ಬೆಂಗಳೂರು : ಮಾರ್ಚ್ 28 ರಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ನಮ್ಮ ವರಿಷ್ಠರು ನನಗೆ ಅವಕಾಶ ಕೊಟ್ಟು,ನೇಮಿಸಿದ್ದಾರೆ. ಖರ್ಗೆ ಸೇರಿ ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಎಂದರು.
ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಚಾರ ಸಮಿತಿಯನ್ನ ನಾವು ಬಲಪಡಿಸಬೇಕಿದೆ. ರಾಜ್ಯ,ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಬೇಕಿದೆ. 5 ವರ್ಷ ಜಲಸಂಪನ್ಮೂಲ ಸಚಿವನಾಗಿದ್ದೆ. ಗೃಹ ಸಚಿವನಾಗಿಯೂ ನಾನು ಕೆಲಸ ಮಾಡಿದ್ದೇನೆ. ಎಲ್ಲರನ್ನ ಒಟ್ಟಾಗಿ ಜೋಡಿಸಿಕೊಂಡು ಹೋಗುತ್ತೇನೆ .ಪ್ರಚಾರವನ್ನ ರೂಪಿಸುವ ಬಗ್ಗೆ ಗಮನಹರಿಸುತ್ತೇವೆ ಎಂದರು.
ಮೇಕೆದಾಟು ಸರ್ವ ಪಕ್ಷ ಸಭೆ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ನಿಲುವನ್ನ ನಾವು ವ್ಯಕ್ತಪಡಿಸಿದ್ದೇವೆ. ಕೃಷ್ಣಾ ವಿಚಾರದಲ್ಲಿ ನೊಟಿಫಿಕೇಶನ್ ಆಗಬೇಕು. ನೊಟಿಫಿಕೇಶನ್ ಆದರೆ ನ್ಯಾಷನಲ್ ಪ್ರಾಜೆಕ್ಟ್ ಆಗುತ್ತದೆ. ೨ ಲಕ್ಷ ಹೆಕ್ಟೇರ್ ಪ್ರದೇಶ ಅದಕ್ಕೆ ಬೇಕು. ಮೇಕೆದಾಟು ಬಗ್ಗೆ ಚರ್ಚೆಯಾಗಿದೆ ಅನ್ನುತ್ತಾರೆ, ಆದರೆ ಏನು ಚರ್ಚೆ ಅನ್ನೋದನ್ನ ಸಿಎಂ ಹೇಳುತ್ತಿಲ್ಲ. ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆಯುತ್ತೇನೆಂದರು. ನದಿ ಜೋಡಣೆ ವಿಚಾರದಲ್ಲು ನಮ್ಮ ಅಭಿಪ್ರಾಯ ಪಡೆಯಬೇಕು. ರಾಜ್ಯಕ್ಕೆ ಏನು ಲಾಭ,ಏನು ನಷ್ಟ ಇದೆ ಎಂದು ಅರಿಯಬೇಕು. ನಮ್ಮ ಪಾಲಿಗೆ ಎಷ್ಟು ನೀರು ಸಿಗಲಿದೆ ತಿಳಿಯಬೇಕು ಎಂದರು.
ಸರ್ವಪಕ್ಷ ನಿಯೋಗ ಪ್ರಧಾನಿ ಬಳಿಗೆ ಕೊಂಡೊಯ್ಯಬೇಕು. ಪ್ರಧಾನಿ ಮುಂದೆ ಹೋಗೋಕೆ ಹೆದರಿಕೆಯಾಕೆ? ಅವರು ನಮ್ಮ ದೇಶದ ಪ್ರಧಾನಿಗಳಲ್ಲವೇ? ಮೇಕೆದಾಟು ಯೋಜನೆಗೆ ಏನಾದ್ರೂ ಸ್ಟೇ ಇದೆಯಾ? ಸುಮ್ಮಸುಮ್ಮನೆ ಪೆಟಿಷನ್ ಹಾಕಿದರೆ ಏನಾಗುವುದೂ ಇಲ್ಲ. ಆದೇಶ ಮಾಡಿದರೆ ಮಾತ್ರ ತಾನೇ ಅನ್ವಯಾಗುವುದು. ತಮಿಳುನಾಡಿನವರು ಸುಮ್ಮನೆ ಪೆಟಿಷನ್ ಹಾಕಿದ್ದಾರೆ ಎಂದರು.