Advertisement

ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದಾ?: Shettar ವಿರುದ್ಧ ಈಶ್ವರಪ್ಪ ಬಹಿರಂಗ ಪತ್ರ

03:05 PM Apr 17, 2023 | Team Udayavani |

ಶಿವಮೊಗ್ಗ: ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಹಿರಂಗ ಪತ್ರ ಬರೆದು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಜಗದೀಶ್ ಶೆಟ್ಟರ್ 40 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿದ ವ್ಯಕ್ತಿ. ಅವರೊಬ್ಬ ಸಿದ್ದಾಂತವಾದಿ ಅಂದುಕೊಂಡಿದ್ದೆ, ಅವರ ತಂದೆ ಶಿವಪ್ಪ ಶೆಟ್ಟರ್ ಮೇಯರ್ ಆಗಿದ್ದರು. ಜನಸಂಘದಿಂದ ಬಂದವರಾಗಿದ್ದರು. ಈ ಪಕ್ಷದ ವಿಚಾರ ಸಿದ್ದಾಂತ ಅರ್ಥ ಮಾಡಿಕೊಂಡವರು. ಅವರ ತಂದೆ ರಾಜಕಾರಣಕ್ಕೆ ಬಂದಾಗ ನಾವು ಅಧಿಕಾರಕ್ಕೆ ಬರ್ತೇವೆ ಎಂಬ ಕನಸು ಕಂಡಿರಲಿಲ್ಲ. ಬಿಜೆಪಿಗೆ ಅಭ್ಯರ್ಥಿಗಳೇ ಇರಲಿಲ್ಲ ಅಂತಹ ಕಾಲ.
ಅಧಿಕಾರ ಬಂದಾಗ ಬೇರೆ ಬೇರೆ ಪಕ್ಷದಿಂದ ಬಂದರು, ಕೆಲವರಿಗೆ ಅಧಿಕಾರ ಸಿಗಲಿಲ್ಲ ಬಿಟ್ಟು ಹೋದರು. ಅಧಿಕಾರಕ್ಕೆ ಬಂದವರು ಅಧಿಕಾರ ಸಿಗಲಿಲ್ಲ ಎಂದು ಹೋದರು ಅಂತಹವರ ಬಗ್ಗೆ ‌ಮಾತನಾಡಲ್ಲ. ಆದರೆ ಶೆಟ್ಟರ್ ಹೋರಾಟ ಮಾಡಿಕೊಂಡು ಬಂದ ವ್ಯಕ್ತಿ. ಹುಬ್ಬಳ್ಳಿಯಲ್ಲಿ ತಿರಂಗ ಧ್ವಜದ ಹೋರಾಟ ಮಾಡಿದ್ದರು. ರಾಷ್ಟ್ರಧ್ವಜ ಹಾರಿಸುವವರೆಗೂ ಬಿಡಲಿಲ್ಲ ಹೋರಾಟ ಮಾಡಿದವರು ಎಂದು ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ನನಗೆ ಟಿಕೆಟ್ ಕೊಡಲಿಲ್ಲ, ಸರಿಯಾಗಿ ನಡೆಸಿಕೊಡಲಿಲ್ಲ ಎಂದಿದ್ದಾರೆ. ಅವರ ಮಾತು ಕೇಳಿ ನೋವಾಯ್ತು, ಕಾಂಗ್ರೆಸ್ ನಲ್ಲೇ ಹಲವು ಗುಂಪು ಇದ್ದಾವೆ. ಇವರು ಯಾವ ಗುಂಪಿಗೆ ಹೋಗ್ತಾರೋ ಗೊತ್ತಿಲ್ಲ. ಶೆಟ್ಟರ್ ಹೋರಾಟದ ಭೂಮಿಯಿಂದ ಬಂದವರು ಕಾಂಗ್ರೆಸ್ ಗೆ ಸೇರಿದ್ದಾರೆ. ಹೋರಾಟ ನಿಮಗೆ ರಕ್ತಗತವಾಗಿ ಬಂದಿದೆ. ಕಾಂಗ್ರೆಸ್ ನಿಮಗೆ ಒಂದು ಟಿಕೆಟ್ ‌ಕೊಟ್ಟಿರಬಹುದು ಆದರೆ ಹೋರಾಟದ ಮಣ್ಣಿನಲ್ಲಿ ನೀವು ಗೆಲ್ಲುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಅಂದುಕೊಳ್ಳಿ, ಗೋಹತ್ಯೆ ಬಿಲ್ ಹಿಂಪಡೆಯುತ್ತೇವೆ ಅಂದಿದ್ದಾರೆ, ನೀವು ಆಗ ಯಾರಿಗೆ ಬೆಂಬಲಿಸುತ್ತೀರಿ? ಒಂದು ಟಿಕೆಟ್ ನಿಮ್ಮ ಇಡೀ ಸಿದ್ದಾಂತವನ್ನೇ ಬದಲು ಮಾಡಿತಲ್ಲ. ಕೇವಲ ಅಧಿಕಾರಕ್ಕಾಗಿ ನೀವು ಕಾಂಗ್ರೆಸ್ ಸೇರ್ತೀರಾ ಅಂದಿದ್ದರೆ ಪಕ್ಷ ನಿಮ್ಮನ್ನು ಇಷ್ಟು ಬೆಳೆಸುತ್ತಿರಲಿಲ್ಲ. ವಿಪಕ್ಷ ನಾಯಕ, ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ ಮಾಡ್ತು‌ ಇನ್ನೇನು ಮಾಡಬೇಕು? ಚನ್ನಾಗಿ ನಡೆಸಿಕೊಂಡಿಲ್ಲ ಅಂದರೆ ಅರ್ಥ ಏನು ಎಂದು ಪ್ರಶ್ನಿಸಿದ್ದಾರೆ.

