Advertisement
ಕೆಲಸ ಮಾಡುವ ಕಚೇರಿಗಳಲ್ಲಿ, ಮೆಟ್ರೋ ಸ್ಟೇಶನ್ ಗಳಲ್ಲಿ ಯುವಕರು ಇಂತಹ ಟ್ರೆಂಡ್‌ಗಳನ್ನು ಕಾಣಬಹುದಾಗಿದೆ. ಟ್ರೆಂಡಿನ ಜತೆಗೆ ಇದೊಂದು ಸುಲಭ ವಿಧಾನವಾಗಿದ್ದು, ಬಹಳಷ್ಟು ಸಮಯವನ್ನೂ ಉಳಿಸುತ್ತದೆ. ಕುತ್ತಿಗೆಗೆ ಹಾಕಿಕೊಳ್ಳುವಂಥ ವಿನ್ಯಾಸದ ನೆಕ್ ಬ್ಯಾಂಡ್‌ಗಳು ಗಮನ ಸೆಳೆಯುತ್ತಿವೆ. ಈ ಬೇಡಿಕೆಯನ್ನು ಮನಗಂಡು ಬಹುತೇಕ ಇಯರ್‌ಫೋನ್ ತಯಾರಿಕಸಂಸ್ಥೆಗಳು ಆಕರ್ಷಕ ನೆಕ್‌ಬ್ಯಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.
ಗಳಿಗೆ ಹೋಲಿಸಿದರೆ, ತೀರಾ ಕಡಿಮೆ ದರದಲ್ಲಿ ದೊರೆಯುತ್ತದೆ. ಹಗುರ ತೂಕದ, ಬ್ಲೂಟೂತ್ ಮೂಲಕ ಮೊಬೈಲ್ ಫೋನ್ ಸಂಪರ್ಕಿಸಿ ಹಾಡುಗಳನ್ನು ಆನಂದಿಸಲು, ಮೊಬೈಲ್ ಫೋನ್ ಕರೆ ಮಾಡಲು ಮತ್ತು ಕರೆ ಸ್ವೀಕರಿಸಲು ಬಳಸಬಹುದಾಗಿದೆ. ಬೆವರು ಅಥವ ನೀರಿನ ಹನಿಗಳು ತಾಕಿದರೂ ಇವುಗಳು ಕೆಲಸಮಾಡುತ್ತದೆ. ವಾಕಿಂಗ್ ವರ್ಕೌಟ್ ವಯರ್‌ಲೆಸ್ ಯುಗದಲ್ಲಿ ನೆಕ್‌ಬ್ಯಾಂಡ್ ವರ್ಕೌಟ್, ವೇಳೆಯೂ ಇದನ್ನು ಬಳಸಬಹುದಾಗಿದೆ.
Related Articles
ಫೋನ್‌ಗಳಿಗೆ ಎರಡು ಫೋನ್‌ಗಳನ್ನು ಕನೆಕ್ಟ್ ಮಾಡಬಹುದಾದ ಡ್ಯುಯಲ್ ಪೇರಿಂಗ್‌ಯೂ
ಇದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಯಲ್ ಇಂಟಲಿಜೆನ್ಸಿ) ತಂತ್ರಜ್ಞಾನವನ್ನು ಬೆಂಬಲಿಸುವ ಡಿಜಿಟಲ್ ವಾಯ್ಸ್ ಅಸಿಸ್ಟೆಂಟ್ ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ. ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ, ಆ್ಯಪಲ್ ಸಿರಿ ಧ್ವನಿ ಸಹಾಯಕವನ್ನೂ ಇವುಗಳು ಬೆಂಬಲಿಸುತ್ತದೆ.
Advertisement
ಸೇಫ್ ಯೂಸ್ಅಯಸ್ಕಾಂತೀಯ ಇಯರ್ ಫಿಸ್‌ಗಳು ಇರುವುದರಿಂದ ನೆಕ್ ಬ್ಯಾಂಡ್‌ಗಳು ಹೆಚ್ಚು ಸುರಕ್ಷಿತವಾಗಿವೆ. ಕುತ್ತಿಗೆಯಿಂದ ಕೆಳಗೆ ಬೀಳುವುದು, ಕಳೆದು ಹೋಗುವುದು ತುಂಬಾ ವಿರಳ. ಬ್ಲೂಟೂತ್ 5.0 ಆವೃತ್ತಿಯ ಬೆಂಬಲದೊಂದಿಗೆ, ಹಗುರ ತೂಕವನ್ನು ಇವುಗಳು ಹೊಂದಿರುತ್ತವೆ. ಉತ್ತಮ ಬ್ಯಾಟರಿ ವ್ಯವಸ್ಥೆಯೂ ಇದ್ದು, ಕಡಿಮೆ ಎಂದರೆ ಒಮ್ಮೆ ಚಾರ್ಜ್ ಮಾಡಿದ 18 ತಾಸುಗಳು ಬಳಸಬಹುದಾಗಿದೆ. ಸಂಪೂರ್ಣ ಚಾರ್ಜ್ ಆಗಲು ಸುಮಾರು 1 ರಿಂದ 2 ಗಂಟೆಗಳು ಬೇಕಾಗುತ್ತದೆ. ಆನ್ ಆಫ್
ರಿಯಲ್ ಮೀ ಮತ್ತು ವನ್‌ಪ್ಲಸ್‌ನಂತಹ ನೆಕ್‌ಬ್ಯಾಂಡ್ ಗಳಲ್ಲಿ ಪವರ್ ಆನ್-ಆಫ್ ಬಟನ್‌ಗಳಿಲ್ಲ. ಅದರ ಬದಲು ಇಯರ್ ಬಡ್ಸ್‌ನಲ್ಲಿ ಅವುಗಳನ್ನು ನಿಯಂತ್ರಿಸಬಹುದಾಗಿದೆ. ಎರಡು ಬಡ್‌ಗಳು ಅಂಟಿಕೊಂಡರೆ ಆಫ್ ಆಗಲಿದ್ದು, ಬೇರ್ಪಟ್ಟರೆ ಆನ್ ಆಗಲಿವೆ. ಧ್ವನಿ ಔಟ್‌ಫುಟ್ ಕೂಡ ಚೆನ್ನಾಗಿದೆ. ವಾಲ್ಯುಮ್‌ಗಳನ್ನು ಮತ್ತು ಹಾಡುಗಳನ್ನು ಬಟನ್‌ಗಳಲ್ಲಿಯೂ ನಿರ್ವಹಿಸಬಹುದಾಗಿದೆ. ಇಂದು
ಎಂಎನ್‌ಸಿ ಕಂಪೆನಿಗಳಲ್ಲಿ ಕೆಲಸ ಮಾಡುವವರು ಇಂತಹ ಹೆಡ್‌ಫೋನ್‌ಗಳನ್ನು ಧರಿಸುವುದು ಟ್ರೆಂಡ್ ಆಗಿವೆ.