Advertisement

Hubli–Dharwad; ಡ್ರಗ್ಸ್ ಹಬ್ ಆಗಲು ಬಿಡುವುದಿಲ್ಲ: ಡಾ.ಜಿ.ಪರಮೇಶ್ವರ್

06:50 PM Aug 18, 2023 | Team Udayavani |

ಹುಬ್ಬಳ್ಳಿ: ಯಾವುದೇ ಕಾರಣಕ್ಕೂ ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಡ್ರಗ್ಸ್ ಹಬ್ ಆಗಲು ಬಿಡುವುದಿಲ್ಲ. ಇದು ಇಲ್ಲದಂತೆ ಮಾಡಲು ಆರು ತಿಂಗಳ ಗಡುವು ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

Advertisement

ಶುಕ್ರವಾರ ಆಯುಕ್ತರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ರಾಜ್ಯದಲ್ಲಿ ಡ್ರಗ್ಸ್ ನಿಲ್ಲಿಸಲು ನಿರ್ಧರಿಸಿದ್ದೇವೆ. ಹು-ಧಾಗೆ ಗೋವಾ, ಒಡಿಶಾಗಳಿಂದ ಡ್ರಗ್ಸ್ ಬರಬಹುದು. ಇಲ್ಲಿಯ ಜನರಿಗೆ ಅನಾಹುತ ಆಗಬಾರದು ಎಂದು ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ. ಆರು ತಿಂಗಳು ಅವಕಾಶ ನೀಡಿದ್ದೇನೆ. ಇದನ್ನು ತಡೆಗಟ್ಟದಿದ್ದರೆ‌ ನಂತರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ಹಬ್ ಆಗಲು ಬಿಡುವುದಿಲ್ಲ ಎಂದರು.

ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಮಸ್ಯೆಯಿದೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು.‌ ಸರ್ಕಾರದ ನೀತಿನಿಯಮಗಳ ಮಾರ್ಗದರ್ಶನ ನೀಡಿ ಜನರ ಸಮಸ್ಯೆ ಬಗೆಹರಿಸಬೇಕು. ಹು-ಧಾದಲ್ಲೂ ಅಪರಾಧಗಳ ಸಂಖ್ಯೆ ಭಿನ್ನವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ ಶಾಂತಿಯಿ‌ದ ಇದೆ. ಎಲ್ಕೆಡೆ ಇರುವಂತೆ ಇಲ್ಲಿಯೂ ನಿಯಂತ್ರಣದಲ್ಲಿದೆ. ಜ್ವಲಂತ ಸಮಸ್ಯೆಗಳು ಮೊದಲಿನಂತೆ ಇಲ್ಲ ಎನ್ನುವುದು ಅಂಕಿಅಂಶಗಳಿಂದ ತಿಳಿದು ಬಂದಿದೆ ಎಂದರು.

ಪ್ರತಿ ತಿಂಗಳು ಎಸ್ಸಿ, ಎಸ್ಟಿ ಸಭೆ ಮಾಡಿ ಅವರ ಅಹವಾಲುಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಠಾಣೆ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸಭೆ ನಡೆಸಬೇಕು. ಈ ಬಗ್ಗೆ ಕಮಿಷನರೇಟ್ ನಲ್ಲಿಯೂ ದಾಖಲೆ ಇಡಲು ಹೇಳಿದ್ದೇನೆ. ಪ್ರತಿ ತಿಂಗಳು ಪಿಎಸ್ ಐ ಮೇಲಿರುವವರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಪೊಲೀಸ್ ಡೇ ಆಚರಿಸಬೇಕು. ಒಂದು ದಿನ ಟ್ರಾಫಿಕ್, ಕಾನೂನು ಮತ್ತು ಪೊಲೀಸ್ ಸಹಾಯದ ಬಗ್ಗೆ ತಿಳಿಸಬೇಕು.‌ ಇದರ ದಾಖಲೆಗಳನ್ನು ಸಹ ಇಡಬೇಕು. ಮಕ್ಕಳಿಗೆ ಪೊಲೀಸರ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಾರದು. ಜ‌ನಸ್ನೇಹಿ ಪೊಲೀಸ್ ಆಗಲು ಸೂಚಿಸಿದ್ದೇನೆ ಎಂದರು.

ಹುಬ್ಬಳ್ಳಿಯ ಈದ್ಗಾ ಮೈದಾನ ಜಾಗ ಪಾಲಿಕೆಗೆ ಸಂಬಂಧಿಸಿದ್ದು. ಅಲ್ಲಿ ಈ ಬಾರಯೂ ಗಣೇಶೋತ್ಸವ ಆಚರಣೆ ಮಾಡಬೇಕೋ ಇಲ್ಲವೋ ಎಂಬುದನ್ನು ಪಾಲಿಕೆಯೇ ನಿರ್ಧಾರ ಮಾಡಬೇಕು. ಅವರು ಸನ್ನಿವೇಶ, ಪರ, ವಿರೋಧ ಪರಿಶೀಲನೆ ಮಾಡಿ ನಿರ್ಧಾರ ಮಾಡಬೇಕು. ಸರ್ಕಾರವು ಸೂಕ್ತ ನಿರ್ಧಾರ ಮಾಡುತ್ತದೆ ಎಂದರು.

Advertisement

ಜಾತಿನಿಂದನೆ ಮಿಸ್ ಯೂಸ್ ಆಗಲು ಹಾಗೂ ಕಾನೂನು ಬಿಟ್ಟು ಕ್ರಮ‌ಕೈಗೊಳ್ಳಲು ಬಿಡುವುದಿಲ್ಲ. ಅಮಾಯಕರು, ರೈತರು, ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿದ್ದರೆ ಅದನ್ನು ಪರಿಶೀಲಿಸಿ ಮುಂದಿನ ಕ್ರಮ‌ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next