ಸಾಮಾನ್ಯ ಕಾರ್ಯಕರ್ತ ಯಾರ ಮೇಲೆ ಭರವಸೆ ಇಟ್ಟುಕೊಳ್ಳಬೇಕು. ಅಧಿಕಾರಕ್ಕೆ ಬಂದರೆ ಪಿಎಫ್ ಐ ನಿಷೇಧ ಹಿಂಪಡೆಯುತ್ತೇವೆ ಎಂದು ಡಿಕೆಶಿ, ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ ನೀವು ಭಯೋತ್ಪಾದನೆಗೆ ಬೆಂಬಲಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದಾ? ಬಿಜೆಪಿಗೆ ಇಷ್ಟೆಲ್ಲಾ ಕೆಲಸ ಮಾಡಿದಿರಿ. ಕಾಂಗ್ರೆಸ್ ಗೆ ಯಾಕೆ ಸೇರಿದಿರಿ ಎಂದು ನಿಮ್ಮ ಮೊಮ್ಮಗ ಕೇಳಿದರೆ ಏನು ಹೇಳುತ್ತೀರಿ? ಅವನು ಸಹ ಛೀ ಥೂ ಅಂತಾನೆ. ನೀವು ಕ್ಷಮೆ ಕೇಳಿ ಧರ್ಮ ಉಳಿಸಿದ, ತತ್ವ ಸಿದ್ದಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು. ಈಗಲೂ ಕಾಲ ಮಿಂಚಿಲ್ಲ‌ ನೀವು ವಾಪಸ್ ಬರಬಹುದು. ದೊಡ್ಡ ದೊಡ್ಡ ಭಾಷಣ ಮಾಡಿ ನೀವೇ ಜಾರಿಗೆ ತಂದ ಬಿಲ್ ವಾಪಸ್ ಪಡೆಯಲು ಬೆಂಬಲಿಸುತ್ತೀರಾ? ನನ್ನ ಬಹಿರಂಗ ಪತ್ರ ಪತ್ರಕ್ಕೆ ಶೆಟ್ಟರ್ ಉತ್ತರ ಕೊಡಬೇಕು. ನಾನು ಬಹಿರಂಗ ಪತ್ರ ಬರೆದಾಗ ನಿಮಗೆ ನೋವು ಆಗಬಹುದು. ನೀವು ರಾಜೀನಾಮೆ ಕೊಟ್ಟಿದ್ದು ನನಗೆ ಆಘಾತವಾಯ್ತು. ಹೀಗಾಗಿ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

