Advertisement

ಗೆಲ್ಲುವ ವಿಶ್ವಾಸ ಇಲ್ಲದೆ ಸಿದ್ದು ಬೇರೆ ಕ್ಷೇತ್ರ ಹುಡುಕುತ್ತಿರಬೇಕು: ಬಿಎಸ್‌ವೈ

10:02 PM Nov 13, 2022 | Team Udayavani |

ಕುಣಿಗಲ್‌: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿ ಬಿಟ್ಟು ಬೇರೆ ಕ್ಷೇತ್ರಕ್ಕೆ ಯಾಕೆ ಹೋಗುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಅಲ್ಲಿ ಒಳ್ಳೆ ಕೆಲಸ ಮಾಡಿದ್ದೇನೆ, ಮತ್ತೆ ಗೆಲ್ತಿàನಿ ಅನ್ನೋ ವಿಶ್ವಾಸ ಇಲ್ಲದೆ ಬೇರೆ ಕ್ಷೇತ್ರ ಹುಡುಕುತ್ತಿರಬೇಕೆಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಕುಣಿಗಲ್‌ ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮತಿ ಮೈತ್ರಾದೇವಿ ಯಡಿಯೂರಪ್ಪ ಸ್ಮಾರಕ ಭವನವನ್ನು ಭಾನುವಾರ ಲೋಕಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯರ ಕ್ಷೇತ್ರ ಹುಡುಕಾಟದ ಬಗ್ಗೆ ಟೀಕೆ ಮಾಡಲ್ಲ, ಜನ ನಿರ್ಧರಿಸುತ್ತಾರೆ. ಅವರಿಗೆ ಎಲ್ಲಿ ಗೆಲ್ಲುತ್ತೀನಿ ಅನ್ನೋ ವಿಶ್ವಾಸ ಇರುವ ಕ್ಷೇತ್ರದಲ್ಲಿ ಸ್ಪರ್ಧಿಸುವುದು, ಬಿಡುವುದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.

ಎಸ್‌ಪಿಎಂಗೆ ಟಿಕೆಟ್‌ ಭರವಸೆ ನೀಡಿಲ್ಲ: ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರು ಬಿಜೆಪಿ ಸೇರುವ ವೇಳೆ ಟಿಕೆಟ್‌ ನೀಡುವ ಯಾವುದೇ ಭರವಸೆ ನೀಡಿಲ್ಲ, ಕುಣಿಗಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡುವ ಸಂಬಂಧ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿದರು.

ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ, ಬಾಳೆಹೊನ್ನೂರು ಮಠದ ರೇಣುಕಾಶಿವಾಚಾರ್ಯ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಡಾ.ಎಚ್‌.ಡಿ.ರಂಗನಾಥ್‌, ಮಸಾಲೆ ಜಯರಾಮ್‌ ಸೇರಿ ಹಲವರು ಹಾಜರಿದ್ದರು.

Advertisement

ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಆಹ್ವಾನ ನೀಡಿಲ್ಲ ಅನ್ನೋ ವಿಚಾರ ನನಗೆ ಗೊತ್ತಿರೋ ಪ್ರಕಾರ ಆಮಂತ್ರಣ ಪತ್ರಿಕೆ ಮಾಡಿರಲಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರಿಗೆ ಪತ್ರ ಬರೆದು ಸಿಎಂ ಆಹ್ವಾನಿಸಿದ್ದಾರೆ. ದೇವೇಗೌಡರಿಗೂ ಪತ್ರ ಬರೆದು ಸಿಎಂ ದೂರವಾಣಿ ಕರೆ ಮಾಡಿಯೂ ಆಹ್ವಾನಿಸಿದ್ದಾರೆ. ದೇವೇಗೌಡರು ಈ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲ್ಲ ಅನ್ನೋ ವಿಶ್ವಾಸ ನನಗಿದೆ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

ಸಿದ್ದರಾಮಯ್ಯ ಕೊಲಾರದಿಂದ ಸ್ಪರ್ಧೆ ವಿಚಾರ ಅವರಿಗೆ ಮತ್ತು ಅವರ ಪಕ್ಷಕ್ಕೆ ಬಿಟ್ಟಿದ್ದು. ಕೋಲಾರದಲ್ಲಿ ಯಾಕೆ ನಿಂತುಕೊಳ್ತಾರೋ ಗೊತ್ತಿಲ್ಲ. ಚಿಕ್ಕನಾಯಕನಹಳ್ಳಿಗೆ ಬರೋದಾದ್ರೆ ನಾನು ಸ್ವಾಗತಿಸುತ್ತೇನೆ. ಬಂದ್ರೆ ಇಬ್ರೂ ಒಳ್ಳೆ ಕುಸ್ತಿ ಆಡಬಹುದು, ಬರಲಿ.
-ಜೆ.ಸಿ.ಮಾಧುಸ್ವಾಮಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next