Advertisement
ಬದುಕು ಯಾವತ್ತೂ ಕೂಡ ಗೆದ್ದವರ ಪಾಲು! ಸೋತವರಿಗೆ ಒಂದು ಸಮಾಧಾನ ಹೇಳಿ ಮತ್ತೆ ಹೋಗಿ ನಿಲ್ಲುವುದು ಗೆದ್ದವರ ಬಳಿಯೇ! ಅದಕ್ಕೆಂದೇ ಪ್ರತಿಯೊಬ್ಬರೂ ಒಂದು ಗೆಲುವಿಗಾಗಿ ತುಡಿಯುತ್ತಾರೆ. ಸೋಲು, ಗೆಲುವು ಎಂಬುವು ಇವೆಯಾದರೂ ಒಂದು ಸೋಲು ಕೂಡ ಗೆಲುವಿಗಾಗಿ ಕಾಯುತ್ತದೆ. ಗೆಲುವು ಮತ್ತೆಂದೂ ಸೋಲಿನ ಕಡೆ ಮುಖ ಮಾಡದೇ ಅದನ್ನೆ ಕಾಪಾಡಿಕೊಳ್ಳಲು ಹೆಣಗುತ್ತದೆ.
Related Articles
ನೀವು ನಿಮ್ಮ ಕಲಿಕೆಯಲ್ಲಿ ಯಾವ ಮೆಟ್ಟಿಲಲ್ಲಿದ್ದೀರಿ? ನಿಮಗೆ ಓಕೆ ಅನಿಸಿದೆಯಾ? ಏನನ್ನು ಕಲಿಯಬೇಕು ಅಷ್ಟನ್ನೇ ಕಲಿಯಲು ಸಮಯ ಸಾಕಾಗಿ ನೀವು ಸುಸ್ತಾಗಿ ಹೋಗುತ್ತೀರಾ? ಹಾಗಾದರೆ, ಗೆಲುವು ಕಷ್ಟವೇ! ಒದಗಿದ ಸಮಯದಲ್ಲಿ ಇರುವುದನ್ನು ಬೇಗ ಕಲಿತು ಮತ್ತೂಂದಿಷ್ಟನ್ನು ಮೈಮೇಲೆ ಎಳೆದುಕೊಳ್ಳಬೇಕು. ಉದಾ: ಬರೀ ಪಠ್ಯವನ್ನು ಓದುವುದು ಕಲಿಯಾಗಬಾರದು, ಅದರಾಚೆಯ ಓದಿಗೂ ಜೊತೆಯಾಗಬೇಕು.
Advertisement
2. ವಾಸ್ತವತೆ ಗೊತ್ತಾ?ನಾವು ಬರೀ ಕಲ್ಪನೆಗಳಲ್ಲೇ ಕಳೆದು ಹೋಗುತ್ತೇವೆ! ಅತೀ ಕಲ್ಪನೆ ನಿಮ್ಮನ್ನು ಸೋಮಾರಿಯನ್ನಾಗಿಸಬಹುದು. ಬದುಕು ಬರೀ ಥಿಯರಿ ಅಲ್ಲ, ಅದು ಪ್ರಾಕ್ಟಿಕಲ್! ಪ್ರಚಲಿತ ವಿದ್ಯಮಾನಗಳನ್ನು ಅ ರಿ ತು, ಅದರಂತೆ ಸಾಗಬೇಕು. 3. ನಿಮ್ಮ ಆದ್ಯತೆಗಳೇನು?
ನಿಮ್ಮ ಆದ್ಯತೆಗಳ ಬಗ್ಗೆ ನಿಮಗೆ ಅರಿವಿದೆಯಾ? ಗುರಿಯ ನ್ನು ಹಿಡಿದು ಹೊರಟಾಗ ಅದೇ ನಮಗೆ ಮೊದಲ ಆದ್ಯತೆ. ಅದಕ್ಕೆ ಸಹಾಯಕವಾಗಿ ನಿಲ್ಲುವವ ಮಾತ್ರ ನಿಮ್ಮ ಆದ್ಯತೆಯಲ್ಲಿರಬೇಕು. ಆ ಕ್ಷಣದಲ್ಲಿ ಒಂದು ಲವ್ವು, ಇನ್ಯಾವುದೊ ಕ್ಷೇತ್ರದಲ್ಲಿ ಕೈ ತೂರಿಸಿಕೊಂಡು ಕೂತರೆ ಶ್ರಮ ಹಂಚಿಹೋಗುತ್ತದೆ. 4. ಕಾಸು, ಖರ್ಚು ಹೇಗಿದೆ?
