Advertisement

ವಿಂಬಲ್ಡನ್‌-2022 : ಜಬಿಯುರ್‌-ರಿಬಕಿನಾ ಫೈನಲ್‌

10:41 PM Jul 07, 2022 | Team Udayavani |

ಲಂಡನ್‌: ಟ್ಯುನಿಶಿಯಾದ ಓನ್ಸ್‌ ಜಬಿಯುರ್‌ ಮತ್ತು ಕಜಾಕ್‌ಸ್ಥಾನದ ಎಲೆನಾ ರಿಬಕಿನಾ ವಿಂಬಲ್ಡನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿ ಸುತ್ತಿಗೆ ನೆಗೆದಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಎಂಬುದು ವಿಶೇಷ.

Advertisement

ಗುರುವಾರದ ಮೊದಲ ಸೆಮಿಫೈನಲ್‌ನಲ್ಲಿ ಓನ್ಸ್‌ ಜಬಿಯುರ್‌ ಜರ್ಮನಿಯ ತಜಾನಾ ಮರಿಯಾ ಅವರನ್ನು 6-2, 3-6, 6-1 ಅಂತರದಿಂದ ಮಣಿಸಿದರು. ಗೆದ್ದರೆ ಮರಿಯಾಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಲಿತ್ತು. ಇನ್ನೊಂದು ಸೆಮಿಫೈನಲ್‌ನಲ್ಲಿ ರಿಬಕಿನಾ 2019ರ ಚಾಂಪಿಯನ್‌, ರೊಮೇನಿ ಯಾದ ಸಿಮೋನಾ ಹಾಲೆಪ್‌ಗೆ 6-3, 6-3 ನೇರ ಸೆಟ್‌ಗಳ ಆಘಾತವಿಕ್ಕಿದರು.ಲಂಡನ್‌, ಜು. 7: ಟ್ಯುನಿಶಿಯಾದ ಓನ್ಸ್‌ ಜಬಿಯುರ್‌ ಮತ್ತು ಕಜಾಕ್‌ಸ್ಥಾನದ ಎಲೆನಾ ರಿಬಕಿನಾ ವಿಂಬಲ್ಡನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿ ಸುತ್ತಿಗೆ ನೆಗೆದಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಎಂಬುದು ವಿಶೇಷ.

ಗುರುವಾರದ ಮೊದಲ ಸೆಮಿಫೈನಲ್‌ನಲ್ಲಿ ಓನ್ಸ್‌ ಜಬಿಯುರ್‌ ಜರ್ಮನಿಯ ತಜಾನಾ ಮರಿಯಾ ಅವರನ್ನು 6-2, 3-6, 6-1 ಅಂತರದಿಂದ ಮಣಿಸಿದರು. ಗೆದ್ದರೆ ಮರಿಯಾಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಲಿತ್ತು. ಇನ್ನೊಂದು ಸೆಮಿಫೈನಲ್‌ನಲ್ಲಿ ರಿಬಕಿನಾ 2019ರ ಚಾಂಪಿಯನ್‌, ರೊಮೇನಿ ಯಾದ ಸಿಮೋನಾ ಹಾಲೆಪ್‌ಗೆ 6-3, 6-3 ನೇರ ಸೆಟ್‌ಗಳ ಆಘಾತವಿಕ್ಕಿದರು.

ಸಾನಿಯಾ ವಿಂಬಲ್ಡನ್‌ ವಿದಾಯ :

ಸಾನಿಯಾ ಮಿರ್ಜಾ ಅವರ ವಿಂಬಲ್ಡನ್‌ ಮಿಶ್ರ ಡಬಲ್ಸ್‌ ಅಭಿಯಾನ ಸೆಮಿಫೈನಲ್‌ನಲ್ಲಿ ಕೊನೆಗೊಂಡಿದೆ. ಇಲ್ಲಿ ಅವರು ಕ್ರೊವೇಶಿಯಾದ ಮೇಟ್‌ ಪಾವಿಕ್‌ ಜತೆ ಕಣಕ್ಕಿಳಿದಿದ್ದರು. ಬುಧವಾರ ರಾತ್ರಿಯ ಉಪಾಂತ್ಯ ಸಮರದಲ್ಲಿ ಹಾಲಿ ಚಾಂಪಿಯನ್ಸ್‌ ನೀಲ್‌ ಸ್ಕಪ್‌ಸ್ಕಿ-ಡಿಸೈರ್‌ ಕ್ರಾಜಿಕ್‌ ಸೇರಿಕೊಂಡು ಸಾನಿಯಾ-ಪಾವಿಕ್‌ ಜೋಡಿಯನ್ನು 4-6, 7-5, 6-4 ಅಂತರದಿಂದ ಕೆಡವಿದರು.

