Advertisement

ಬೆಳ್ತಂಗಡಿಗೆ 3500 ಕೋ.ರೂ.ಅನುದಾನ ತಂದ ಪೂಂಜಾರನ್ನು 60 ಸಾವಿರ ಮತಗಳಿಂದ ಗೆಲ್ಲಿಸಿ

04:48 PM May 07, 2023 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರಕ್ಕೆ 3500 ಕೋಟಿ ರೂ.ನಷ್ಟು ಬೃಹತ್‌ ಅನುದಾನ ತಂದು ಅಭಿವೃದ್ಧಿಗೆ ಕಾರಣರಾದ ಸೋದರ ಹರೀಶ್‌ ಪೂಂಜಾರನ್ನು 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ವಿಜಯಮಾಲೆ ತೊಡಿಸುವುದೇ ನಮ್ಮ ಸಂಕಲ್ಪವಾಗಬೇಕು ಎಂದು ಅಸ್ಸಾಂನ ಮುಖ್ಯಮಂತ್ರಿ ಡಾ|ಹಿಮಂತ ಬಿಸ್ವ ಶರ್ಮ ಕರೆ ನೀಡಿದರು.

Advertisement

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಅವರ ಚುನಾವಣ ಪ್ರಚಾರದ ಪ್ರಯುಕ್ತ ಶನಿವಾರ ಉಜಿರೆಯಲ್ಲಿ ನಡೆದ ಬƒಹತ್‌ ರೋಡ್‌ ಶೋನಲ್ಲಿ ಭಾಗವಹಿಸಿ ಮಾತನಾಡಿದರು.

ಶಾಸಕ ಹರೀಶ್‌ ಪೂಂಜರ ಪರ ಎಲ್ಲೆಲ್ಲೂ ಶ್ಲಾಘನೆ ಕೇಳಿಬರುತ್ತಿದೆ. ನಾನು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದಾಗ ಬೆಳ್ತಂಗಡಿಯಂತ ಸಣ್ಣ ಹಳ್ಳಿಯಲ್ಲೂ ಒಂದು ಮಿನಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಯತ್ನವಾಗುತ್ತಿದೆ ಎಂದು ಕೇಳಲ್ಪಟ್ಟೆ. ಯುವ ನಾಯಕನಾಗಿ ಕೇವಲ ಐದು ವರ್ಷಗಳಲ್ಲಿ 3500 ಕೋ.ರೂ. ಅನುದಾನ ತರುವ ಮೂಲಕ ಇಷ್ಟು ದೊಡ್ಡ ಅಭಿವೃದ್ಧಿಯಾಗಿದೆ. ಮುಂದೆ ನೀವು ಅವಕಾಶ ಕಲ್ಪಿಸಿದಲ್ಲಿ ದೇಶವೇ ಗಮನ ಸೆಳೆಯುವ ಸಾಧನೆ ಮಾಡಲು ನಿಮ್ಮ ಆಶೀರ್ವಾದ ಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್‌ 70 ವರ್ಷದಿಂದ ಗ್ಯಾರಂಟಿ ನೀಡುತ್ತಾ ಬಂದಿದೆ. ಆದರೆ ಯಾವುದಾದರು ಅಭಿವೃದ್ಧಿ ಆಗಿದೆಯಾ? ರಾಹುಲ್‌ ಗಾಂಧಿಯಾಗಲಿ ಸೋನಿಯಾ ಗಾಂಧಿಯಾಗಲಿ ಅವರ ಆಚಾರ ವಿಚಾರ ನಡೆ ನುಡಿ ಕಂಡಾಗ ಅವರದೇ ಗ್ಯಾರಂಟಿ ಅವರಿಗಿಲ್ಲ, ಇನ್ನು ಜನಸಾಮಾನ್ಯರಿಗೆ ಯಾವ ಗ್ಯಾರಂಟಿ ನೀಡಿಯಾರು. ಇವರು ಕೇವಲ ಮುಸಲ್ಮಾನ ಓಲೆ„ಕೆಗಾಗಿ ಅಲ್ಪಸಂಖ್ಯಾತರಿಗೆ ಎಂಬ ಹೆಸರಿನಲ್ಲಿ ಮೀಸಲಾತಿಯನ್ನು ನೀಡಿ ಬಹುಸಂಖ್ಯಾತ ಹಿಂದೂ ಸಮುದಾಯವನ್ನು ಕಡೆಗಣಿಸುತ್ತಾ ಬಂದಿರುವುದೇ ಇವರ ಸಾಧನೆ ಎಂದರು.

