Advertisement
ಪಾಕಿಸ್ಥಾನಕ್ಕೆ ಹರಿಯುವ ನೀರಿನ ಪ್ರಮಾಣ ನಿಯಂತ್ರಿಸಿ ಅದನ್ನು ಭಾರತವೇ ಬಳಸಿಕೊಳ್ಳಲಿದೆ. ಕಣಿವೆ ರಾಜ್ಯದ ಪೂರ್ವ ಭಾಗದಲ್ಲಿ ಹರಿಯುತ್ತಿರುವ ನದಿ ನೀರನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ಗ ನೀಡಲಾಗುತ್ತದೆ. ಜತೆಗೆ ಯಮುನಾ ನದಿಗೆ ಅದನ್ನು ಹರಿಯುವಂತೆ ಮಾಡ ಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತದ ಪ್ರಧಾನಿಯಾಗಿದ್ದ ಜವಾಹರ್‌ಲಾಲ್ ನೆಹರೂ ಮತ್ತು ಪಾಕಿಸ್ಥಾನ ಅಧ್ಯಕ್ಷರಾಗಿದ್ದ ಅಯೂಬ್ ಖಾನ್ 1960ರ ಸೆ. 19ರಂದು ಸಿಂಧೂ ನದಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿತ್ತು. ಇದು ಸಿಂಧೂ ನದಿಯಷ್ಟೇ ಅಲ್ಲ, ಸಟ್ಲೆàಜ್, ಬಿಯಾಸ್, ರಾವಿ, ಝೇಲಂ, ಚೆನಾಬ್ ನದಿಗಳನ್ನೂ ಒಳ ಗೊಂಡಿದೆ. ಒಪ್ಪಂದದ ಪ್ರಕಾರ ಪೂರ್ವ ಭಾಗದ ನದಿಗಳಾದ ಸಟ್ಲೆàಜ್, ಬಿಯಾಸ್ ಮತ್ತು ರಾವಿ ನೀರು ಭಾರತ ಬಳಸಿಕೊಳ್ಳಬಹುದು. ಹಾಗೆಯೇ ಪಶ್ಚಿಮ ನದಿಗಳಾದ ಝೇಲಂ, ಚೆನಾಬ್ ಮತ್ತು ಸಿಂಧೂ ನದಿಗಳ ನೀರನ್ನು ಭಾರತವು ಪಾಕಿಸ್ಥಾನಕ್ಕೆ ಬಿಡಬೇಕು. ಈ ನದಿಗಳ ನೀರನ್ನು ವಿದ್ಯುತ್ ಉತ್ಪಾದನೆ, ಕೃಷಿ ಹಾಗೂ ಸಂಗ್ರಹಕ್ಕೆ ಬಳಸಬಹುದು ಎಂಬುದು ಒಪ್ಪಂದದ ಅಂಶ.
Related Articles
ಪುಲ್ವಾಮಾದಲ್ಲಿನ ಅಟ್ಟಹಾಸದ ಅನಂತರ ರಕ್ತ ಪಿಪಾಸು ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಘಟನೆ ಮತ್ತಷ್ಟು ಭೀಕರ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ. ಫೆ.14-16ರ ನಡುವೆ ಕಾಶ್ಮೀರ ಮತ್ತು ಪಾಕಿಸ್ಥಾನದಲ್ಲಿರುವ ಉಗ್ರ ಸಂಘಟನೆಯ ನಾಯಕರು ನಡೆಸಿದ ರಹಸ್ಯ ಸಂಭಾಷಣೆಯನ್ನು ಛೇದಿಸಿದ ಕೇಂದ್ರ ಗುಪ್ತಚರ ಸಂಸ್ಥೆ ಈ ಅಂಶ ದೃಢಪಡಿಸಿದೆ. ಮತ್ತೂಂದು ದಾಳಿಯ ಮೂಲಕ ಭಾರೀ ಹಾನಿ ನಡೆಸುವ ಘಾತಕ ಯೋಜನೆಯೂ ಈಗ ಬಯಲಾಗಿದೆ. ಜಮ್ಮು ಮತ್ತು ಕಾಶ್ಮೀರ ಅಥವಾ ಆ ರಾಜ್ಯದ ಹೊರ ಭಾಗದಲ್ಲಿ ಈ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಕೃತ್ಯ ನಡೆಸುವುದಕ್ಕೆ ಮೂವರು ಬಾಂಬರ್‌ಗಳು ಸೇರಿದಂತೆ 21 ಮಂದಿ ಡಿಸೆಂಬರ್‌ನಲ್ಲಿಯೇ ಕಾಶ್ಮೀರಕ್ಕೆ ನುಸುಳಿದ್ದಾರೆ. ಇದರ ಜತೆಗೆ ಪುಲ್ವಾಮಾ ಘಟನೆಗೆ ಸಂಬಂಧಿಸಿದಂತೆ ಉಗ್ರ ಸಂಘಟನೆ ಇನ್ನೂ ಭೀಕರ ವಿಡಿಯೋಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ.
