Advertisement

ಪತ್ನಿ ಸಾವಿಗೆ ಕಾರಣವೆಂದು 18 ತಿಂಗಳು ಪತಿಗೆ ಜೈಲು: 6 ವರ್ಷದ ಬಳಿಕ 2ನೇ ಪತಿ ಜತೆ ಪತ್ನಿ ಪತ್ತೆ..!

12:48 PM Dec 12, 2022 | Team Udayavani |

ಉತ್ತರ ಪ್ರದೇಶ: ಪತ್ನಿಯ ಸಾವಿಗೆ ಕಾರಣವೆಂದು ಗಂಡನನ್ನು ಬಂಧಿಸಿದ ಆರು ವರ್ಷದ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮೃತಪಟ್ಟಿದ್ದಾಳೆ ಎನ್ನಲಾದ ಮಹಿಳೆ ಬೇರೊಬ್ಬರ ಜೊತೆ ಜೀವನ ಸಾಗಿಸುತ್ತಿರುವ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

Advertisement

ಘಟನೆ ಹಿನ್ನೆಲೆ: 2015 ರಲ್ಲಿ ಮೊದಲ ಬಾರಿ ಸೋನು ಸೈನಿ ಆರತಿ ದೇವಿ ಎನ್ನುವವರನ್ನು ದೇವಸ್ಥಾನವೊಂದರಲ್ಲಿ ನೋಡುತ್ತಾರೆ. ಆ ಬಳಿಕ ಆರತಿ ಹಾಗೂ ಸೋನು ನಡುವೆ ಪ್ರೇಮಾಂಕುರವಾಗಿ ಅದೇ ವರ್ಷ ಆರತಿ ತನ್ನ ಮನೆಯವರಿಗೆ ತಿಳಿಸದೇ ಸೋನು ಅವರೊಂದಿಗೆ ಕೋರ್ಟಿ ನಲ್ಲಿ ಮದುವೆಯಾಗಿದ್ದರು.

ಇದಾದ ಒಂದು ದಿನ ಆರತಿ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದಾರೆ. ಮಗಳ ಕುರಿತು ವೃಂದಾವನ್‌ ಠಾಣೆಯಲ್ಲಿ ತಂದೆ ಸೂರಜ್‌ ಪ್ರಕಾಶ್‌ ಗುಪ್ತಾ ದೂರು ಕೊಡುತ್ತಾರೆ. ಅದೇ ವೇಳೆ ಊರಿನಲ್ಲಿ ಮಹಿಳೆಯೊಬ್ಬರ ದೇಹ ಪತ್ತೆಯಾಗುತ್ತದೆ. ಇದು ತನ್ನ ಮಗಳದೆಂದು ಪೊಲೀಸರ ಬಳಿ ಆರತಿಯ ತಂದೆ ಹೇಳಿ, ಕೃತ್ಯವೆಸಗಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದರು.

ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸಿ 2016 ರಲ್ಲಿ ಆರತಿಯ ಪತಿ ಹಾಗೂ ಆತನ ಸ್ನೇಹಿತ ಗೋಪಾಲ್‌ ರನ್ನು ಬಂಧಿಸಿದ್ದರು.  ಪ್ರಕರಣವನ್ನು ಬೇಧಿಸಿದ ತಂಡಕ್ಕೆ 15 ಸಾವಿರ ನಗದು ಕೂಡ ಸಿಗುತ್ತದೆ. 18 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಿದ ಬಳಿಕ ಕೋರ್ಟ್‌ ಆರೋಪಿಗಳಿಗೆ ಜಾಮೀನು ನೀಡಿತ್ತು.

ಸೋನು ಹಾಗೂ ಆತನ ಸ್ನೇಹಿತ ಮೃತ ಪಟ್ಟಿದ್ದಾಳೆಂದು ಹೇಳಿರುವ ಆರತಿಗಾಗಿ ಹುಡುಕಾಟ ನಡೆಸಲು ಆರಂಭಿಸುತ್ತಾರೆ. ಹೀಗೆ ಹುಡುಕಾಟ ನಡೆಸುತ್ತಿರುವಾಗ ಇತ್ತೀಚೆಗೆ ಅಂದರೆ ಆರು ವರ್ಷದ ಬಳಿಕ ಆರತಿ ರಾಜಸ್ಥಾನದಲ್ಲಿ ತನ್ನ ಎರಡನೇ ಪತಿಯೊಂದಿಗೆ ವಾಸವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಆ ಬಳಿಕ ಮಥುರಾ ಪೊಲೀಸರನ್ನು ಸಂಪರ್ಕಿಸಿ, ತನ್ನ ಪತ್ನಿ ಆರತಿ  ಜೀವಂತವಾಗಿದ್ದಾಳೆ. ಆಕೆ ಮದುವೆಯಾದ ಕೆಲವೇ ದಿನಗಳ ಬಳಿಕ ಆಸ್ತಿಯ ವಿಚಾರವಾಗಿ ನನ್ನೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದಳು ಎಂದು ಹೇಳಿದ ಬಳಿಕ ಪೊಲೀಸರು ರಾಜಸ್ಥಾನಕ್ಕೆ ತೆರಳಿ ಆರತಿಯನ್ನು ಬಂಧಿಸಿದ್ದಾರೆ.

Advertisement

ಬಂಧಿತ ಮಹಿಳೆಯಲ್ಲಿ ಎರಡು ಆಧಾರ್‌ ಕಾರ್ಡ್‌ ಇದೆ ಅದರಲ್ಲಿ ಬೇರೆ ಬೇರೆ ಜನ್ಮ ದಿನಾಂಕವಿದೆ ಎಂದು ಪೊಲೀಸರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next