Advertisement

With one clue; 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರನನ್ನು ಬಂಧಿಸಿದ ದೆಹಲಿ ಪೊಲೀಸರು

08:40 PM Feb 25, 2024 | Team Udayavani |

ಹೊಸದಿಲ್ಲಿ: ನಿಷೇಧಿತ ಸಂಘಟನೆಯ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ದ ತಲೆಮರೆಸಿಕೊಂಡಿದ್ದ ಉಗ್ರ ಹನೀಫ್ ಶೇಖ್ (47) ನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಯಶಸ್ವಿಯಾಗಿದೆ.

Advertisement

ಸಿಮಿ ಸಂಘಟನೆಯ ನಿಯತಕಾಲಿಕದ ಸಂಪಾದಕನಾಗಿದ್ದಾಗ ಶೇಖ್ ಬಳಸಿದ್ದ ಅಲಿಯಾಸ್ ಎಂಬುದು ಆತನನ್ನು ಬಂಧಿಸಲು ಪೊಲೀಸರಿಗೆ ದೊಡ್ಡ ಸುಳಿವಾಗಿತ್ತು. ಫೆಬ್ರವರಿ 22 ರಂದು ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಅತ್ಯಂತ ಕುಖ್ಯಾತ ಮತ್ತು ಮೋಸ್ಟ್ ವಾಂಟೆಡ್ ಸಿಮಿ ಭಯೋತ್ಪಾದಕ  ಹನೀಫ್ ಶೇಖ್, ಮೊಹಮ್ಮದ್ ಹನೀಫ್ ಮತ್ತು ಹನೀಫ್ ಹುದಾಯಿ ಎಂಬ ಹೆಸರುಗಳನ್ನೂ ಬಳಸಿಕೊಳ್ಳುತ್ತಿದ್ದ. 22 ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು 2002ರಲ್ಲಿ ಘೋಷಿತ ಅಪರಾಧಿ ಎಂದು ಘೋಷಿಸಲಾಗಿತ್ತು.

ಬಂಧನ ಹೇಗೆ ಸಾಧ್ಯವಾಯಿತು?

ಪೊಲೀಸರ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಮತ್ತು ಕೇರಳದಲ್ಲಿ ಸಿಮಿ ಸಭೆಗಳಲ್ಲಿ ಪಾಲ್ಗೊಳ್ಳುವಲ್ಲಿ ಹನೀಫ್ ಶೇಖ್ ಪ್ರಮುಖ ಪಾತ್ರ ವಹಿಸಿದ್ದ. ಆದರೆ, ನಿಷೇಧಿತ ಸಂಘಟನೆಯ ಚಟುವಟಿಕೆಗಳ ಮೇಲೆ ಪೊಲೀಸರು ಕಡಿವಾಣ ಹಾಕಿದಾಗಲೆಲ್ಲ ಹನೀಫ್ ಶೇಖ್ ತಪ್ಪಿಸಿಕೊಳ್ಳುತ್ತಿದ್ದ.

Advertisement

ಶೇಖ್ ನನ್ನು ಬಂಧಿಸಲು ದೆಹಲಿ ಪೊಲೀಸರ ದಕ್ಷಿಣ ವಲಯ ವಿಶೇಷ ಘಟಕ ವಿವಿಧ ರಾಜ್ಯಗಳಿಂದ ಆತನ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿತು. ಶೇಖ್ ಮತ್ತು ಆತನ ಸಹಚರರನ್ನು ಪತ್ತೆಹಚ್ಚಲು ತಂಡವು ತಮ್ಮ ಮಾಹಿತಿದಾರರನ್ನು ಏಳು ರಾಜ್ಯಗಳಲ್ಲಿ ನಿಯೋಜಿಸಿತು. ಶೇಖ್ ತನ್ನ ಗುರುತನ್ನು ಬದಲಾಯಿಸಿಕೊಂಡು ಮಹಾರಾಷ್ಟ್ರದ ಭುಸಾವಾಲ್‌ನಲ್ಲಿರುವ ಉರ್ದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಮಾಹಿತಿದಾರರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

ಶೇಖ್‌ನನ್ನು ಬಂಧಿಸಲು ತಂಡವನ್ನು ರಚಿಸಿ ಫೆಬ್ರವರಿ 22 ರಂದು ಮೊಹಮದಿನ್ ನಗರದಿಂದ ಖಡ್ಕಾ ರಸ್ತೆಗೆ ಹೋಗುತ್ತಿದ್ದ ಅನುಮಾನಾಸ್ಪದ ವ್ಯಕ್ತಿಯನ್ನೇ ಪೊಲೀಸರು ಹನೀಫ್ ಶೇಖ್ ಎಂದು ಗುರುತಿಸಿದ್ದಾರೆ. ಮಧ್ಯಾಹ್ನ 2.50 ರ ಸುಮಾರಿಗೆ ಬೆನ್ನಟ್ಟಿದಾಗ ಹನೀಫ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆದರೆ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಯಿತು” ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಅಲೋಕ್ ಕುಮಾರ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ಉಲ್ಲೇಖಿಸಿದ್ದಾರೆ.

‘ಇಸ್ಲಾಮಿಕ್ ಮೂವ್ ಮೆಂಟ್ ‘ ಪತ್ರಿಕೆಯ ಸಂಪಾದಕನಾಗಿದ್ದಾಗ ಭಾರತದಲ್ಲಿ ಹಲವಾರು ಪ್ರಚೋದನಕಾರಿ ಲೇಖನಗಳನ್ನು ಬರೆಡಿದ್ದ. ದೆಹಲಿಯ ಝಾಕಿರ್ ನಗರದಲ್ಲಿರುವ ಸಿಮಿ ಕೇಂದ್ರ ಕಚೇರಿಯಲ್ಲಿ ಶೇಖ್ ಗೆ ಕೊಠಡಿಯನ್ನೂ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next