್ ಅವರಿಗೆ “ಗೌರವ ಅಧ್ಯಕ್ಷೆ” ಪ್ರಶಸ್ತಿಯನ್ನು ನೀಡಿದೆ. ಏಜೆನ್ಸಿಯ ನ್ಯೂಯಾರ್ಕ್ ಕಚೇರಿಯಲ್ಲಿ ಅವರ ಮ್ಯೂರಲ್ ಅನ್ನು ಸಹ ರಚಿಸಲಾಗುತ್ತಿದೆ. ಮತ್ತು ಕಂಪನಿಯು ಕಚೇರಿಯ ಚೇಂಬರ್ ವೊಂದಕ್ಕೆ “ಗಿನ್ನಿ ಬಹರ್” ಎಂದು ಮರುನಾಮಕರಣ ಮಾಡುತ್ತಿದೆ ಎನ್ನುವುದು ವಿಶೇಷ.
“ಗಿನ್ನಿ, ಜಾಹೀರಾತು ಉದ್ಯಮದಲ್ಲಿ ಒಂದು ಸಂಪೂರ್ಣ ದಂತಕಥೆ. 69 ವರ್ಷಗಳಿಂದ ಅವರು ನಮ್ಮ ಕಂಪನಿಯಲ್ಲಿ ಸಕಾರಾತ್ಮಕ ಶಕ್ತಿಯಾಗಿದ್ದಾರೆ. ಸಂತೋಷ ಮತ್ತು ಗೌರವವನ್ನು ಹಂಚಲು ಮತ್ತು ಜನರನ್ನು ಒಟ್ಟುಗೂಡಿಸುವುದಕ್ಕಾಗಿ ಅವರು ಜೀವನವನ್ನು ಸವೆಸಿದ್ದಾರೆ. “ಅವರ ಉದಾರ ಮನೋಭಾವವು ನಮ್ಮ ನ್ಯೂಯಾರ್ಕ್ ಕಚೇರಿಗೆ ಹೆಮ್ಮೆಯ ವಿಷಯ.” ಎಂದು ವಂಡರ್ಮನ್ ಥಾಂಪ್ಸನ್ ಉತ್ತರ ಅಮೆರಿಕದ ಸಿಇಒ ಶೇನ್ ಅಟ್ಚಿಸನ್ ಹೇಳುತ್ತಾರೆ.
“ನನಗೆ ಗೌರವದ ಬಗ್ಗೆ ನಿರೀಕ್ಷೆ ಇರಲಿಲ್ಲ. ನಾನು ಮಾಡುತ್ತಿರುವುದು ಪ್ರತಿದಿನದ ಕೆಲಸ, ಮತ್ತು ಅದು ನನ್ನ ಜೀವನದ ಒಂದು ಭಾಗವಾಗಿದೆ. ನಾನು ಅದನ್ನು ಅಲ್ಲಿ ಆನಂದಿಸಿದೆ. ಎಂದು ಬಹರ್ ಮುಜುಗರ ವ್ಯಕ್ತ ಪಡಿಸುತ್ತಾರೆ.
ಒಟ್ಟಿನಲ್ಲಿ, ಸುದೀರ್ಘ ವೃತ್ತಿ ಜೀವನದಿಂದ ಹೊರ ಬರುತ್ತಿರುವ ಬಹರ್ ಅಕ್ಷರಶಃ ಮಾದರಿ ಮಹಿಳೆ ಎನ್ನುವುದರಲ್ಲಿ ಸಂಶಯ ಪಡಬೇಕಾಗಿಲ್ಲ.
–ಶ್ರೀರಾಜ್ ವಕ್ವಾಡಿ
ಓದಿ : ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