Advertisement

ಹೊರಬಂತು ‘ವಿಂಡೋಸೀಟ್‌’ ಟ್ರೇಲರ್‌: ಸಾಥ್‌ ನೀಡಿದ ಕಿಚ್ಚ ಸುದೀಪ್

09:18 AM Jun 07, 2022 | Team Udayavani |

ನಿರೂಪ್‌ ಭಂಡಾರಿ ನಾಯಕ ನಟನಾಗಿ ಅಭಿನಯಿಸಿರುವ ರೊಮ್ಯಾಂಟಿಕ್‌-ಥ್ರಿಲ್ಲರ್‌ ಕಥಾಹಂದರದ “ವಿಂಡೋಸೀಟ್‌’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದೇ ಜುಲೈ 1ರಂದು “ವಿಂಡೋಸೀಟ್‌’ ತೆರೆಗೆ ಬರುತ್ತಿದ್ದು, ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಸೋಮವಾರ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ.

Advertisement

ನಟ ಕಿಚ್ಚ ಸುದೀಪ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ವಿಂಡೋಸೀಟ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. “ವಿಂಡೋಸೀಟ್‌’ ಟ್ರೇಲರ್‌ ಞಬಿಡುಗಡೆಯ ಬಳಿಕ ಮಾತನಾಡಿದ ನಿರ್ದೇಶಕಿ ಶೀತಲ್‌ ಶೆಟ್ಟಿ, “ಸಿನಿಮಾದ ಟೈಟಲ್‌ “ವಿಂಡೋಸೀಟ್‌’ ಅಂತ ಹೇಳಿದ ಕೂಡಲೇ ಟ್ರಾವೆಲ್‌ ಸ್ಟೋರಿ ಅಂತ ಭಾವಿಸಬೇಕಿಲ್ಲ. ಇದೊಂದು ರೊಮ್ಯಾಂಟಿಕ್‌ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. ಇದರಲ್ಲೊಂದು ಮರ್ಡರ್‌ ಮಿಸ್ಟರಿ, ಜೊತೆಗೊಂದು ತ್ರಿಕೋನ ಪ್ರೇಮಕಥೆ ಕೂಡ ಇದೆ. ಕೋವಿಡ್‌ ಕಾರಣದಿಂದ ಸಿನಿಮಾ ತೆರೆಗೆ ಬರೋದು ತಡವಾಯ್ತು. ಎಲ್ಲರ ಸಹಕಾರದಿಂದ ಪ್ರೇಕ್ಷಕರಿಗೆ ಇಷ್ಟವಾಗುವಂಥ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ವಿಂಡೋಸೀಟ್‌’ ಸಿನಿಮಾದಲ್ಲಿ ನಿರೂಪ್‌ ಭಂಡಾರಿ ನಾಯಕ ನಟನಾಗಿ ರಘು ಎಂಬ ಸಂಗೀತಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಎರಡನೇ ಬಾರಿಗೆ ಮಹಿಳಾ ನಿರ್ದೇಶಕರ ಜೊತೆ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ. ಸಿನಿಮಾದ ಸಬ್ಜೆಕ್ಟ್ ಮತ್ತು ನನ್ನ ಪಾತ್ರ ಎರಡೂ ಕೂಡ ಚೆನ್ನಾಗಿದೆ. ತುಂಬ ಎನರ್ಜಿಟಿಕ್‌ ಆಗಿರುವಂಥ ತಂಡದ ಜೊತೆಗೆ ಸಿನಿಮಾ ಮಾಡಿದ್ದು ಒಂದು ಒಳ್ಳೆಯ ಅನುಭವ’ ಎಂದರು.

ಇದನ್ನೂ ಓದಿ:ಟ್ವಿಟರ್‌ ಖರೀದಿಸುವುದಿಲ್ಲವಂತೆ ಎಲಾನ್‌ ಮಸ್ಕ್!

“ಕೆಎಸ್‌ಕೆ ಶೋ ರೀಲ್‌’ ಬ್ಯಾನರ್‌ನಲ್ಲಿ ಶಾಲಿನಿ ಮಂಜುನಾಥ್‌ ನಿರ್ಮಾಣ ಮಾಡಿರುವ “ವಿಂಡೋಸೀಟ್‌’ ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ವಿಘ್ನೇಶ್‌ ರಾಜ್‌ ಛಾಯಾಗ್ರಹಣ, ಪ್ರದೀಪ್‌ ರಾವ್‌ ಸಂಕಲನವಿದೆ.

Advertisement

ಚಿತ್ರದಲ್ಲಿ ಅಮೃತಾ ಅಯ್ಯಂಗಾರ್‌, ಸಂಜನಾ ಆನಂದ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್‌, ಮಧುಸೂದನ ರಾವ್‌, ಲೇಖಾ ನಾಯ್ಡು, ಸೂರಜ್‌ ಮತ್ತಿತರರು “ವಿಂಡೋಸೀಟ್‌’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಾಗರ, ತಾಳಗುಪ್ಪ, ಹೈದರಾಬಾದ್‌ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಬಿಡುಗಡೆಯಾಗಿರುವ “ವಿಂಡೋಸೀಟ್‌’ ಟ್ರೇಲರ್‌ ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಥಿಯೇಟರ್‌ನಲ್ಲಿ ಸಿನಿಮಾ ಹೇಗಿರಲಿದೆ ಅನ್ನೋದಕ್ಕೆ ಜುಲೈ 1ರಂದು ಉತ್ತರ ಸಿಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next