Advertisement
ಶೂಟರ್‌ಗಳಿಗೆ ವೀಸಾ ಇಲ್ಲರಾಜತಾಂತ್ರಿಕ ಮಟ್ಟವಷ್ಟೇ ಅಲ್ಲ, ಕ್ರೀಡಾ ವಲಯದಲ್ಲೂ ಪಾಕಿಸ್ಥಾನಕ್ಕೆ ಶಾಕ್ ನೀಡ ಲಾಗಿದೆ. ದಿಲ್ಲಿಯಲ್ಲಿ ಶುಕ್ರವಾರದಿಂದ ಆರಂಭ ವಾಗಲಿರುವ ವಿಶ್ವಕಪ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳ ಬೇಕಿದ್ದ ಪಾಕ್‌ನ ಶೂಟರ್‌ಗಳಿಗೆ ವೀಸಾ ನಿರಾಕರಿಸಲಾಗಿದೆ. ಭದ್ರತೆ ಕಾರಣವೊಡ್ಡಿ ವೀಸಾ ನೀಡದಿರುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ. ಜೆಯುಡಿಗೆ ಪಾಕ್ ನಿಷೇಧ
ಪುಲ್ವಾಮಾ ದಾಳಿ ಬಳಿಕ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನದ ಮೇಲೆ ಬರುತ್ತಿರುವ ಒತ್ತಡಕ್ಕೆ ಮಣಿದಿರುವ ಪ್ರಧಾನಿ ಇಮ್ರಾನ್ ಖಾನ್, ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ(ಜೆಯುಡಿ) ಮತ್ತು ಇದರ ದತ್ತಿ ಸಂಸ್ಥೆ ಫಲಾಹ್ ಇ ಇನ್ಸಾನಿಯತ್‌ಗಳನ್ನು ನಿಷೇಧಿಸಿದ್ದಾರೆ. ಗುರುವಾರ ನಡೆದ ರಾಷ್ಟ್ರೀಯ ಭದ್ರತಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2008ರ ಮುಂಬಯಿ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಯೀದ್‌ನನ್ನು ಅಮೆರಿಕ ಜಾಗತಿಕ ಉಗ್ರ ಎಂದಿದ್ದರೆ, ಜೆಯುಡಿಯನ್ನು ವಿಶ್ವಸಂಸ್ಥೆ ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿತ್ತು. ಪಾಕ್‌ನಲ್ಲೂ ಸಯೀದ್‌ನನ್ನು ಗೃಹಬಂಧನದಲ್ಲಿ ಇಡಲಾಗಿತ್ತಾದರೂ 2017ರಲ್ಲಿ ಬಿಡುಗಡೆ ಮಾಡಲಾಗಿತ್ತು. ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಇವುಗಳ ಮೇಲೆ ಪಾಕ್ ನಿಗಾ ವಹಿಸಿತ್ತು.