Advertisement

Shave off: ಸಮೀಕ್ಷೆಯಂತೆ ಮೋದಿ ಮತ್ತೆ ಪ್ರಧಾನಿಯಾದರೆ ತಲೆ ಬೋಳಿಸುವೆ… ಸೋಮನಾಥ್​ ಭಾರ್ತಿ

03:38 PM Jun 02, 2024 | Team Udayavani |

ನವದೆಹಲಿ: ಶನಿವಾರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನಡೆದಿದ್ದು ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ ಇದರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಈ ಬಾರಿಯೂ ಬಹುಮತ ಪಡೆಯಲಿದೆ ಎಂದು ಹೇಳಿಕೊಂಡಿದೆ ಆದರೆ ಈ ಸಮೀಕ್ಷೆಯನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸೋಮನಾಥ್ ಭಾರ್ತಿ ತಿರಸ್ಕರಿಸಿದ್ದಾರೆ.

Advertisement

ಶನಿವಾರ ಬಿಡುಗಡೆಗೊಂಡ ಚುನನೋತ್ತರ ಸಮೀಕ್ಷೆ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಸೋಮನಾಥ್ ಭಾರ್ತಿ ಈ ಸಮೀಕ್ಷಗಳ ಬಗ್ಗೆ ನನಗೆ ನಂಬಿಕೆ ಇಲ್ಲ ಇದೆಲ್ಲ ಒಂದು ಗಿಮಿಕ್ ಒಂದು ನವದೆಹಲಿ ಲೋಕಸಭಾ ಕ್ಷೇತ್ರದಿಂದ ಇಂಡಿಯಾ ಅಭ್ಯರ್ಥಿಯಾಗಿರುವ ಸೋಮನಾಥ್ ಭಾರ್ತಿ, ಈಗ ನಡೆದಿರುವ ಎಲ್ಲಾ ಸಮೀಕ್ಷೆಗಳು ತಪ್ಪಾಗುತ್ತವೆ ಜೊತೆಗೆ ದೆಹಲಿಯಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸುವುದಾಗಿ ಮಾತು ಕೊಟ್ಟಿದ್ದಾರೆ, ಜೂನ್ ೪ ರಂದು ನಡೆಯುವ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಯನ್ನೇ ಉಲ್ಟಾ ಮಾಡಲಿದೆ ಎಂದು ಹೇಳಿದ್ದಾರೆ.

ದೆಹಲಿಯ ಎಲ್ಲ ಏಳು ಸ್ಥಾನಗಳಲ್ಲೂ ಇಂಡಿಯಾ ಮೈತ್ರಿಗೆ ಗೆಲುವಾಗಲಿದೆ ಈ ಫಲಿತಾಂಶದಿಂದ ಮೋದಿ ಅವರಿಗೆ ನಿರಾಸೆಯಾಗಲಿದೆ ಯಾವುದಕ್ಕೂ ಜೂನ್ ನಾಲ್ಕರ ಫಲಿತಾಂಶ ಬರುವವರೆಗೆ ಕಾಯೋಣ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಸೆಡ್ಡು: ಸರ್ಕಾರಿ ಶಾಲೆಯ ಅಡ್ಮಿಷನ್ ಗಾಗಿ ರಾತ್ರಿಯಿಡೀ ಕ್ಯೂ ನಿಂತ ಪಾಲಕರು

Advertisement

Advertisement

Udayavani is now on Telegram. Click here to join our channel and stay updated with the latest news.

Next