Advertisement

ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ: ಸಿಎಂ ಬೊಮ್ಮಾಯಿ

10:09 AM May 14, 2022 | Team Udayavani |

ಬೆಂಗಳೂರು: ಇಂದಿನ ಕೋರ್ ಕಮಿಟಿ‌ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುತ್ತದೆ. ಅರುಣ್ ಸಿಂಗ್, ಸಂತೋಷ್ ಅವರು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುತ್ತಿದಾರೆ. ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡುತ್ತೇವೆ. ವಿವಿಧ ಚುನಾವಣೆಗಳು ಘೋಷಣೆಯಾಗಿವೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಆರ್ ಟಿ ನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವೋಸ್ ಪ್ರವಾಸ ಬಗ್ಗೆ ಇವತ್ತು ತೀರ್ಮಾನ ಮಾಡುತ್ತೇನೆ. ದಾವೋಸ್ ಗೆ ಆಹ್ವಾನ ಬಂದ ಇಬ್ಬರು ಸಿಎಂಗಳಲ್ಲಿ ನಾನೂ ಒಬ್ಬ. ಹಾಗಾಗಿ ಇದು ಬಹಳ ಮುಖ್ಯವಾದ ಕಾರ್ಯಕ್ರಮ. ರಾಜ್ಯದಲ್ಲಿ ವಿವಿಧ ಚುನಾವಣೆಗಳು ಬಂದಿವೆ. ಹೀಗಾಗಿ ಎಷ್ಟು ದಿನ ಹೋಗಬೇಕು, ಯಾವತ್ತು ಹೋಗಬೇಕೆಂದು ಇವತ್ತು ಮಧ್ಯಾಹ್ನ ತೀರ್ಮಾನ ಮಾಡುತ್ತೇನೆ ಎಂದರು.

ಇದನ್ನೂ ಓದಿ:ನನ್ನ ವಿರುದ್ಧ ಸ್ಪರ್ಧಿಸಲು ಶ್ರೀರಾಮುಲು ಕೇಸ್ ಕೊಡಿಸಿರಬಹುದು; ನಾಗೇಂದ್ರ ಆರೋಪ

ಸಂಪುಟ ವಿಸ್ತರಣೆ ಬಗ್ಗೆ ಎರಡು ಮೂರು ದಿನಗಳಲ್ಲಿ ನಿರ್ಣಯ ತಿಳಿಸ್ತೇವೆ ಎಂಬ ಅಮಿತ್ ಶಾ ಭರವಸೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ರಾಜಕಾರಣದಲ್ಲಿ ಹಾಗೆಲ್ಲ ದಿನ ಗಣನೆ ಮಾಡಕ್ಕಾಗಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next