Advertisement
ದಿನದ ಮೊದಲ ಗೆಲುವಿಗೆ ಸಾಕ್ಷಿಯಾದವರು ಜೆಕ್ ಗಣರಾಜ್ಯದ ಎಲೆನಾ ರಿಬಾಕಿನಾ. ವನಿತಾ ಸಿಂಗಲ್ಸ್ ನಲ್ಲಿ ಅವರು ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್ ವಿರುದ್ಧ 7-5, 6-3ರಿಂದ ಗೆದ್ದು ಮೊದಲ ಸಲ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
Related Articles
ಕಳೆದ 3 ಬಾರಿಯ ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಮತ್ತು ಇಟಲಿಯ 10ನೇ ಶ್ರೇಯಾಂಕದ ಆಟಗಾರ ಜಾನಿಕ್ ಸಿನ್ನರ್ ಕ್ವಾರ್ಟರ್ ಫೈನಲ್‌ನಲ್ಲಿ ಪರಸ್ಪರ ಎದುಗಲಿದ್ದಾರೆ. ಅಗ್ರ ಶ್ರೇಯಾಂಕದ ಜೊಕೋವಿಕ್ ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದ ಡಚ್ ಟೆನಿಸಿಗ ಟಿಮ್ ವಾನ್ ರಿತೊವೆನ್ ಅವರಿಗೆ 6-2, 4-6, 6-1, 6-2 ಅಂತರದ ಸೋಲುಣಿಸಿದರು. 2017ರ ಕ್ವಾರ್ಟರ್ ಫೈನಲ್ ಬಳಿಕ ಜೊಕೋ ಇಲ್ಲಿ ಹಿನ್ನಡೆ ಕಂಡೇ ಇಲ್ಲ. ಅಂದು ಥಾಮಸ್ ಬೆರ್ಡಿಶ್ ವಿರುದ್ಧ ಆಡುವಾಗ ಮೊಣಕೈ ಗಾಯಕ್ಕೆ ತ್ಯಜಿಸಿ ಪಂದ್ಯ ತ್ಯಜಿಸಿದ್ದರು.
Advertisement
ಜಾನಿಕ್ ಸಿನ್ನರ್ ಹಾಗೂ ಸ್ಪೇನ್‌ನ 5ನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಝ್ ನಡುವಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಇಲ್ಲಿ ಅಲ್ಕರಾಝ್ ಅವರಿಗೆ 6-1, 6-4, 6-7 (8), 6-3 ಅಂತರದ ಆಘಾತವಿಕ್ಕಿ ಮೊದಲ ಸಲ ವಿಂಬಲ್ಡನ್ ಕ್ವಾರ್ಟರ್ ಫೈನಲ್ ತಲುಪಿದರು.
16ರ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಬೆಲ್ಜಿಯಂನ ಡೇವಿಡ್ ಗೋಫಿನ್ ಅಮೆರಿಕದ ಫ್ರಾನ್ಸೆಸ್ ಥಿಯಾಫೊ ವಿರುದ್ಧ ಗೆದ್ದು ಬಂದರು. ಅಂತರ 7-6 (3), 5-7, 5-7, 6-4, 7-5.
ಬ್ರಿಟನ್ನಿನ ಕ್ಯಾಮರಾನ್ ನೂರಿ ಅಮೆರಿಕದ ಟಾಮಿ ಪೌಲ್ ವಿರುದ್ಧ 6-4, 7-5, 6-4 ಅಂತರದ ಗೆಲುವು ಸಾಧಿಸಿದರು.