Advertisement

ಬೈರಗೊಂಡ್ಲು ಬಫರ್ ಡ್ಯಾಂ ಸ್ಥಳಾಂತರಿಸಿದರೆ ಹೋರಾಟ: ನಂಜಾವಧೂತ ಸ್ವಾಮೀಜಿ

05:58 PM Aug 03, 2022 | Team Udayavani |

ಕೊರಟಗೆರೆ: ಎತ್ತಿನ ಹೊಳೆ ಯೋಜನೆಯಲ್ಲಿ ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಗ್ರಾಮದಲ್ಲಿ ಬಫರ್ ಡ್ಯಾಂ ನಿರ್ಮಾಣವನ್ನು ಪರಿಹಾರ ನೆಪವೊಡ್ಡಿ ಸ್ಥಳಾಂತರಿಸಿದರೆ ರೈತರ ಮತ್ತು ನೊಂದವರ ಜತೆಗೂಡಿ ಹೋರಾಟ ಮಾಡಲಾಗುವುದು ಎಂದು ಸ್ಪಟಿಕಪುರಿಯ ಶ್ರೀ ನಂಜಾವಧೂತ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಶವಾರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಸರ್ಕಾರದ ಅಂತಿಮ ದಿನಗಳಲ್ಲಿ ಎತ್ತಿನಹೊಳೆ ಯೋಜನೆಗೆ 8000 ಕೋಟಿ ರೂಗಳನ್ನು ಮಿಸಲಿಡಲಾಯಿತು, ನಂತರ ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಅಂದು ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಗ್ರಾಮದ ಬಳಿ ಬಫರ್ ಡ್ಯಾಂನ್ನು ನಿರ್ಮಿಸಿ ನೀರು ನಿಲ್ಲಿಸಲು ಸರ್ಕಾರ ಮತ್ತು ಆಧಿಕಾರಿಗಳು ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದರು. ಈ ಡ್ಯಾಂ ನಿರ್ಮಾಣಕ್ಕೆೆ ದೊಡ್ಡಬಳ್ಳಾಪುರ ಮತ್ತು ಕೊರಟಗೆರೆ ತಾಲೂಕಿನ ಭೂಮಿ ಕಳೆದುಕೊಳ್ಳುವ ರೈತರಿಗೆ ಸಮಾನ ಪರಿಹಾರ ನೀಡಬೇಕಾದದ್ದು ನ್ಯಾಯ, ಎರಡೂ ತಾಲೂಕುಗಳು ಬೆಂಗಳೂರು ನಗರಕ್ಕೆ ಹತ್ತಿರವಾಗಿವೆ. ಒಂದೇ ಕೂಡಿದ ಬದುಗಳ ಹೊಲಕ್ಕೆ ತಾರತಮ್ಯ ಪರಿಹಾರ ಎಂದರೆ ರೈತರಿಗೆ ಅನ್ಯಾಯವಾಗುತ್ತದೆ. ಇದನ್ನು ಸರ್ಕಾರ ರೈತರ ಮೇಲೆ ಕಾಳಜಿ ವಹಿಸಿ ಕಾನೂನು ಅಡಿಯಲ್ಲಿ ಸಮಾನ ಪರಿಹಾರ ನೀಡಬೇಕು, ನೊಂದಣಿ ಬೆಲೆಗಿಂತ ಭೂಮಿಗೆ ನಾಲ್ಕು ಪಟ್ಟು ಹೆಚ್ಚು ಪರಿಹಾರ ಸಮಾನವಾಗಿ ಎರಡು ತಾಲೂಕು ರೈತರಿಗೆ ನೀಡಬೇಕು, ಇದನ್ನು ಮಾಡದೆ ಬಫರ್ ಡ್ಯಾಂ ನ್ನು ಬೈರಗೊಂಡ್ಲು ಗ್ರಾಮದಿಂದ ದೊಡ್ಡಬಳ್ಳಾಪುರಕ್ಕೆ ಸಂಪೂರ್ಣ ಸ್ಥಳಾಂತರಿಸಿದರೆ ಹಾಗೂ ಹಿಂದೆ ನಿಗೋಳಿಸಿರುವ ನೀರಿನ ಪ್ರಮಾಣ ಕಡಿಮೆ ಮಾಡಿದರೆ ಶ್ರೀ ಮಠವು ರೈತರ ಮತ್ತು ನೊಂದವರ ಜತೆಗೂಡಿ ಹೋರಾಟ ಮಾಡುವುದು ಎಂದು ಎಚ್ಚರಿಸಿದರು.

ವಿಳಂಬ ನೀತಿ ಕಾರಣ
ಎತ್ತಿನ ಹೊಳೆ ಯೋಜನೆಯ ಹಲವು ಗೊಂದಲಕ್ಕೆ ಕಾಮಗಾರಿಗಳ ಅನುಷ್ಠಾನಕ್ಕೆ ಹಣ ಬಿಡುಗಡೆಯಲ್ಲಿ ಸರ್ಕಾರದ ವಿಳಂಬ ನೀತಿ ಕಾರಣ, ಇದರಿಂದ ಯೋಜನಾ ಮೊತ್ತವು ನಿಗದಿತ ಪೂರ್ವ ಯೋಜನೆಗಿಂತ ನಾಲ್ಕು ಪಟ್ಟು ಹೆಚ್ಚಾಗುತ್ತದೆ ಸಾರ್ವಜನಿಕರ ತೆರಿಗೆ ಹಣ ವೃತಾ ವ್ಯಯವಾಗುತ್ತದೆ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅದ್ಯತೆ ಮತ್ತು ನಿಗದಿತ ಸಮಯಕ್ಕೆ ಹಣ ಬಿಡುಗಡೆ ಗೊಳಿಸಿಬೇಕು ಬಯಲು ಸೀಮೆಯ ನೀರಾವರಿ ಹೋರಾಟಕ್ಕೆ ಮತ್ತು ಅನುಷ್ಟಾನ ಸಹಕಾರಕ್ಕೆ ಶ್ರೀ ಮಠವು ಸದಾ ಸಿದ್ದ ಎಂದರು.

ಈ ಸಂರ್ದರ್ಭದಲ್ಲಿ ಮಾಜಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿ.ಕೆ.ವಿರಕ್ಯಾತರಾಯ ಮುಖಂಡರುಗಳಾದ ವಿರಪ್ಪರೆಡ್ಡಿ, ಲೋಕೇಶ್, ರಾಘವೇಂದ್ರರಾವ್, ಜಗದೀಶ್, ಸಿದ್ದಾರೆಡ್ಡಿ, ಬಾಲಕೃಷ್ಣರೆಡ್ಡಿ, ದರ್ಶನ್, ನಾರಾಯಣಪ್ಪ, ಸೇರಿದಂತೆ ಇತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next