ನವ ದೆಹಲಿ : ದೇಶದ ಪ್ರಮುಖ ದೈತ್ಯ ಐಟಿ ಕಂಪೆನಿ ವಿಪ್ರೋ ಮತ್ತೊಂದು ಮೈಲಿಗಲ್ಲನ್ನು ದಾಟಿದೆ. ವಿಪ್ರೋ ಷೇರು ಬಿಎಸ್‌ಇನಲ್ಲಿ 486.70 ರೂ. ಶುಕ್ರವಾರ ಏರಿಕೆಗೊಂಡ ಪರಿಣಾಮವಾಗಿ ವಿಪ್ರೋ ಮಾರುಕಟ್ಟೆ ಕ್ಯಾಪ್ ಹೆಚ್ಚಾಗಿ, ದೇಶದ ಮೂರನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ.
ಹೌದು, ದೇಶದ ಅತ್ಯಂತ ದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋ ಮತ್ತೊಂದು ಐಟಿ ಕಂಪನಿ ಎಚ್ ಸಿ ಎಲ್ ಟೆಕ್ ನನ್ನು ಹಿಂದಿಕ್ಕಿದೆ.
ಓದಿ : ವೀಕೆಂಡ್ ಕರ್ಫ್ಯೂ: ಮಾಂಸದಂಗಡಿಗಳಲ್ಲಿ ಫುಲ್ ರಶ್, ಇನ್ನು ರಸ್ತೆಗಿಳಿದರೆ ಬೀಳುತ್ತೆ ಲಾಠಿ ಏಟು
ವಿಪ್ರೋ ಷೇರು ಬಿ ಎಸ್ ಇ ಯಲ್ಲಿ 486.70 ರೂಪಾಯಿ .ಇದರ ಪರಿಣಾಮವಾಗಿ ಕಂಪನಿಯು 2.65 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಈ ಮೂಲಕ ಐಟಿ ದೈತ್ಯ ವಿಪ್ರೊ ಮತ್ತೊಂದು ಐಟಿ ಕಂಪನಿ ಎಚ್ ಸಿಎಲ್ ಟೆಕ್ ಅನ್ನು ಮೀರಿದೆ.
ಸುಮಾರು ಹದಿನೆಂಟು ತಿಂಗಳ ನಂತರ ಕಂಪನಿಯು ಟೆಕ್ ಕಂಪನಿಗಳಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆಯಿತು. ಅಕ್ಟೋಬರ್ 22, 2019 ರ ಹೊತ್ತಿಗೆ, ಎಚ್‌ಸಿಎಲ್ ಟೆಕ್ 1.44 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಕ್ಯಾಪ್ ಹೊಂದಿದ್ದರೆ, ವಿಪ್ರೊ 1.45 ಲಕ್ಷ ಕೋಟಿ ರೂ. ನಷ್ಟಿದೆ. ಆದರೆ ಮಾರ್ಚ್ ನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಎಚ್ ಸಿ ಎಲ್ ಕಂಪನಿಯ ನಿವ್ವಳ ಲಾಭದಲ್ಲಿ ಶೇ. 6.1ರಷ್ಟು ಇಳಿಕೆಯಾಗಿದೆ. ಹಿಂದಿನ ವರ್ಷದಲ್ಲಿ ಮಾರ್ಚ್ ತ್ರೈಮಾಸಿಕದಲ್ಲಿ 3,154 ಕೋಟಿ ನಿವ್ವಳ ಲಾಭಗಳಿಸಿತ್ತು.
ಓದಿ : ಸಿರೋ ಸಮೀಕ್ಷೆ : ಕೋವಿಡ್ ವಿರುದ್ಧ ಹೋರಾಡಲು ಮಹಿಳೆಯರಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಇದೆ!