ಮುಂಬಯಿ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವಿನ ವಾಕ್ಸಮರ ಮುಂದುವರಿದಿದ್ದು, ಫಡ್ನಾವೀಸ್ ಭೂಗತಜಗತ್ತಿನೊಂದಿಗೆ ಹೊಂದಿರುವ ನಂಟನ್ನು ನಾಳೆ ಬಹಿರಂಗಪಡಿಸುವುದಾಗಿ ತಿಳಿಸಿದ್ದು, ತಾನು ಹೈಡ್ರೋಜನ್ ಬಾಂಬ್ ಹಾಕುವ ಉಪಮೆ ಮೂಲಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಮಹಿಳಾ ವಿವಿಯಿಂದ ಶಿಷ್ಟಾಚಾರ ಉಲ್ಲಂಘನೆ : ಹರಿಹಾಯ್ದ ಸಂಸದ ಜಿಗಜಿಣಗಿ
ನವಾಬ್ ಮಲಿಕ್ ಅವರು ಬಾಂಬೆ ಸ್ಫೋಟ ಆರೋಪಿಗಳ ಜತೆ ನಂಟು ಹೊಂದಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವುದಾಗಿ ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಲಿಕ್, ಫಡ್ನಾವೀಸ್ ಗೆ ಭೂಗತ ಜಗತ್ತಿನೊಂದಿಗೆ ಇರುವ ನಂಟಿನ ಮಾಹಿತಿ ನಾಳೆ ಬಹಿರಂಗಗೊಳಿಸುವುದಾಗಿ ತಿಳಿಸಿದ್ದಾರೆ.
ಭೂಗತಜಗತ್ತಿನೊಂದಿಗೆ ಫಡ್ನಾವೀಸ್ ಅವರ ಸಂಬಂಧವನ್ನು ಜಗಜ್ಞಾಹೀರುಗೊಳಿಸುತ್ತೇನೆ ಎಂದು ಮಲಿಕ್ ಹೇಳಿದ್ದಾರೆ. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಫಡ್ನಾವೀಸ್ ಸುಳ್ಳು ಆರೋಪ ಹೊರಿಸುತ್ತಿರುವುದಾಗಿ ನವಾಬ್ ಮಲಿಕ್ ಹೇಳಿದರು.
1993ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಜತೆ ನವಾಬ್ ಮಲಿಕ್ ಭೂ ವ್ಯವಹಾರ ನಡೆಸುತ್ತಿದ್ದು, ಆರೋಪಿಗಳಿಂದ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಸಿರುವುದಾಗಿ ಫಡ್ನಾವೀಸ್ ಆರೋಪಿಸಿದ್ದರು.