Advertisement

ಇಂದು ವಿಂಬಲ್ಡನ್‌ ಫೈನಲ್‌: ಜೊಕೋವಿಕ್‌ ವರ್ಸಸ್‌ ಕಿರ್ಗಿಯೋಸ್‌

11:07 PM Jul 09, 2022 | Team Udayavani |

ಲಂಡನ್‌: ಸರ್ಬಿಯಾದ ನೊವಾಕ್‌ ಜೊಕೋವಿಕ್‌ ನೆಚ್ಚಿನ ಆಟಗಾರ, ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ಅಪಾ ಯಕಾರಿ ಆಟಗಾರ. ಫ‌ಲಿತಾಂಶ 50-50. ಇದು ರವಿವಾರದ ಬಹು ನಿರೀಕ್ಷೆಯ ವಿಂಬಲ್ಡನ್‌ ಫೈನಲ್‌ ಪಂದ್ಯದ ಎರಡು ಸಾಲಿನ ವಿಶ್ಲೇಷಣೆ.

Advertisement

ನೊವಾಕ್‌ ಜೊಕೋವಿಕ್‌ಗೆ ಸೆಮಿಫೈನಲ್‌ನಲ್ಲಿ ಕಠಿನ ಎದುರಾಳಿಯೇನೂ ಸಿಕ್ಕಿರಲಿಲ್ಲ. ಕ್ಯಾಮರಾನ್‌ ನೂರಿ ಆತಿಥೇಯ ನಾಡಿನ ವರು ಎಂಬ ಕಾರಣಕ್ಕಾಗಿ ಕುತೂಹಲ ಹುಟ್ಟಿಸಿದ್ದರು. ಜತೆಗೆ ಮೊದಲ ಸೆಟ್‌ ಗೆದ್ದಾಗಲೂ ಎಲ್ಲರನ್ನೂ ಸೆಳೆದರು. ಆದರೆ ಜೊಕೋ ಅನುಭವಕ್ಕೆ ನೂರಿ ಸಾಟಿಯಾಗಲಿಲ್ಲ.

ಇನ್ನೊಂದೆಡೆ ನಿಕೋಲಸ್‌ ಕಿರ್ಗಿಯೋಸ್‌ ಸೆಮಿಫೈನಲ್‌ ಆಡದೆಯೇ ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ ಅದೃಷ್ಟಶಾಲಿ. ಇಲ್ಲಿ ಅವರಿಗೆ ಮತ್ತೋರ್ವ ನೆಚ್ಚಿನ ಹಾಗೂ ಅಪಾಯಕಾರಿ ಟೆನಿಸಿಗ ರಫೆಲ್‌ ನಡಾಲ್‌ ವಿರುದ್ಧ ಸೆಣಸುವ ಪ್ರಮೇಯ ಎದುರಾಗಲಿಲ್ಲ. ನಡಾಲ್‌ ಗಾಯಾಳಾಗಿ ಹೊರಗುಳಿದ ಕಾರಣ ಕಿರ್ಗಿಯೋಸ್‌ಗೆ ವಾಕ್‌ ಓವರ್‌ ಸಿಕ್ಕಿತು. ಇವರಿಬ್ಬರ ಮುಖಾಮುಖಿ ಸಂಭವಿಸಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಫೈನಲ್‌ನಲ್ಲೂ ಕಿರ್ಗಿಯೋಸ್‌ಗೆ ಅದೃಷ್ಟ ಕೈಹಿಡಿದೀತೇ? ನಿರೀಕ್ಷೆ ಸಹಜ.

8ನೇ ವಿಂಬಲ್ಡನ್‌ ಫೈನಲ್‌
ಈ ಋತುವಿನ 27 ಪಂದ್ಯಗಳಲ್ಲಿ 22ರಲ್ಲಿ ಜಯ ಸಾಧಿಸಿ ರುವ ನೊವಾಕ್‌ ಜೊಕೋವಿಕ್‌ 2022ರಲ್ಲಿನ್ನೂ ಗ್ರ್ಯಾನ್‌ಸ್ಲಾಮ್‌ ಖಾತೆ ತೆರೆಯಬೇಕಿದೆ. ಅವರಿಗೆ ಇದು 8ನೇ ವಿಂಬಲ್ಡನ್‌ ಫೈನಲ್‌. ಈಗಾಗಲೇ 6 ಸಲ ಪ್ರಶಸ್ತಿ ಎತ್ತಿದ್ದಾರೆ. ಸೋತದ್ದು ಒಂದು ಫೈನಲ್‌ನಲ್ಲಿ ಮಾತ್ರ.

ಜೊಕೋವಿಕ್‌ ಆಡುತ್ತಿರುವ 32ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಇದಾಗಿದೆ. ಇದೊಂದು ದಾಖಲೆ. 31 ಫೈನಲ್‌ಗ‌ಳಲ್ಲಿ ಆಡಿದ ರೋಜರ್‌ ಫೆಡರರ್‌ ದಾಖಲೆ ಪತನಗೊಂಡಿತು.

Advertisement

ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌
ನಿಕ್‌ ಕಿರ್ಗಿಯೋಸ್‌ ಕೂಡ ಈ ವರ್ಷ 27 ಪಂದ್ಯ ಆಡಿದ್ದಾರೆ. 21ರಲ್ಲಿ ಜಯಿಸಿದ್ದಾರೆ. ಅಂದರೆ ಜೊಕೋ ಆಡಿದಷ್ಟೇ ಪಂದ್ಯ, ಅವರಿಗಿಂತ ಒಂದು ಗೆಲುವು ಕಡಿಮೆ.

6 ಎಟಿಪಿ ಟೂರ್‌ ಸಿಂಗಲ್ಸ್‌ ಪ್ರಶಸ್ತಿ, ಇದೇ ವರ್ಷ ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇದಕ್ಕೂ ಮಿಗಿಲಾಗಿ ಜೊಕೋವಿಕ್‌ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಹಿರಿಮೆ ಇವರದು!

ಈ ಗೆಲುವು ಒಲಿದದ್ದು 2017ರಲ್ಲಿ.ಮೊದಲನೆಯದು ಮೆಕ್ಸಿಕನ್‌ ಓಪನ್‌ ಕ್ವಾರ್ಟರ್‌ ಫೈನಲ್‌. ಬಳಿಕ ಅದೇ ವರ್ಷ ಇಂಡಿಯನ್‌ ವೆಲ್ಸ್‌ ಮಾಸ್ಟರ್ ಟೂರ್ನಿಯ 4ನೇ ಸುತ್ತಿನಲ್ಲೂ ಜೊಕೋಗೆ ಆಘಾತವಿಕ್ಕಿದರು. ಅಂದಹಾಗೆ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಎಂಬುದು “ಡಿಫ‌ರೆಂಟ್‌ ಬಾಲ್‌ ಗೇಮ್‌’. ಆದರೆ ಇಲ್ಲಿ ಕಾಂಗರೂ ನಾಡಿನ ಟೆನಿಸಿಗ ಗೆದ್ದರೆ ಭಾರೀ ಅಚ್ಚರಿಪಡಬೇಕೆಂದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next