ಪ್ರಸಕ್ತ ಸಾಲಿನ ವಿಶ್ವಕಪ್ ಏಕದಿನ ಕ್ರಿಕೆಟ್ ಕೂಟವನ್ನು ಇಂಗ್ಲೆಂಡ್ ಜನ ನೋಡಿ ಮನಸಾರೆ ಎಂಜಾಯ್ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಇಂಗ್ಲೆಂಡ್ ಕ್ರೀಡಾಭಿಮಾನಿಗಳಿಗೆ ಡಬಲ್ ಧಮಾಕಾವೊಂದು ಕಾದಿದೆ. ಹೌದು, ವಿಶ್ವಕಪ್ ನಡುವೆಯೇ ಜು.1ರಿಂದ ಜು.14ರ ತನಕ ವಿಂಬಲ್ಡನ್ ಟೆನಿಸ್ ಕೂಟ ಆರಂಭವಾಗುತ್ತಿದೆ. 133ನೇ ಟೆನಿಸ್ ಅಭಿಮಾನಿಗಳೆಲ್ಲ ಕಾತುರದ ಕಣ್ಣುಗಳಿಂದ ಕಾಯುತ್ತಿದ್ದಾರೆ. ಸರ್ಬಿಯಾದ ನೊವಾಕ್ ಜೊಕೊವಿಚ್, ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪುರುಷರ ಸಿಂಗಲ್ಸ್ ವಿಭಾಗದ ಅಗ್ರ ತಾರೆಯರು, ರೊಮೇನಿಯಾದ ಸಿಮೊನಾ ಹಾಲೆಪ್, ಜೆಕ್ ರಿಪಬ್ಲಿಕ್‌ನ ಪೆಟ್ರಾ ಕ್ವಿಟೋವಾ, ಅಮೆರಿಕದ ಸೆರೆನಾ ವಿಲಿಯಮ್ಸ್ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ವಿಂಬಲ್ಡನ್ ಮೇಲೆ ಫೆಡರರ್ ಪಾರುಪತ್ಯ: ಸ್ವಿಜರ್ಲೆಂಡ್‌ನ ಟೆನಿಸ್ ದಂತಕಥೆ ರೋಜರ್ ಫೆಡರರ್ ಓಪನ್ ಯುಗದಲ್ಲಿ ಅತೀ ಹೆಚ್ಚು ಪ್ರಶಸ್ತಿ ಗೆದ್ದ ಸಾರ್ವಕಾಲಿಕ ಟೆನಿಸ್ ಆಟಗಾರ. ಒಟ್ಟಾರೆ 8 ಸಲ ವಿಂಬಲ್ಡನ್ ಟೆನಿಸ್ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ಅಮೆರಿಕದ ಪೀಟ್ ಸ್ಯಾಂಪ್ರಸ್ (7 ಟ್ರೋಫಿ) ಹಿಂದಿಕ್ಕಿರುವುದು ಪ್ರಚಂಡ ಸಾಧನೆ. ಉಳಿದಂತೆ ಸಲ ಟ್ರೋಫಿ ಗೆದ್ದಿರುವ ಸರ್ಬಿಯಾದ ಜೊಕೊವಿಚ್ ಆನಂತರದ ಸ್ಥಾನದಲ್ಲಿದ್ದಾರೆ. ಸ್ಪೇನ್‌ನ ರಫೆಲ್ ನಡಾಲ್ (2 ಸಲ) ಹಾಗೂ ಬ್ರಿಟನ್‌ನ ಆ್ಯಂಡಿ ಮರ್ರೆ (2 ಸಲ) ಟ್ರೋಫಿ ಗೆದ್ದಿದ್ದಾರೆ. 2018ರಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಚಾಂಪಿಯನ್ ಆಗಿದ್ದರು. ಪ್ರಸಕ್ತ ಸಾಲಿನಲ್ಲಿ ಈ ನಾಲ್ವರು ಆಟಗಾರರಿಂದ ಕಿರೀಟಕ್ಕಾಗಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ಇಂಗ್ಲೆಂಡಿಗರದ್ದೇ ಪ್ರಭುತ್ವ: ಒಟ್ಟಾರೆ 132 ಆವೃತ್ತಿ ಕೂಟಗಳು ಮುಕ್ತಾಯಗೊಂಡಿದೆ. ಇದರಲ್ಲಿ ಒಟ್ಟು 37 ಬಾರಿ ಇಂಗ್ಲೆಂಡ್ ಟೆನಿಸಿಗರು ಟ್ರೋಫಿ ಗೆದ್ದಿದ್ದಾರೆ. ಎರಡನೇ ಸ್ಥಾನದಲ್ಲಿ ಅಮೆರಿಕದ ಇದೆ. ಒಟ್ಟು 32 ಸಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇನ್ನು ಆಸ್ಟ್ರೇಲಿಯ (21), ಸ್ವಿಜರ್ಲೆಂಡ್ (8), ಫ್ರಾನ್ಸ್ (7), ಸ್ವೀಡನ್ (7), ಜರ್ಮನಿ (4), ನ್ಯೂಜಿಲೆಂಡ್ (4), ಸರ್ಬಿಯಾ (4), ಸ್ಪೇನ್ (3), ಕ್ರೊಯೇಷಿಯಾ (1), ಪೆರು (1), ಚೆಕೊಸ್ಲೊವಾಕಿಯಾ (1), ಈಜಿಫ್ಟ್ (1) ಹಾಗೂ ನೆದರ್ಲೆಂಡ್ (1) ಸಲ ಟ್ರೋಫಿ ಮೇಲೆ ತನ್ನ ಅಧಿಪತ್ಯ ಸ್ಥಾಪಿಸಿರುವುದು ವಿಶೇಷ.
ಪ್ರಶಸ್ತಿ ಮೊತ್ತ
19 ಕೋಟಿ ರೂ. ವಿನ್ನರ್
9.71 ಕೋಟಿ ರೂ. ರನ್ನರ್
ರೋಜರ್ ಫೆಡರರ್ : 2003, 2004, 2005, 2006, 2007, 2009, 2012, 2017
ನೊವಾಕ್ ಜೊಕೊವಿಚ್: 2011, 2014, 2015, 2018