ನವ ದೆಹಲಿ : ಆಸ್ಟ್ರೇಲಿಯಾ ಮೂಲದ ಸೈಬರ್ ಸೆಕ್ಯುರಿಟಿ, ಡೆವೊಪ್ಸ್ ಮತ್ತು ಗುಣಮಟ್ಟದ ಎಂಜಿನಿಯರಿಂಗ್ ಸೇವೆ ಒದಗಿಸುವ ಕಂಪನಿ ಆ್ಯಂಪಿಯಾನ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ ಎಂದು ಸಾಫ್ಟ್ ವೇರ್ ದೈತ್ಯ ವಿಪ್ರೋ ಲಿಮಿಟೆಡ್ ಪ್ರಕಟಿಸಿದೆ.
ಈ ಒಪ್ಪಂದವು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಲು ಪ್ರಮಾಣದ ಮತ್ತು ಮಾರುಕಟ್ಟೆ ವೇಗವನ್ನು ಚುರುಕುಗೊಳಿಸುವ ಗುರಿಯನ್ನು ಹೊಂದಿದೆ. ಜೂನ್ 30 ರೊಳಗೆ ಈ ಒಪ್ಪಂದ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಓದಿ : ಉಪ್ಪಿ ‘ಕಬ್ಜ’ದಲ್ಲಿ ಹೊಸ ಲೋಕ: ಅದ್ಧೂರಿ ಮೇಕಿಂಗ್‌ನಲ್ಲಿ ಚಂದ್ರು ಸಿನಿಮಾ
ಕಂಪನಿಯು ತನ್ನ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ, “ಐಟಿ ಸೇವಾ ಪೂರೈಕೆದಾರರಾದ ‘ರೆವಲ್ಯೂಷನ್ ಐಟಿ(Revolution IT)’ ಮತ್ತು ‘ಶೆಲ್ಡೆ(shelde)’ ವಿಲೀನದ ಮೂಲಕ ಆ್ಯಂಪಿಯಾನ್ ರೂಪುಗೊಂಡಿತ್ತು. ರೆವಲ್ಯೂಷನ್ ಐಟಿ ಆಸ್ಟ್ರೇಲಿಯಾದಲ್ಲಿ ಐಟಿ ಸೇವೆಗಳ ಕಂಪನಿಯಾಗಿದ್ದು 2004 ರಲ್ಲಿ ಸ್ಥಾಪನೆಯಾಯಿತು ಮತ್ತು ಶೆಲ್ಡೆ ಡಿಜಿಟಲ್ ಐಟಿ ಭದ್ರತಾ ಕಂಪನಿಯಾಗಿದೆ ವಿಲೀನಗೊಂಡ ಘಟಕವಾದ ಆ್ಯಂಪಿಯಾನ್ ಮೆಲ್ಬೋರ್ನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.
ವಿಪ್ರೋದ ಹೊಸ ಆಪರೇಟಿಂಗ್ ಮಾದರಿಯು ಫೋಕಸ್ ಜೀವೋಗ್ರಾಫಿಕ್ಸ್, ಪ್ರಾಕ್ಸಿಮಿಟಿ ಟು ಕಸ್ಟಮರ್, ಸ್ಕೇಲ್ ಆ್ಯಂಡ್ ಲೋಕಲೈಸೇಶನ್ ಕಾರ್ಯತಂತ್ರದ ಹೂಡಿಕೆಗಳಿಗೆ ಒತ್ತು ನೀಡುತ್ತದೆ. ಆ್ಯಂಪಿಯಾನ್ ಅನ್ನು ಸ್ವಾಧೀನಪಡಿಸಿಕೊಳ್ಳುವುದು ಈ ದಿಕ್ಕಿನಲ್ಲಿ ವಿಪ್ರೊಗೆ ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿನ ಗ್ರಾಹಕರು ಬಗೆಗಿನ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ವರದಿ ಹೇಳಿದೆ.
ಓದಿ : ಪುಲ್ವಾಮಾದಲ್ಲಿ ಎನ್ ಕೌಂಟರ್: ಓರ್ವ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