Advertisement

ಧರ್ಮೇಂದ್ರ ಪ್ರಧಾನ್ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ನನಗೆ ಪೋನ್ ಮಾಡಿದ್ದರು. ಅವರು ಪೋನ್ ಮಾಡಿದ 10ನಿಮಿಷಕ್ಕೆ ನಾನು‌ ಪತ್ರ ಬರೆದೆ .ನತರ ನಿವೃತ್ತಿ ತೆಗೆದುಕೊಳ್ಳಬೇಕು ಅಂದಾಗ ಶೆಟ್ಟರ್ ಅವರ ಜೊತೆ ಮಾತನಾಡಿದ್ದೆ. ಟಿಕೆಟ್ ಕೊಡಬೇಕು ಅಂತ ಲಕ್ಷ ಲಕ್ಷ ಕಾರ್ಯಕರ್ತರು ಇದ್ದಾರೆ. ನಿನಗೆ ಏಕೆ ಟಿಕೆಟ್ ಕೊಡಬೇಕು. ಯಾರಿಗೆ ಟಿಕೆಟ್ ಕೊಡಬೇಕು, ಏಕೆ ಕೊಡಬೇಕು ಅಂತ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಹಿರಿಯರು ನಮಗಿಂತ ಬುದ್ದಿವಂತರು ಇದ್ದಾರೆ ಎಂದು ಹೇಳಿದ್ದಾರೆ.

ಲಕ್ಷ್ಮಣ ಸವದಿ ಸಂಘ ಪರಿವಾರದಿಂದ ಬಂದವರಲ್ಲ. ಹೀಗಾಗಿ ಅವರ ಬಗ್ಗೆ ನಾನು ಅಷ್ಟು ಮಾತನಾಡುವುದಿಲ್ಲ.ಶೆಟ್ಟರ್ ಸಂಘಪರಿವಾರದಿಂದ ಬಂದವರು.ಹೀಗಾಗಿ ಅವರು ಪಕ್ಷ ಬಿಟ್ಟಿದ್ದು ನೋವಾಯಿತು. ಅವರು ವಾಪಸ್ ಬಂದರೆ ಬಹಳ ಸಂತೋಷ, ಇಲ್ಲದಿದ್ದರೆ ನೋವಾಗುತ್ತದೆ.

ಸೀಟ್ ಕಳೆದುಕೊಂಡರೆ ನಮಗೇನು ಬೇಜಾರಿಲ್ಲ. ಈ ದೇಶ ಉಳಿಯಬೇಕು ಅಂತ ಅನೇಕರು ಬೆಂಬಲ ಕೊಡುತ್ತಿದ್ದಾರೆ. ಚುನಾವಣೆ ಹಿನ್ನಡೆ ಬಹಳ ದೊಡ್ಡದಲ್ಲ. ಎರಡು ಸೀಟ್ ಇದ್ದು ಅಧಿಕಾರಕ್ಕೆ ಬಂದ ಪಕ್ಷ ನಮ್ಮದು. ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿತು.ವರುಣದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇವೆ

ನಾನು ಚುನಾವಣ ರಾಜಕಾರಣದಿಂದ ಹಿಂದೆ ಸರಿದಿದ್ದೇನೆ. ಈ ಬಗ್ಗೆ ಅವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ದ ಎಂದು ಈಶ್ವರಪ್ಪ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next