ಚೆನ್ನೈ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿ ದ್ರಾವಿಡ ನಾಡು ರಚನೆಯಾಗುವುದಿದ್ದರೆ ಅದಕ್ಕೆ ಸ್ವಾಗತವಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಪುನರುಚ್ಛರಿಸಿದ್ದಾರೆ.
ತಮಿಳುನಾಡಿನ ಈರೋಡ್‌ನಲ್ಲಿ ಶುಕ್ರವಾರ ಮಾತನಾಡಿದ್ದ ಅವರು ದ್ರಾವಿಡ ನಾಡು ಪರಿಕಲ್ಪನೆ ಸ್ವಾಗತಿಸುತ್ತೇನೆ. ಇದಕ್ಕೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಶೆÏàರಿ ಕೈ ಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದರೆ, ದ್ರಾವಿಡ ನಾಡು ಪರಿಕಲ್ಪನೆ ಖಂಡಿತವಾಗಿಯೂ ಸಾಕಾರಕ್ಕೆ ಬರುತ್ತದೆ ಎಂದಿದ್ದರು. ಇದೇ ಮಾತುಗಳನ್ನು ಚೆನ್ನೈನಲ್ಲಿ ಶನಿವಾರ ಸ್ಟಾಲಿನ್ ಪುನರುತ್ಛರಿಸಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳಿಂದ ಕೇಂದ್ರಕ್ಕೆ ಹೋಗುತ್ತಿರುವ ತೆರಿಗೆ ಹಾಗೂ ಕೇಂದ್ರದಿಂದ ದಕ್ಷಿಣದ ರಾಜ್ಯಗಳಿಗೆ ಬರುವ ಅನುದಾನ ನಡುವಿನ ಅನುಪಾತ ಹೆಚ್ಚಾಗಿರುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ದನಿಯೆತ್ತಿದ ಬೆನ್ನಲ್ಲೇ ಸ್ಟಾಲಿನ್ ಈ ಬೇಡಿಕೆ ಮಂಡಿಸಿರುವುದು ಗಮನಾರ್ಹವಾಗಿದೆ.
ಇದೇ ವೇಳೆ, ದ್ರಾವಿಡ ನಾಡು ತಮ್ಮದೇ ಎಂಬಂತೆ ಸುದ್ದಿ ಪ್ರಸಾರ ಮಾಡಿದ ಕೆಲ ಮಾಧ್ಯಮಗಳ ಮೇಲೆ ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದರು. ದ್ರಾವಿಡ ನಾಡು ಪರಿಕಲ್ಪನೆ ತಮಿಳುನಾಡಿನ ಮಹಾ ಹೋರಾಟಗಾರ ಪೆರಿಯಾರ್ ರಾಮಸ್ವಾಮಿ ಅವರದ್ದು. ನನ್ನದಲ್ಲ ಎಂಬ ಸ್ಪಷ್ಟನೆ ನೀಡಿದರು.
ಕಾವೇರಿಗಾಗಿ ಗೊತ್ತುವಳಿ ಬೆಂಬಲಿಸಿ: ತಮಿಳುನಾಡಿನ ಜನತೆಯ ಹಿತಾಸಕ್ತಿಗಾಗಿ ರಾಜ್ಯದ ಬೇಡಿಕೆಯಾದ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗುವ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವು ಲೋಕ ಸಭೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಮಂಡಿ ಸಿರುವ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸು ವಂತೆ, ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಒತ್ತಾಯಿಸಿರುವುದಾಗಿ ಸ್ಟಾಲಿನ್ ತಿಳಿಸಿದರು.