Advertisement

“ಪಠ್ಯ ಜತೆ ಮಕ್ಕಳಿಗೆ ಸಂಸ್ಕಾರದ ಶಿಕ್ಷಣವೂ ಅಗತ್ಯ’

10:29 PM Jun 10, 2019 | Team Udayavani |

ಪೆರ್ಲ: ಕ್ಷಣವು ಮಾನವ ಹಾಗೂ ಸಮಾಜದ ಸರ್ವಾಂಗೀಣ ಪ್ರಗತಿಗೆ ಆಧಾರ.ಶಿಕ್ಷಕರು ಪಠ್ಯದೊಂದಿಗೆ ಉತ್ತಮ ಸಂಸ್ಕಾರಗಳನ್ನು ಮಕ್ಕಳಿಗೆ ನೀಡಲು ಆದ್ಯತೆ ಕೊಡಬೇಕು.ಎಂದು ಹಿರಿಯ ಅಧ್ಯಾಪಕ ಬಟ್ಯ ಮಾಸ್ತರ್‌ ಅವರು ಹೇಳಿದರು.

Advertisement

ಅವರು ಪಡ್ರೆ ವಾಣೀನಗರ ಹೈಯರ್‌ ಸೆಕಂಡರಿ ಶಾಲೆಯಲ್ಲಿ ಜೂ.6ರಂದು ನಡೆದ ಪ್ರವೇಶೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಗುಣಮಟ್ಟದ ಶಿಕ್ಷಣಕ್ಕೆ ಕಾರಣರಾದ ಶಾಲೆಗೆ ಸಂಬಂಧಪಟ್ಟವರೆಲ್ಲರೂ ಅಭಿನಂದನೀಯರು ಎಂದ ವರು ಹೇಳಿದÃ ಪಂ.ಸದಸ್ಯೆ ಶಶಿಕಲಾ ವೈ.ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನರಸಿಂಹ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾರ್ಥಿ ಹರ್ಷ ಮುಖ್ಯಮಂತ್ರಿಯವರ ಪ್ರವೇಶೋತ್ಸವ ಸಂದೇಶ ಓದಿದರು. ಮಿಲೇನಿಯಂ ಕ್ಲಬ್‌ ವತಿಯಿಂದ ಒಂದನೇ ತರಗತಿ ಮಕ್ಕಳಿಗೆ ಕಲಿಕೋಪ ಕರಣ ಕಿಟ್‌ ವಿತರಿಸಲಾಯಿತು.

ಗ್ರಾಮ ಪಂಚಾಯತ್‌ ಸದಸ್ಯೆ ಚಂದ್ರಾವತಿ,ಕ್ಲಬ್‌ ಸದಸ್ಯರು, ವಿದ್ಯಾರ್ಥಿಗಳ ರಕ್ಷಕರು,ಪಿಟಿಎ ಸಮಿತಿಯವರು,ಸ್ಥಳೀಯರು ಉಪಸ್ಥಿತರಿದ್ದರು. ಪ್ರಧಾನ ಶಿಕ್ಷಕ ವಾಸುದೇವ ನಾಯಕ್‌ ಸ್ವಾಗತಿಸಿ, ಅಧ್ಯಾಪಕಿ ನಾಗರತ್ನಾ ವಂದಿಸಿದರು. ಸರಸ್ವತಿ ನಿರ್ವಹಿಸಿದರು.ಪ್ರವೇಶೋತ್ಸವದ ಪ್ರಯುಕ್ತ ಮಕ್ಕಳು,ಶಿಕ್ಷಕರು,ಸಂಘಸಂಸ್ಥೆಯ ಸದಸ್ಯರಿಂದ ಆಕರ್ಷಕ ಮೆರವಣಿಗೆ ನಡೆಯಿತು.

Advertisement

ಗುಣಮಟ್ಟದ ಶಿಕ್ಷಣಕ್ಕೆ ಉದಾಹರಣೆ
ಗ್ರಾಮೀಣ ಪ್ರದೇಶದ,ಗಡಿ ಭಾಗದ ವಾಣೀನಗರ ಸರಕಾರಿ ಶಾಲೆ ಸತತ ನಾಲ್ಕನೇ ಬಾರಿ ಶೇ.100 ಫಲಿತಾಂಶ ಪಡೆದಿರುವುದು ಹಳ್ಳಿಯ ಸರಕಾರಿ ಶಾಲೆಯಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತದೆ ಎಂಬುವುದಕ್ಕೆ ನಿದರ್ಶನ ಶಿಕ್ಷಕರ ಶ್ರಮ ಹಾಗೂ ರಕ್ಷಕರ ಪ್ರೋತ್ಸಾಹದಿಂದ ಎಲ್ಲಾ ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಅದು ಆ ಊರಿಗೇ ಹಿರಿಮೆ. ಹಿಂದುಳಿದ ಪ್ರದೇಶಗಳ ಬಡಜನತೆ ಶಾಲೆಯ ಮೇಲಿಟ್ಟ ವಿಶ್ವಾಸ ಹಾಗೂ ಅಭಿಮಾನದ ಸಂಕೇತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next