Advertisement

ದಿಲ್ಲಿಯಲ್ಲಿ ಇಂದಿನಿಂದ ಎರಡು ದಿನಗಳ ಅಂತಾರಾಷ್ಟ್ರೀಯ ಯೋಗ ಉತ್ಸವ

11:22 AM Mar 08, 2017 | Team Udayavani |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ  ಎರಡು ದಿನಗಳ ಅಂತಾರಾಷ್ಟ್ರೀಯ ಯೋಗ ಉತ್ಸವ ಇಂದು ಬುಧವಾರ ಆರಂಭಗೊಂಡಿದೆ.

Advertisement

ಈ ಯೋಗ ಉತ್ಸವದಲ್ಲಿ 3,500 ಮಂದಿ ಭಾಗಿಯಾಗುತ್ತಿದ್ದಾರೆ. ಯೋಗ ಗುರುಗಳು, ಯೋಗ ಮಾಸ್ಟರ್‌ಗಳು, ಪಂಡಿತರು, ನೀತಿ ನಿರೂಪಕರು ಮತ್ತು ಪ್ರತಿನಿಧಿಗಳು ಸೇರಿದಂತೆ 15ರಿಂದ 18 ದೇಶಗಳ ಯೋಗೋತ್ಸಾಹಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಯೋಗ ಪುಸ್ತಕಗಳ ಸುಮಾರು 50 ಸ್ಟಾಲ್‌ಗ‌ಳು ಈ ಉತ್ಸವದ ಪ್ರಮುಖ ಆಕರ್ಷಣೆ ಎನಿಸಿವೆ. ಯೋಗಕ್ಕೆ ಸಂಬಂಧಿಸಿದ ಸಿಡಿ, ಡಿವಿಡಿ, ಯೋಗ ಉಪಕರಣಗಳು, ಹಾಗೂ ಇನ್ನೂ ಹಲವು ಬಗೆಯ ಯೋಗ ಪರಿಕರಗಳು ಈ ಉತ್ಸವದಲ್ಲಿ ಯೋಗೋತ್ಸಾಹಿಗಳಿಗೆ ಉಪಲಬ್ಧವಿವೆ. 

ಇಬ್ಬರು ಪ್ರಮುಖ ಯೋಗ ಗುರುಗಳಾದ ಸ್ವಾಮಿ ವೇದ ಭಾರತಿ ಮತ್ತು ಟಿ ಕೆ ವಿ ದೇಶಿಕಾಚಾರ್‌ ಅವರ ಬದುಕು ಮತ್ತು ಕಾಣಿಕೆಗಳನ್ನು ಕುರಿತಂತೆ ಅರ್ಧ ದಿನದ ವಿಚಾರ ಸಂಕಿರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next