ಕೋಲ್ಕತ್ತಾ: “ನಮ್ಮ ಹೊಸ ತಂಡಕ್ಕೆ ಇದು ಉತ್ತಮ ಪಂದ್ಯಾವಳಿಯಾಗಿತ್ತು. ನಾವು ಬಲಿಷ್ಠವಾಗಿ ಮರಳುತ್ತೇವೆ” ಇದು ಲಕ್ನೋ ಸೂಪರ್ ಜೈಂಟ್ಸ್ ತಂಡ ಮೆಂಟರ್ ಗೌತಮ್ ಗಂಭಿರ್ ಹೇಳಿದ ಮಾತು. ಬುಧವಾರದ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸೋಲನುಭವಿಸಿ ಕೂಟದಿಂದ ಹೊರಬಿದ್ದ ಬಳಿಕ ಎಲ್ಎಸ್ ಜಿ ಮೆಂಟರ್ ಗಂಭೀರ್ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 14 ರನ್ ಅಂತರದಿಂದ ಗೆದ್ದುಕೊಂಡಿದೆ.
ಇದನ್ನೂ ಓದಿ:ಒಂದು ಶತಕ ಹಲವು ದಾಖಲೆ: ಸಾಧನೆಗಳ ಮೈಲಿಗಲ್ಲು ನೆಟ್ಟ ರಜತ್ ಪಾಟೀದಾರ್
ಮುಖ್ಯ ಕೋಚ್ ಆಂಡಿ ಫ್ಲವರ್ ಮತ್ತು ನಾಯಕ ಕೆಎಲ್ ರಾಹುಲ್ ಜೊತೆಗೆ ಗಂಭೀರ್ ಲಕ್ನೋ ಫ್ರಾಂಚೈಸಿಯ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದಾರೆ. ಲೀಗ್ ಹಂತಗಳಲ್ಲಿ 8 ಪಂದ್ಯಗಳನ್ನು ಗೆದ್ದ ಎಲ್ಎಸ್ ಜಿ ತನ್ನ ಮೊದಲ ಋತುವಿನಲ್ಲಿಯೇ ಪ್ರಭಾವ ಬೀರಿದೆ.
Related Articles
ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಲ್ಕು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದರೆ, ಎಲ್ಎಸ್ ಜಿ ತಂಡ 193 ರನ್ ಗಳಷ್ಟೇ ಕಲೆ ಹಾಕಿತು. ಆರ್ ಸಿಬಿ ಪರ ಯುವ ಆಟಗಾರ ರಜತ್ ಪಾಟೀದಾರ್ ಅಜೇಯ 112 ರನ್ ಬಾರಿಸಿ ತಂಡಕ್ಕೆ ನೆರವಾದರು.