ಮೈಸೂರು: ಬಿಜೆಪಿ ಪಕ್ಷಕ್ಕೆ ರೌಡಿ ಶೀಟರ್ ಗಳ ಸೇರ್ಪಡೆ ವಿಚಾರ ಭಾರಿ ಚರ್ಚೆಗೆ ಗುರಿಯಾಗಿರುವ ವೇಳೆ ಮೈಸೂರಿನಲ್ಲಿ ರೌಡಿ ಶೀಟರ್ ಒಬ್ಬ ಶನಿವಾರ ಏಕಾಂಗಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾನೆ.
Advertisement
ಇದನ್ನೂ ಓದಿ : ನನಗೆ ರೌಡಿಗಳ ಅವಶ್ಯಕತೆ ಇಲ್ಲ: ಸಂಸದ ಪ್ರತಾಪ್ ಸಿಂಹ
ನಗರದ ಗಾಂಧಿ ಪ್ರತಿಮೆ ಮುಂಭಾಗ ಏಕಾಂಗಿ ಪ್ರತಿಭಟನೆ ಮಾಡಿರುವ ಮಂಜು ಅಲಿಯಾಸ್ ಪಾನಿಪುರಿ ಮಂಜ ”ಬಿಜೆಪಿಗರೇ ನಾನು ರೌಡಿ ಶೀಟರ್. ನನಗೆ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ” ಎಂದು ಫ್ಲೆಕ್ಸ್ ಪ್ರದರ್ಶನ ಮಾಡಿದ್ದಾನೆ.
ಪ್ರತಿಭಟನೆ ನಡೆಸುತ್ತಿರುವ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪಾನಿಪುರಿ ಮಂಜನನ್ನು ವಶಕ್ಕೆ ಪಡೆದಿದ್ದಾರೆ.