ಹಣಬೇಕು, ನಿಜ. ಆದರೆ, ಹಣವೇ ಎಲ್ಲವೂ ಅಲ್ಲ. ಹಣವಿಲ್ಲದಿದ್ದರೂ ಆಗುವುದಿಲ್ಲ! ನಿಮಗೆ ಬೇಕಾದಷ್ಟನ್ನು ಮಾತ್ರ ಹೊಂದಿಸಿಕೊಳ್ಳಿ. ಹಣ ಮಾಡುವುದೇ ನಿಮ್ಮ ಗುರಿಯಾಗಿದ್ದರೂ ಆರಂಭದಲ್ಲಿ ಒಂದಿಷ್ಟದಾರೂ ನಿಮ್ಮ ಬಳಿ ಹಣವಿರಬೇಕು ಅಲ್ಲವೇ? ಹಣವಿಲ್ಲದೇ ಎಷ್ಟೊ ಮಂದಿ ತಮ್ಮ ಪ್ರಯತ್ನಗಳನ್ನು ಕೈಬಿಟ್ಟ ನಿ ದ ರ್ಶ ನ ಗ ಳಿ ವೆ. 5. ಎಷ್ಟು ಗಂಟೆಗೆ ಏಳ್ತೀರಿ?
ನೀವು ಮಾರ್ನಿಂಗ್ ಪರ್ಸನ್‌ಗಳಾಗದ ಹೊರತು ಸಾಧ ನೆ ದೂರ ವೇ. ಬೆಳಗ್ಗೆ ಬೇಗ ಎದ್ದು, ನಿಮ್ಮ ಸಾಧ ನೆ ಗಾ ಗಿ ಮಾಡು ವ ಒಂದು ಕೆಲ ಸ ನಿಮ್ಮನ್ನು ರಿಸ್ಟಾರ್ಟ್ ಮಾಡಿಸುತ್ತ ದೆ. 6. ಗುರಿಗಳಿಗೆ ಇಟ್ಟಿಗೆ ಇದೆಯೇ?
ನನ್ನ ಗೆಲುವಿಗಾಗಿ ಈ ದಿನವನ್ನು ಹೇಗೆ ದುಡಿಸಿಕೊಳ್ಳಬಲ್ಲೇ ಎಂಬುದರ ಬಗ್ಗೆ ಅನ್ನುವುದರ ಬಗ್ಗೆ ಪ್ರತಿದಿನದ ಆರಂಭದಲ್ಲಿ ಒಂದು ಪ್ಲಾನ್ ಸಿದ್ಧವಾಗಬೇಕು. ನಿಮ್ಮ ದೊಡ್ಡ ಗೆಲುವಿಗೆ ಪ್ರತಿದಿನ ಸಣ್ಣ ಸಣ್ಣ ಇಟ್ಟಿಗೆಗಳನ್ನು ಜೋಡಿಸಿಕೊಳ್ಳುತ್ತಲೇ ಹೋಗಬೇಕು. 7. ಮಾನಸಿಕವಾಗಿ ನೀವು ಸದೃಢರೇ?
ಒಂಟಿತನ, ಖನ್ನತೆ, ಉದ್ವೇಗ, ದ್ವಂದ್ವ ಇವೆಲ್ಲ ನಿಮನ್ನು ಆಳುತ್ತವೆಯಾ? ಹಾಗಾದರೆ, ಅಂದುಕೊಂಡಿದ್ದನ್ನು ಮಾಡಲಾರಿರಿ. ದೇಹದ ಆರೋಗ್ಯದಷ್ಟೇ ಮನಸಿನ ಆರೋಗ್ಯವೂ ಮುಖ್ಯ. ಇವುಗಳನ್ನು ಗೆಲ್ಲದ ಹೊರೆತು ಬೇರೆನೂ ಗೆಲ್ಲ ಬಲ್ಲಿರಿ? 8. ಸಹ ಸಂಬಂಧಗಳು ಹೇಗಿವೆ?
ಮುಂಗೋಪಿಯಾ? ರೇಗುತ್ತೀರಾ? ಬೆರೆಯುವಿಕೆ ಕಡಿಮೆಯಾ? ಇವೆಲ್ಲ ಕೊರತೆ ಇದ್ದರೆ, ಬಿಟ್ಟು ಬಿಡಿ. ಎಲ್ಲರೊಂದಿಗೆ ಬೆರೆಯುವ ಗುಣವಿರಬೇಕು. ಇನ್ನೊಬ್ಬರನ್ನು ಪ್ರಭಾವಿಸುವ ಕಲೆ ಇರಬೇಕು. ಕೊಡುವ ಮತ್ತು ತೆಗೆದುಕೊಳ್ಳುವ ವಿಷಯದ ಬಗ್ಗೆ ಗೊತ್ತಿರಬೇಕು. ಸ್ನೇಹ ಜೀವಿಯಾಗಿ. 9. ನೀವೇಷ್ಟು ಶುದ್ಧ?
ಯಾವ ಶುದ್ಧವೆಂದಿರೊ? ಮೈ ಶುದ್ಧವಲ್ಲ, ಮನಃ ಶುದ್ಧ! ನಿಮ್ಮಲ್ಲಿ ಕಪಟತನಗಳಿದ್ದರೆ ನೀಲು ಜಾಲಿಯ ಗಿಡಗಳಾಗಿ ಬಿಡುತ್ತೀರಿ. ನಿಮ್ಮ ಸಾಧನೆ ಅವುಗಳ ಮುಂದೆ ಸೊನ್ನೆಯಾಗುತ್ತದೆ. ಮೊದಲು ನೀವೆಷ್ಟು ಶುದ್ಧವೆನ್ನುವುದು ನಿಮಗೆ ಗೊತ್ತಾಗಲಿ. ಸದಾಶಿವ್ ಸೊರಟೂರು