Advertisement

ಮಾಜಿ ಪ್ರಧಾನಿ, ವಿಶ್ವ ಪ್ರಸಿದ್ಧ ಆರ್ಥಿಕ ತಜ್ಞನಿಗೆ 87ನೇ ಜನ್ಮದಿನದ ಸಂಭ್ರಮ

09:56 AM Sep 27, 2019 | Hari Prasad |

ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಜನರಿಂದ ನೇರ ಆಯ್ಕೆಯಾಗದೇ ಸತತ ಎರಡು ಅವಧಿಗೆ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ ಖ್ಯಾತ ಆರ್ಥಿಕ ತಜ್ಞ, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜೀ ಗವರ್ನರ್ ಮತ್ತು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಎಂದೇ ಗುರುತಿಸಿಕೊಳ್ಳುತ್ತಿರುವ ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇಂದು 87ನೇ ವರ್ಷಕ್ಕೆ ಕಾಲಿರಿಸಿದರು.

Advertisement

ಈ ಸಂದರ್ಭದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರು ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಡಾ. ಮನಮೋಹನ್ ಸಿಂಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಮತ್ತು ಟ್ವಿಟ್ಟರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ದೇಶದ ಆರ್ಥಿಕ ಪ್ರಗತಿಗೆ ಡಾ. ಸಿಂಗ್ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಪೋಸ್ಟ್ ಗಳನ್ನು ಹಾಕುವ ಮೂಲಕ ವಿಶ್ವದ ಮಹಾನ್ ಆರ್ಥಿಕ ತಜ್ಞನ ಜನ್ಮದಿನದಂದು ಅವರ ಸೇವೆಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.

ದೇಶ ವಿಭಜನೆಯ ಸಂದರ್ಭದಲ್ಲಿ ನಿರಾಶ್ರಿತರಾಗಿ ಭಾರತಕ್ಕೆ ಬಂದವರು, ಕೇಂಬ್ರಿಡ್ಜ್ ನಿಂದ ಪದವಿ ಪಡೆದವರು, ಆಕ್ಸ್ ಫರ್ಡ್ ನಲ್ಲಿ ಮಾಸ್ಟರ್ಸ್ ಪಡೆದುಕೊಂಡವರು, 1991ರ ಆರ್ಥಿಕ ಸುಧಾರಣೆಯ ರೂವಾರಿ, ವೇಗದ ಜಿಡಿಪಿ ಬೆಳವಣಿಗೆಯ ಕಾರಣೀಕರ್ತ, ಬಡತನ ನಿವಾರಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಸಾಧಕ, RTI, RTE, MNREGA, JnNURM, ಅಣು ಒಪ್ಪಂದ, ವಿಶೇಷ ಆರ್ಥಿಕ ವಲಯ, ರೈತರ ಸಾಲ ಮನ್ನಾ ಮೊದಲಾದ ಸುಧಾರಣಾ ಕ್ರಮಗಳ ನೇತಾರ – ಮಾತು ಮೀರಿದ ನಾಯಕನಿಗೆ ಜನ್ಮದಿನದ ಶುಭಾಶಯಗಳು ಎಂದು ಟ್ವಿಟ್ಟರಿಗರೊಬ್ಬರು ಮಾಡಿರು್ ಟ್ವೀಟ್ ಗಮನಸೆಳೆಯುವಂತಿದೆ.


‘ರಾಷ್ಟ್ರ ನಿರ್ಮಾಣದಲ್ಲಿ ತನ್ನ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ಗಮನಾರ್ಹ ಕೊಡುಗೆಯನ್ನು ಡಾ. ಮನಮೋಹನ್ ಸಿಂಗ್ ಅವರ ಜನ್ಮದಿನದ ಈ ಸಂದರ್ಭದಲ್ಲಿ ನಾವೆಲ್ಲಾ ನೆನಪಿಸಿಕೊಳ್ಳಬೇಕಾಗಿದೆ.’ ‘ಹಿರಿಯ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳು, ದೇವರು ಅವರಿಗೆ ಉತ್ತಮ ಆರೋಗ್ಯ ಹಾಗೂ ಸಂತೋಷವನ್ನು ನೀಡಲಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.


ಡಾ. ಮನಮೋಹನ್ ಸಿಂಗ್ ಅವರ ಆಡಳಿತಾವಧಿಯು ಭಾರತದ ಪಾಲಿಗೆ ಉತ್ತಮ ಆಡಳಿತದ ದಿನಗಳಾಗಿದ್ದವು. ಉತ್ತಮ, ಪ್ರಾಮಾಣಿಕ ನಾಯಕತ್ವವನ್ನು ಗುರುತಿಸುವುದನ್ನು ನಾವೆಂದೂ ಕಳೆದುಕೊಳ್ಳಬಾರದು ಎಂದು ಟ್ವಿಟ್ಟರಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

Advertisement


ತನ್ನ ಸರಳತೆಯ ಮೂಲಕ ಮನಮೋಹನ್ ಸಿಂಗ್ ಅವರು ನಮಗೆಲ್ಲರಿಗೂ ಉತ್ತಮ ಮಾದರಿಯೊಂದನ್ನು ಕೊಟ್ಟಿದ್ದಾರೆ ಮತ್ತು ‘ಕೆಲವು ಸಂದರ್ಭಗಳಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮೌನವೇ ಅತ್ಯುತ್ತಮ ವಿಧಾನ’ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ’ ಎಂದು ಭಾರತದ ಸಂಸದರು ಎಂಬ ಟ್ವಿಟ್ಟರ್ ಖಾತೆಯಲ್ಲಿ ಡಾ. ಸಿಂಗ್ ಅವರನ್ನು ನೆನಪಿಸಿಕೊಂಡು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಲಾಗಿದೆ.


ಡಾ, ಮನಮೋಹನ್ ಸಿಂಗ್ ಅವರ ಜನ್ಮದಿನದಂದು ಟ್ವಿಟ್ಟರ್ ನಲ್ಲಿ ಗಮನ ಸೆಳೆದ ಕೆಲವೊಂದು ಶುಭಾಶಯ ಟ್ವೀಟ್ ಗಳು ಇಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next