ಕರಾವಳಿ ಸ್ಲೀಪರ್‌ ಸೆಲ್‌
ಕರಾವಳಿ ಕರ್ನಾಟಕ ಉಗ್ರ ಚಟುವಟಿಕೆಯುಳ್ಳ ಸ್ಲಿàಪರ್‌ ಸೆಲ್‌ ಆಗುತ್ತಿದೆ. ಕೊಡಗಿನಿಂದ ಹಿಡಿದು ಮಲೆನಾಡಿನವರೆಗೆ ಉಗ್ರಚಟುವಟಿಕೆ ಸದ್ದಿಲ್ಲದೆ ಚಿಗುರುತ್ತಿದೆ. ಅದಕ್ಕಾಗಿ ಅಮಿತ್‌ ಶಾ ಅವರು ಪಿಎಫ್‌ಐ ನಿಷೇಧಿಸಿದರು. ಆದರೆ ಕಾಂಗ್ರೆಸ್‌ ಬಾಂಬ್‌ ಹಾಕುವವರ ರಕ್ಷಣೆಗೆ ನಿಂತಿದೆ. ಉಗ್ರರೇನು ನಿಮ್ಮ ಅಣ್ಣ ತಮ್ಮಂದಿರಾ ಎಂದು ಕಟುವಾಗಿ ಟೀಕಿಸಿದರು.

Advertisement

ಮುಸಲ್ಮಾನರಿಗೆ ಮೀಸಲಾತಿ ನೀಡಿದಂತೆ ಎಲ್ಲ ವರ್ಗಕ್ಕೂ ಮೀಸಲಾತಿ ನೀಡಬೇಕೆಂಬುದು ನಮ್ಮ ಆಶಯ, ಕಾಂಗ್ರೆಸ್‌ ಕೇವಲ ಮುಸಲ್ಮಾನರ ಓಲೆ„ಕೆಗೆ ಸರಕಾರ ನಡೆಸುತ್ತದೆ, ಅದಕ್ಕಾಗಿ ಏಕರೂಪದ ಕಾನೂನು ಜಾರಿ ಮಾಡಬೇಕು. ಎಲ್ಲರಿಗೂ ಸಮಾನವಾಗಿ ಸವಲತ್ತುಗಳು ಸಿಗಬೇಕು ಎಂದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, ಐದು ವರ್ಷದ ಹಿಂದೆ ಜನ ನನಗೆ ವಿಶ್ವಾಸವಿಟ್ಟು ಮತ ನೀಡಿದ್ದನ್ನು ನಾನು ಮರೆತಿಲ್ಲ. ನನ್ನ ಕಾರ್ಯವೈಖರಿ ಬಗ್ಗೆ ಇಂದು ಬೆಳ್ತಂಗಡಿ ಜನ ಮಾತನಾಡುತ್ತಿದ್ದಾರೆ, ಬೆಳ್ತಂಗಡಿ ಜನತೆ 60 ಸಾವಿರ ಮತ ಅಂತರದಿಂದ ಗೆಲ್ಲಿಸಬೇಕು ಎಂದರು.
ಉಜಿರೆಯ ಎಸ್‌ಡಿಎಂ ಕಾಲೇಜು ಬಳಿಯಿಂದ ಜನಾರ್ದನಸ್ವಾಮಿ ದೇವಸ್ಥಾನದವರೆಗೆ ತೆರೆದ ಜೀಪಿನಲ್ಲಿ ರೋಡ್‌ ಶೋ ನಡೆಯಿತು. ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ಪಕ್ಷದ ಪ್ರಮುಖರು, ಶಕ್ತಿ ಕೇಂದ್ರ ಅಧ್ಯಕ್ಷರು, ಜಿ.ಪಂ. ಮಾಜಿ ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ರೋಡ್‌ ಶೋನಲ್ಲಿ ಪಾಲ್ಗೊಂಡು ಹರೀಶ್‌ ಪೂಂಜ, ಮೋದಿಗೆ ಜೈಕಾರ ಹಾಕಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌, ಬಿರುವೆರ್‌ ಕುಡ್ಲ ಸ್ಥಾಪಕ ಉದಯ್‌ ಪೂಜಾರಿ, ಅಭ್ಯರ್ಥಿ ಪ್ರಮುಖ್‌ ಜಯಾನಂದ ಗೌಡ, ಪ್ರಮುಖರಾದ ಕುಶಾಲಪ್ಪ ಗೌಡ, ಉದ್ಯಮಿ ಶಶಿಧರ್‌ ಶೆಟ್ಟಿ ಬರೋಡ, ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್‌ ಗೌಡ, ಶ್ರೀನಿವಾಸ್‌ ರಾವ್‌, ಉಪಾಧ್ಯಕ್ಷ ಸೀತರಾಮ್‌ ಬೆಳಾಲು, ಜಯಂತ್‌ ಗೌಡ, ಪ್ರಶಾಂತ್‌ ಪಾರೆಂಕಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next