Advertisement

ಹಾಲಿ ಸಂಸತ್‌ ಭವನದಲ್ಲೇ ಚಳಿಗಾಲದ ಅಧಿವೇಶನ

11:55 PM Nov 11, 2022 | Team Udayavani |

ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಮುಂದಿನ ತಿಂಗಳ ಮೊದಲ ವಾರ ಆರಂಭವಾಗುವ ಸಾಧ್ಯತೆ ಇದೆ.

Advertisement

ಡಿ. 31ರಂದು ಅದು ಮುಕ್ತಾಯ ಗೊಳ್ಳಲಿದೆ ಎಂದು ಹೇಳಲಾಗಿದೆ. ಸಂಸತ್‌ ಭವನದ ಹೊಸ ಕಟ್ಟಡದ ಕಾಮಗಾರಿ ಪೂರ್ತಿಯಾಗದಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಸಂಸತ್‌ ಭವನದಲ್ಲಿಯೇ ಕಲಾಪಗಳು ನಡೆಯಲಿವೆ.

ಸಂಸದೀಯ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಶೀಘ್ರದಲ್ಲಿಯೇ ಸಭೆ ಸೇರಿ ಚಳಿಗಾಲದ ಅಧಿವೇಶನದ ದಿನಾಂಕಗಳನ್ನು ಅಂತಿಮಪಡಿಸಲಿದೆ. 1,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಹೊಸ ಸಂಸತ್‌ ಭವನದ ಕಾಮಗಾರಿ ಇನ್ನೂ ಮುಕ್ತಾಯ ಗೊಂಡಿಲ್ಲ. ಇದರ ಹೊರತಾಗಿಯೂ ಮಾಸಾಂತ್ಯ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಅದನ್ನು ಸಾಂಕೇತಿಕ ವಾಗಿ ಉದ್ಘಾಟನೆ ಮಾಡುವ ಬಗ್ಗೆಯೂ ಕೇಂದ್ರ ಸರಕಾರ‌ ಚಿಂತನೆ ನಡೆಸಿದೆ.

ಮುಂದಿನ ವರ್ಷದ ವೇಳೆಗೆ ಹೊಸ ಸಂಸತ್‌ ಭವನದ ಕಾಮಗಾರಿ ಮುಕ್ತಾಯ ಗೊಳ್ಳಲಿದೆ. ಫೆ. 1ರಂದು ನಡೆಯಲಿರುವ ಬಜೆಟ್‌ ಅಧಿವೇಶನ ಹೊಸ ಸಂಸತ್‌ ಭವನದಲ್ಲಿಯೇ ನಡೆಯುವ ಸಾಧ್ಯತೆ ಇದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next