Advertisement

ಇದರೊಂದಿಗೆ 35 ವರ್ಷದ ಭಾರತದ ಸ್ಟಾರ್‌ ಆಟಗಾರ್ತಿ ವಿಂಬಲ್ಡನ್‌ನಲ್ಲಿ ಕೊನೆಯ ಪಂದ್ಯ ಆಡಿದರು. ಇದು ವಿಂಬಲ್ಡನ್‌ ಪಂದ್ಯಾವಳಿಯಲ್ಲಿ ಸಾನಿಯಾ ಮಿರ್ಜಾ ಅವರ ಅತ್ಯುತ್ತಮ ಮಿಶ್ರ ಡಬಲ್ಸ್‌ ಸಾಧನೆಯಾಗಿದೆ. ಇದಕ್ಕೂ ಮುನ್ನ 2011, 2013 ಮತ್ತು 2015ರಲ್ಲಿ ಕ್ವಾರ್ಟರ್‌ ಫೈನಲ್‌ ತನಕ ಸಾಗಿದ್ದರು.  ವನಿತಾ ಡಬಲ್ಸ್‌ನಲ್ಲಿ ಮಾರ್ಟಿನಾ ಹಿಂಗಿಸ್‌ ಜತೆಗೂಡಿ 2015ರಲ್ಲಿ ಚಾಂಪಿ ಯನ್‌ ಎನಿಸಿದ ಹೆಗ್ಗಳಿಕೆ ಸಾನಿಯಾ ಮಿರ್ಜಾ ಪಾಲಿಗಿದೆ.

ನಡಾಲ್‌ ಸೆಮಿಫೈನಲ್‌ ಆಡುವುದು ಅನುಮಾನ! :

ಕ್ವಾರ್ಟರ್‌ ಫೈನಲ್‌ ಹಣಾಹಣಿಯನ್ನು 5 ಸೆಟ್‌ಗಳಲ್ಲಿ ಕಷ್ಟಪಟ್ಟು ಗೆದ್ದ ಸ್ಪೇನ್‌ನ ರಫೆಲ್‌ ನಡಾಲ್‌ ಶುಕ್ರವಾರ ಆಸ್ಟ್ರೇ ಲಿಯದ ನಿಕ್‌ ಕಿರ್ಗಿಯೋಸ್‌ ವಿರು ದ್ಧದ ಸೆಮಿಫೈನಲ್‌ ಪಂದ್ಯದಿಂದ ಹೊರ   ಗುಳಿಯುವರೇ? ಇಂಥದೊಂದು ಅನುಮಾನ ದಟ್ಟವಾಗಿದೆ. ಕಾರಣ, ನಡಾಲ್‌ಗೆ ಎದುರಾಗಿರುವ ತೀವ್ರ ಕಿಬ್ಬೊಟ್ಟೆ ನೋವಿನ ಸಮಸ್ಯೆ.

ಅಮೆರಿಕದ 11ನೇ ಶ್ರೇಯಾಂಕದ ಆಟಗಾರ ಟೇಲರ್‌ ಫ್ರಿಟ್ಸ್‌ ಎದುರಿನ ಕ್ವಾರ್ಟರ್‌ ಫೈನಲ್‌ ಸ್ಪರ್ಧೆಯ ವೇಳೆ ರಫೆಲ್‌ ನಡಾಲ್‌ ಈ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಿದರು. ದ್ವಿತೀಯ ಸೆಟ್‌ ವೇಳೆ “ಮೆಡಿಕಲ್‌ ಟೈಮ್‌ಔಟ್‌’ ಕೂಡ ಪಡೆದುಕೊಂಡರು. ನಡಾಲ್‌ 5 ಸೆಟ್‌ಗಳ ಹೋರಾಟವನ್ನು ಯಶಸ್ವಿಯಾಗಿಯೇ ಮುಗಿಸಿದರು. ಕೊನೆಯ ಸೆಟ್‌ ವೇಳೆ ಅಪಾಯಕ್ಕೆ ಸಿಲುಕಿದರೂ ಪಾರಾದರು. ನಡಾಲ್‌ ಗೆಲುವಿನ ಅಂತರ 3-6, 7-5, 3-6, 7-5, 7-6 (10-4).

ಈ ಪಂದ್ಯವನ್ನೇ ಮುಗಿಸುವ ಬಗ್ಗೆ ತನಗೆ ಅನುಮಾನವಿತ್ತು ಎಂಬುದಾಗಿ ನಡಾಲ್‌ 8ನೇ ಸಲ ವಿಂಬಲ್ಡನ್‌ ಸೆಮಿಫೈನಲ್‌ ಪ್ರವೇಶಿಸಿದ ಬಳಿಕ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next