Advertisement

ತಮಗಿಂತ ಚಿಕ್ಕ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ಹೇಳಿಕೊಂಡ ರಶ್ಮಿಕಾ

11:46 AM Nov 12, 2021 | Team Udayavani |

ಕನ್ನಡತಿ, ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ಎಂಬೆಲ್ಲಾ ಹೆಸರುಗಳಿಂದ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಬಳಗ ಬಹಳಾ ದೊಡ್ಡದಿದೆ. ಅಂದ ಮಾತ್ರಕ್ಕೆ ಇವರ ಬಗ್ಗೆ ಟ್ರೋಲ್ ಗಳಿಗೆನೂ ಕಡಿಮೆ ಇಲ್ಲ. ಹಾಗಾಗ್ಗೆ ನಟಿ ರಶ್ಮಿಕಾ ಮಂದಣ್ಣ ಸುದ್ದಿಯಾಗುತ್ತಲೇ ಇರ್ತಾರೆ. ಇವರ ಹೇಳಿಕೆಗಳು ಕೂಡ ಟ್ರೋಲಿಗರಿಗೆ ಆಹಾರವಾಗುತ್ತವೆ.

Advertisement

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಒಂದು ಸಂದರ್ಶನದಲ್ಲಿ ತಮ್ಮ ಡೇಟಿಂಗ್ ಬಗ್ಗೆ ಹೇಳಿಕೊಂಡಿದ್ದಾರೆ. ತನಗಿಂತಲೂ ಕಿರಿಯ ಹುಡುಗನ ಜೊತೆ ಡೇಡಿಂಗ್ ಮಾಡುವ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ.

ಕುಶಾ ಕಪಿಲಾ ಅವರ ದಿ ಸ್ವೈಲ್ ರೈಟ್ (Kusha Kapila’s ‘The Swipe Right’) ಕಾರ್ಯಕ್ರಮದಲ್ಲಿ, ರಶ್ಮಿಕಾ ಮಂದಣ್ಣ ಅವರನ್ನು ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ಅವರ ಅಭಿಪ್ರಾಯ ಏನು ಎಂದು ಪ್ರಶ್ನಿಸಲಾಯಿತು. ಅದಕ್ಕೆ ಬುದ್ಧಿವಂತಿಕೆಯಿಂದ ಅವರು ಉತ್ತರ ನೀಡಿದ್ದಾರೆ. ವಯಸ್ಸು ಮುಖ್ಯವಾಗುವುದಿಲ್ಲ. ವ್ಯಕ್ತಿ ಮುಖ್ಯವಾಗುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.

Advertisement

ತಮ್ಮ ಬಾಲ್ಯದ ಮತ್ತು ಕಾಲೇಜಿನ ದಿನಗಳನ್ನು ಮೆಲುಕು ಹಾಕಿದ ನಟಿ ಕೊಡಗಿನ ಕಡೆಯಲ್ಲಿ ಮನೆಗಳು ಒಂದಕ್ಕೊಂದು ತುಂಬಾ ದೂರದಲ್ಲಿವೆ. ಅದ್ರಿಂದ ಅಲ್ಲಿ ಹುಡುಗರು ಎಲ್ಲಿದ್ದಾರೆ ಎಂದು ಹುಡುಕಬೇಕು. ನಾನು ಮಡಿಕೇರಿಯಲ್ಲಿದ್ದಾಗ ನನಗೆ ಕೂರ್ಗಿ ಹುಡುಗ ಸಿಕ್ಕಿರಲಿಲ್ಲ. ಹಾಗಾಗಿ, ಕೂರ್ಗಿ ಹುಡುಗರು ಎಲ್ಲಿಗೆ ಹೋಗಿದ್ದಾರೆ ಎಂದು ನಾನು ನನ್ನ ಅಪ್ಪ-ಅಮ್ಮನನ್ನು ಕೇಳುತ್ತಿದ್ದೆ ಎಂದು ನಟಿ ರಶ್ಮಿಕಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next