Advertisement

Viral: “RCB ಕಪ್‌ ಗೆಲ್ಲುವವರೆಗೆ ಶಾಲೆಗೆ ಸೇರುವುದಿಲ್ಲ…”

05:25 PM Apr 27, 2023 | Team Udayavani |

ಬೆಂಗಳೂರು: ಇತ್ತೀಚಿನ ಕೆಲವು ವರ್ಷಗಳಲ್ಲಿ IPL ಪಂದ್ಯದ ವೇಳೆ ತಮ್ಮ ನೆಚ್ಚಿನ ತಂಡದ ಬಗ್ಗೆ, ಆಟಗಾರನ ಬಗ್ಗೆ ಆಕರ್ಷಕ ಬರಹಗಳಿಂದ ಕೂಡಿದ ಫಲಕಗಳನ್ನು ಹಿಡಿದು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವುದನ್ನು ನಾವು ನೋಡಿದ್ಧೇವೆ.

Advertisement

ಆದರೆ ಕೆಕೆಆರ್‌ ವಿರುದ್ಧದ ಆರ್‌ಸಿಬಿ ಪಂದ್ಯದ ವೇಳೆ ಆರ್‌ಸಿಬಿ ಜೆರ್ಸಿ ತೊಟ್ಟ ಪುಟ್ಟ ಬಾಲಕಿಯೊಬ್ಬಳು, ʻನಾನು ಆರ್‌ಸಿಬಿ ಗೆಲ್ಲುವವರೆಗೂ ಶಾಲೆಗೆ ಸೇರುವುದಿಲ್ಲʼ ಎಂದು ಪ್ಲಕಾರ್ಡ್‌ ಹಿಡಿದಿದ್ದಾಳೆ.  ಪಂದ್ಯದ ವೇಳೆ ಈಕೆ ಪ್ಲಕಾರ್ಡ್‌ ಹಿಡಿದಿದ್ದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

 

2007 ರಲ್ಲೇ ಭಾರತದಲ್ಲಿ ಐಪಿಎಲ್‌ ಪ್ರಾರಂಭವಾಗಿದ್ರೂ, ಈ ವರೆಗೆ ಆರ್‌ಸಿಬಿ ಒಂದು ಬಾರಿಯೂ ಚಾಂಪಿಯನ್‌ ಪಟ್ಟಕ್ಕೇರಿಲ್ಲ.

Advertisement

ಇದೀಗ ಪುಟ್ಟ ಬಾಲಕಿ ಪಂದ್ಯದ ವೇಳೆ ಈ ರೀತಿಯ ಪ್ಲಕಾರ್ಡ್‌ ಹಿಡಿದುಕೊಂಡದ್ದು ನೋಡಿ ನೆಟ್ಟಿಗರು ಈ ಬಾರಿಯಾದರೂ ಆರ್‌ಸಿಬಿ ಕಪ್‌ ಗೆಲ್ಲಲಿ ಎಂದು ಹಾರೈಸಿದ್ದಾರೆ.  ಇನ್ನೂ ಕೆಲವರು ʻಪ್ರೀತಿಯ ಆರ್‌ಸಿಬಿ. ಈ ಬಾರಿ ಈ ಮುದ್ದು ಮಗುವಿಗಾಗಿಯಾದರೂ ಕಪ್‌ ಗೆಲ್ಲಿʼ ಎಂದು ಬರೆದುಕೊಂಡಿದ್ಧಾರೆ.

ಸದ್ಯ ಈ ಐಪಿಎಲ್‌ನಲ್ಲಿ 8 ಪಂದ್ಯಗಳನ್ನಾಡಿರುವ ಆರ್‌ಸಿಬಿ ಆಡಿದ 8 ಪಂದ್ಯಗಳ ಪೈಕಿ 4 ನ್ನಷ್ಟೇ ಗೆದ್ದಿದೆ.

ಇದನ್ನೂ ಓದಿ: IPL; ಮಹಿಳೆಯೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನ ಅನುಚಿತ ವರ್ತನೆ: ವರದಿ

Advertisement

Udayavani is now on Telegram. Click here to join our channel and stay updated with the latest news.

Next