ಭೋಪಾಲ್: 2002ರ ಗುಜರಾತ್ ದಂಗೆಗಳಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದ ಆರೋಪದಡಿ ಬಂಧಿಸಲ್ಪಟ್ಟಿರುವ ಗುಜರಾತ್‌ನ ಸಮಾಜ ಸೇವಕಿ ತೀಸ್ತಾ ಸೆಟಲ್ವಾಡ್ ಅವರಿಗೆ ಈ ಹಿಂದೆ ನೀಡಲಾಗಿರುವ ಪದ್ಮಶ್ರೀ ಗೌರವವನ್ನು ಹಿಂಪಡೆಯಬೇಕು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಆಗ್ರಹಿಸಿದ್ದಾರೆ.
2007ರಲ್ಲಿ ಕೇಂದ್ರ ಸರ್ಕಾರ, ತೀಸ್ತಾರಿಗೆ ಪದ್ಮಶ್ರೀಯನ್ನು ನೀಡಿ ಗೌರವಿಸಿತ್ತು. ಮಂಗಳವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, “ಕೇಂದ್ರದಲ್ಲಿ ಈ ಹಿಂದಿದ್ದ ಕಾಂಗ್ರೆಸ್ ಸರ್ಕಾರ, ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ತೀಸ್ತಾ ಅವರಿಗೆ ಪದ್ಮಶ್ರೀ ನೀಡಿತ್ತು.
ವರ್ಷಗಳ ಹಿಂದೆ ನಡೆದಿದ್ದ ಅವಾರ್ಡ್ ವಾಪಸಿ ಅಭಿಯಾನದಲ್ಲೂ ಕೈ ಜೋಡಿಸಿದ್ದರು ಎಂದು ದೂರಿದ್ದಾರೆ.