Advertisement

ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನಮಂಡಲ ಚಳಿಗಾಲ ಅಧಿವೇಶನ: ಬಸವರಾಜ ಹೊರಟ್ಟಿ

05:11 PM Oct 06, 2021 | Team Udayavani |

ಹುಬ್ಬಳ್ಳಿ: ವಿಧಾನಮಂಡಲ ಚಳಿಗಾಲ ಅಧಿವೇಶನ ಡಿಸೆಂಬರ್ ಎರಡನೇ ವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲು ಸರಕಾರ ತೀರ್ಮಾನಿಸಿದೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಚರ್ಚೆ ಯಾಗಿದೆ. ಕಳೆದ ಮೂರು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ ಎಂದರು.

ಎರಡು ವಾರಗಳವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ವಿಷಯ ಹಾಗೂ ಸಮಸ್ಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುವಂತಾಗಲು ಆದ್ಯತೆ ನೀಡಲಾಗುತ್ತಿದೆ. ಈ ಕುರಿತಾಗಿ ತಾವು ಸೇರಿದಂತೆ ಸ್ಪೀಕರ್, ಮುಖ್ಯಮಂತ್ರಿ, ಉಭಯ ಸದನಗಳ ವಿಪಕ್ಷ ನಾಯಕರು, ಸಭಾನಾಯಕರ ವಿಧನಮಂಡಲ ಜಂಟಿ ಬಿಜಿನೆಸ್ ಕಮಿಟಿ ಸಭೆ ಕರೆಯಲು ತಿಳಿಸಲಾಗಿದೆ ಎಂದರು.

ಸದನವನ್ನು ಶಿಸ್ತುಬದ್ದವಾಗಿ ನಡೆಸಲು ಯೋಜಿಸಲಾಗಿದೆ.ಅದೇ ರೀತಿ ಈ ಭಾಗದ ವಿಷಯಗಳ ಚರ್ಚೆಗೆ ಅನುವಾಗುವಂತೆ ನೋಡಬೇಕೆಂದು ಉಭಯ ಸದನಗಳ ವಿಪಕ್ಷ ನಾಯಕರಿಗೆ ಮನವಿ ಮಾಡಲಾಗಿದೆ ಎಂದರು.

ದೇವಸ್ಥಾನಗಳ ಮಸೂದೆ ಪರಿಷತ್ತು ನಲ್ಲಿ  ಅಂಗೀಕಾರವಾದರು ನಾನು ಸಹಿ ಹಾಕಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದು ತಿಳಿದಿದ್ದೇನೆ. ಅಂದು ತಡರಾತ್ರಿ 1:00 ಗಂಟೆವರಗೂ ನಡೆದಿತ್ತು. ತಡವಾಗಿದ್ದರಿಂದ ಸಹಿ ಹಾಕಿರಲಿಲ್ಲ. ಗುರುವಾರ ಬೆಂಗಳೂರಿಗೆ ಹೋದ ನಂತರ ಸಹಿ ಹಾಕುವೆ ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೊರಟ್ಟಿ ಅವರು ಸ್ಪಷ್ಟ ಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next