Advertisement

ಮೋದಿ ಜಗತ್ತಿನ ಜನಪ್ರಿಯ ನಾಯಕ: ಸಮೀಕ್ಷೆಯಲ್ಲಿ ಬಹಿರಂಗ

11:10 PM Feb 22, 2024 | Team Udayavani |

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತ್ಯಂತ ಜನಪ್ರಿಯ ನಾಯಕ ಎಂಬುದಕ್ಕೆ ಶೇ.78ರಷ್ಟು ಸಹಮತ ವ್ಯಕ್ತವಾಗಿದ್ದು, ಮೋದಿ ಮತ್ತೂಮ್ಮೆ ವಿಶ್ವದ ಅತ್ಯಂತ ಪ್ರಸಿದ್ಧ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದು ಮಾರ್ನಿಂಗ್‌ ಕನ್ಸಲ್ಟ್ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Advertisement

ಸಂಸ್ಥೆಯು ಜ.30ರಿಂದ ಫೆ.5ರವರೆಗೆ ಭಾರತ, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ 25 ರಾಷ್ಟ್ರಗಳ ವಯಸ್ಕರನ್ನೊಳಗೊಂಡ ಅಪ್ರೂವಲ್‌ ರೇಟಿಂಗ್ಸ್‌ ಸಮೀಕ್ಷೆ ನಡೆಸಿದೆ.

ಈ ವೇಳೆ ಪ್ರಧಾನಿ ಮೋದಿ  ಅತ್ಯಂತ ಜನಪ್ರಿಯ ನಾಯಕ ಎಂಬುದಕ್ಕೆ ಶೇ.78ರಷ್ಟು ಅಪ್ರೂವಲ್‌ ರೇಟಿಂಗ್‌ ದೊರೆತಿದೆ. ನಂತರದ ಸ್ಥಾನದಲ್ಲಿ ಶೇ.65ರ ರೇಟಿಂಗ್‌ನೊಂದಿಗೆ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೇಸ್‌ ಎಂ.ಎಲ್‌. ಒಬ್ರಾಡರ್‌ ಮತ್ತು ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್‌ ಮಿಲೀ ಶೇ.63ರ ರೇಟಿಂಗ್‌ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next