ದಾವಣಗೆರೆ: ಮೀಸಲಾತಿಗಾಗಿ ವಿವಿಧ ಸಮುದಾಯದ ಸ್ವಾಮಿಗಳು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಯಾವ ರೀತಿ ಅದನ್ನು ಈಡೇರಿಸಬೇಕು ಎಂಬುದಷ್ಟೆ ಈಗ ಚರ್ಚೆ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ ದಲ್ಲಿ ರವಿವಾರ ನಡೆದ ಸಂತ ಸೇವಾಲಾಲ್ ಅವರ 282ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಇದನ್ನೂ ಓದಿ:ಶ್ರಮ ಪಟ್ಟರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 120 ಸೀಟು ಗೆಲ್ಲಬಹುದು: ಬಂಡೆಪ್ಪ ಕಾಶಂಪೂರ್
ವೀರಶೈವ ಲಿಂಗಾಯತ, ವಾಲ್ಮೀಕಿ ಸೇರಿದಂತೆ ಹೋರಾಟ ನಿರತ ಎಲ್ಲಾ ಸಮಾಜದ ಸ್ವಾಮೀಜಿಗಳ ಬೇಡಿಕೆಯನ್ನು ಕಾನೂನು ಚೌಕಟ್ಟಿನಲ್ಲಿ ಈಡೇರಿಸಲು ಕ್ರಮ ವಹಿಸಲಾಗುವುದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಯಾವ ಸ್ವಾಮೀಜಿಯವರಿಗೂ ಆತಂಕ, ಸಂಶಯ ಬೇಡ ಎಂದರು.
ಇದನ್ನೂ ಓದಿ:ಜಾತಿ ಸಮಾವೇಶಗಳಿಗೆ ಯಾಕೆ ಸಂಘ ಪರಿವಾರ ಪ್ರಾಯೋಜಕತ್ವ ನೀಡುತ್ತಿದೆ ? : ಸಿದ್ದರಾಮಯ್ಯ