ಮಧುರೈ: “ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಯಾರಾದರೂ ಮುಟ್ಟಿದರೆ, ಅವರ ಕೈ ಕಡಿದು ಹಾಕುತ್ತೇನೆ,’ ಎಂದು ಡಿಎಂಕೆ ಹಿರಿಯ ನಾಯಕ ಟಿ.ಆರ್.ಬಾಲು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
“ನಮ್ಮ ನಾಯಕ, ಡಿಎಂಕೆ ಮುಖ್ಯಸ್ಥಾರದ ಸ್ಟಾಲಿನ್ ಅವರನ್ನು ಯಾರಾದರೂ ಮುಟ್ಟಿದರೆ ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅವರ ಕೈ ಕಡಿದು ಹಾಕುತ್ತೇನೆ. ಇದೇ ನನ್ನ ಧರ್ಮ. ಇದು ಸರಿಯಲ್ಲ ಎಂದು ನಿಮಗೆ ಅನಿಸಿದರೆ ನೀವು ನ್ಯಾಯಾಲಯಕ್ಕೆ ಹೋಗಬಹುದು. ಅಲ್ಲಿ ನಿಮ್ಮ ವಾದವನ್ನು ಮಂಡಿಸಬಹುದು. ಆದರೆ ಆ ವೇಳೆಗೆ, ನಾನು ನನ್ನ ಕೆಲಸವನ್ನು ಪೂರ್ಣಗೊಳಿಸಿರುತ್ತೇನೆ,’ ಎಂದು ಹೇಳಿದ್ದಾರೆ.