ಹೊಸದಿಲ್ಲಿ: ಇತ್ತೀಚೆಗೆ ಭಾರತದ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಹಾರ್ದಿಕ್ ಪಾಂಡ್ಯಾ ಕೂಡ ಒಬ್ಬರು. ಆದರೆ 2019ರಲ್ಲಿ ಪಾಂಡ್ಯಾ ಬೆನ್ನು ಗಾಯಕ್ಕೆ ಒಳಗಾಗಿ ಸುದೀರ್ಘ ಸಮಯದ ವರೆಗೆ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಮುಂಬಯಿ ಇಂಡಿಯನ್ಸ್ ತಂಡ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹಾರ್ದಿಕ್ ಮೇಲೆ ಇಟ್ಟಿರುವ ನಿರೀಕ್ಷೆ ಅಪಾರ. ಐಪಿಎಲ್‌ನ ಈ ಋತುವಿನಲ್ಲಿ ಹಾರ್ದಿಕ್ ಮುಂದೆ ಬಹುಡೊಡ್ಡ ಸವಾಲಿದೆ ಎಂದರೆ ತಪ್ಪಾಗಲಾರದು.
ಇದುವರೆಗೆ ಸಿಎಸ್‌ಕೆ ಮತ್ತು ಕೆಕೆಆರ್ ವಿರುದ್ದದ ಪಂದ್ಯಗಳಲ್ಲಿ ಹಾರ್ದಿಕ್‌ಗೆ ಬೌಲಿಂಗ್ ಮಾಡಲು ಅವಕಾಶ ನೀಡಿಲ್ಲ. ಇಂದು ನಡೆಯುವ ಆರ್‌ಸಿಬಿ ವಿರುದ್ದದ ಪಂದ್ಯದಲ್ಲಾದರೂ ಮತ್ತೆ ಹಾರ್ದಿಕ್ ಬೌಲಿಂಗ್ ದಾಳಿಗೆ ಇಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಪಾಂಡ್ಯಾ ಮತ್ತೆ ಯಾವಾಗ ಬೌಲಿಂಗ್ ಮಾಡುತ್ತಾರೆ ಎಂಬ ಪ್ರಶ್ನೆಗೆ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಕಾರ್ಯಚರಣೆಯ ನಿರ್ದೇಶಕ (ಡಿಸಿಒ) ಜಹೀರ್ ಖಾನ್ ಉತ್ತರಿಸಿದ್ದಾರೆ. ಪಾಂಡ್ಯಾ ಬೌಲಿಂಗ್ ಮಾಡಲು ಉತ್ಸುಕನಾಗಿದ್ದು, ಆದರೆ ಆತನ ದೇಹ ಬೌಲಿಂಗ್ ಗೆ ತಯಾರಿದೆಯಾ ಎನ್ನುವುದನ್ನು ಮ್ಯಾನೇಜ್ ಮೆಂಟ್ ಖಚಿತ ಪಡಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ 85 ರನ್ ಗಳಿಸಿದರೆ ಸಾಕು ಈ ಹೊಸ ಮೈಲಿಗಲ್ಲು ಸಾಧಿಸಲು!
ಹಾರ್ದಿಕ್ ಬೌಲಿಂಗ್ ಮಾಡುವುದನ್ನು ನಾನು ಎದರು ನೋಡುತ್ತಿದ್ದೇನೆ. ಯಾವುದೇ ಸಂದರ್ಭದಲ್ಲೂ ಪಂದ್ಯದ ಗತಿಯನ್ನು ಬದಲಿಸಬಲ್ಲ ಸಾಮರ್ಥ್ಯ ಆತನಿಗಿದೆ. ಆತ ಬೌಲಿಂಗ್ ಮಾಡಲು ಸಮರ್ಥನಾಗಿದ್ದಾನಾ ಎಂಬುದಕ್ಕೆ ಫಿಟ್ನೆಸ್ ತಜ್ಞರ ಸಲಹೆ ಅಗತ್ಯವಿದೆ ಎಂದು ಜಹೀರ್ ಖಾನ್ ಹೇಳಿದರು.
ಪ್ರಸಕ್ತ ಐಪಿಎಲ್ ಋತುವಿನ ಸಿಎಸ್‌ಕೆ ಮತ್ತು ಕೆಕೆರ್ ವಿರುದ್ದದ ಪಂದ್ಯಗಳಲ್ಲಿ ಕ್ರಮವಾಗಿ ಹಾರ್ದಿಕ್ 18 ಮತ್ತು 14 ರನ್ ಗಳಿಸಿದ್ದಾರೆ. ಇದರಿಂದ ಆತ ಬ್ಯಾಟಿಂಗ್‌ನಲ್ಲಿ ಫಿಟ್ ಎನಿಸಿದರೂ ಬೌಲಿಂಗ್ ಮಾಡುವುದು ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.