Advertisement

ಪ್ರಸಿದ್ಧ ಟೆಕ್‌ ಕಂಪನಿಯಾದ ವಿಪ್ರೋದಲ್ಲಿ 300 ಮೂನ್‌ಲೈಟ್‌ ಸಿಬ್ಬಂದಿ!

07:02 PM Sep 21, 2022 | Team Udayavani |

ನವದೆಹಲಿ: ಪ್ರಸಿದ್ಧ ಟೆಕ್‌ ಕಂಪನಿಯಾದ ವಿಪ್ರೋದಲ್ಲಿ 300 ಸಿಬ್ಬಂದಿ ಬೇರೆ ಬೇರೆ ಸಂಸ್ಥೆಗಳೊಂದಿಗೂ ಕೆಲಸ ಮಾಡುತ್ತಿರುವುದು ಕಂಡುಬಂದಿದೆ ಎಂದು ಸಂಸ್ಥೆಯ ಮುಖ್ಯಸ್ಥ ರಿಶದ್‌ ಪ್ರೇಮ್‌ಜಿ ತಿಳಿಸಿದ್ದಾರೆ.

Advertisement

“ಈ ರೀತಿ ಮೂನ್‌ಲೈಟ್‌ ಕೆಲಸ ಮಾಡುವುದು ಸಂಸ್ಥೆಯ ಸಮಗ್ರತೆಗೆ ಆಳವಾಗಿ ಪೆಟ್ಟು ನೀಡುತ್ತದೆ. ಮೂನ್‌ಲೈಟ್‌ ಕೆಲಸ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮ ಪ್ರತಿಸ್ಪರ್ಧಿ ಸಂಸ್ಥೆಗಳೊಂದಿಗೇ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಹಾಕಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಒಂದು ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ, ಮತ್ತೂಂದು ಕಂಪನಿಯ ಪ್ರಾಜೆಕ್ಟ್ ಪಡೆಯುವಂಥ ವ್ಯವಸ್ಥೆಗೆ “ಮೂನ್‌ಲೈಟ್‌’ ಎನ್ನುತ್ತಾರೆ. ಈ ರೀತಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇತ್ತೀಚೆಗೆ ಇನ್ಫೋಸಿಸ್‌ ಕೂಡ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next