Advertisement

ಏಕತಾ ಪ್ರತಿಮೆಗೆ ಪ್ರತಿದಿನ 15,036 ಪ್ರವಾಸಿಗರ ಭೇಟಿ

10:14 AM Dec 08, 2019 | Sriram |

ನವದೆಹಲಿ: ಕಳೆದ ವರ್ಷ ಉದ್ಘಾಟನೆಯಾಗಿದ್ದ ಗುಜರಾತ್‌ನ ಏಕತಾ ಪ್ರತಿಮೆ ದಿನಕ್ಕೆ ಸುಮಾರು 15,036 ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Advertisement

ಇದು ಅಮೆರಿಕದ 133 ವರ್ಷಗಳಷ್ಟು ಹಳೆಯದಾದ ಲಿಬರ್ಟಿ ಪ್ರತಿಮೆಗೆ ಪ್ರತಿದಿನ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನೂ ಮೀರಿಸಿದೆ. ಈ ಪ್ರತಿಮೆಯನ್ನು ಪ್ರತಿದಿನ 10,000 ಪ್ರವಾಸಿಗರು ಸಂದರ್ಶಿಸುತ್ತಾರೆ ಎಂದು ಸರ್ದಾರ್‌ ಸರೋವರ ನರ್ಮದಾ ನಿಗಮ ಮಂಡಳಿ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ವಾರಾಂತ್ಯದಲ್ಲಿ ಏಕತಾ ಪ್ರತಿಮೆಯನ್ನು 22,430 ಜನರು ಸಂದರ್ಶಿಸುತ್ತಾರೆ. 2018ರ ನ.1ರಂದು ಪ್ರತಿಮೆ ಉದ್ಘಾಟನೆಗೊಂಡಿತ್ತು. 2019ರ ಅ.3ರ ವೇಳೆಗೆ ಸಂದರ್ಶಕರ ಸಂಖ್ಯೆಯಲ್ಲಿ ಶೇ.74 ಹೆಚ್ಚಳವಾಗಿದೆ. ಇದರ ಜೊತೆಗೆ, ಜಂಗಲ್‌ ಸಫಾರಿ, ಕ್ಯಾಕ್ಟಸ್‌ ಪಾರ್ಕ್‌, ಬಟರ್‌ಫ್ಲೈ ಗಾರ್ಡನ್‌, ರಿವರ್‌ ರಾಫ್ಟಿಂಗ್‌ ಮುಂತಾದ ಆಕರ್ಷಣೆಗಳೂ ಪ್ರತಿಮೆ ಬಳಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next