ಚಾಮರಾಜನಗರ: ರಾಜ್ಯ ಸರ್ಕಾರ ನಗರಸಭೆಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿದ ಬೆನ್ನಲ್ಲೇ ಚಾಮರಾಜನಗರ ನಗರಸಭೆ ಗದ್ದುಗೆ ಹಿಡಿಯಲು ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ ಪಕ್ಷಗಳ ನಡುವೆ ಪೈಪೋಟಿ ಆರಂಭವಾಗಿದೆ.
ಚಾಮರಾಜನಗರ ನಗರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ವರ್ಗ ಮಹಿಳೆಗೆ ಮೀಸಲಾಗಿದೆಚಾಮರಾಜನಗರ ನಗರಸಭೆಯಲ್ಲಿ ಒಟ್ಟು 31ಸ್ಥಾನಗಳಿವೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 15, ಕಾಂಗ್ರೆಸ್ 8, ಎಸ್‌ಡಿಪಿಐ 6, ಬಿಎಸ್‌ಪಿ 1 ಪಕ್ಷೇತರ1 ಸ್ಥಾನ ಗಳಿಸಿವೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ನಗರಸಭೆಯಲ್ಲಿ ಬಹುಮತ ಗಳಿಸಲು 17 ಸ್ಥಾನಅಗತ್ಯ. ಬಿಜೆಪಿ 15 ಸ್ಥಾನ ಗೆದ್ದಿದ್ದು, 1 ಸಂಸದರಮತವಿದೆ. ಬಿಎಸ್‌ಪಿ ಅಥವಾ ಪಕ್ಷೇತರ ಅಭ್ಯರ್ಥಿಯಲ್ಲಿ ಒಬ್ಬರು ಬೆಂಬಲ ನೀಡಿದರೂ ಆ ಪಕ್ಷಕ್ಕೆ ಬಹುಮತದೊರಕುತ್ತದೆ. ಬಿಎಸ್‌ಪಿಯಿಂದ ಗೆದ್ದಿರುವ 17ನೇ ವಾರ್ಡಿನ ಸದಸ್ಯ ವಿ. ಪ್ರಕಾಶ್, ತಾವು ಈಗಾಗಲೇ ಬಿಎಸ್‌ಪಿಗೆ ರಾಜೀನಾಮೆ ನೀಡಿರುವುದಾಗಿ, ತನ್ನ ರಾಜಕೀಯ ಗುರು ಶಾಸಕ ಎನ್. ಮಹೇಶ್‌ಅವರ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.
ಬಿಎಸ್‌ಪಿಯಿಂದ ಉಚ್ಚಾಟಿತರಾದ ಬಳಿಕ ಮಾನಸಿಕವಾಗಿ ಬಿಜೆಪಿಗೆ ಸನಿಹದಲ್ಲಿರುವ ಎನ್. ಮಹೇಶ್ ಅವರು ಪ್ರಕಾಶ್ ಅವರಿಗೆ ಯಾವ ನಿರ್ದೇಶನ ನೀಡಬಹುದು ಎಂಬುದು ಗುಟ್ಟೇನೂ ಅಲ್ಲ!
ಕಾಂಗ್ರೆಸ್ ಆಕಾಂಕ್ಷಿಗಳು: ಇತ್ತ ಕಾಂಗ್ರೆಸ್ ಪಕ್ಷಕ್ಕೆ 1 ಶಾಸಕರ ಮತವಿದೆ. ಶಾಸಕರ ಮತವೂ ಸೇರಿದರೆ ಅದರ ಸ್ಥಾನ 9, ಎಸ್‌ಡಿಪಿಐ ಬೆಂಬಲ ನೀಡಿದರೆ ಅದರ 6 ಮತವೂ ಸೇರಿ 15 ಮತಗಳಾಗುತ್ತದೆ. ಬಿಎಸ್‌ಪಿ ಸದಸ್ಯ ವಿ. ಪ್ರಕಾಶ್ ಹಾಗೂ ಪಕ್ಷೇತರಸದಸ್ಯ 17 ನೇ ವಾರ್ಡ್‌ನ ಬಸವಣ್ಣ ಇಬ್ಬರ ಬೆಂಬಲ ದೊರೆತರೆ ಮಾತ್ರ ಬಹುಮತ ದೊರಕುತ್ತದೆ. ಇದರಲ್ಲಿ ಒಂದು ಮತ ತಪ್ಪಿದರೂ ಕಾಂಗ್ರೆಸ್‌ಗೆ ಅಧಿಕಾರಮರೀಚಿಕೆ. ಹಾಗಾಗಿ ಪ್ರಸ್ತುತ ವಾತಾವರಣ ಬಿಜೆಪಿಗೆ ಅನುಕೂಲಕರವಾಗಿದೆ.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ 22ನೇ ವಾರ್ಡ್‌ನ ಮಮತಾ ಬಾಲಸುಬ್ರಹ್ಮಣ್ಯ ಪ್ರಬಲ ಆಕಾಂಕ್ಷಿ. ಅವರೊಂದಿಗೆ 7ನೇ ವಾರ್ಡ್‌ನ ಆಶಾ ನಟರಾಜ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅವರ ನಿಕಟವರ್ತಿಯಾದ ಚುಡಾ ಮಾಜಿ ಅಧ್ಯಕ್ಷ ಎಸ್. ಬಾಲಸುಬ್ರಹ್ಮಣ್ಯ ಅವರ ಪತ್ನಿ ಮಮತಾ ಬಹಳ ಪ್ರಬಲವಾಗಿ ಅಭ್ಯರ್ಥಿಯಾಗಲು ಯತ್ನಿಸುತ್ತಿದ್ದಾರೆ. ಮತ್ತೂಂದೆಡೆ 26ನೇ ವಾರ್ಡ್ ಸದಸ್ಯೆ ಕುಮುದಾ ಕೇಶವಮೂರ್ತಿ ಸಹ ಅಭ್ಯರ್ಥಿಯಾಗಲು ಯತ್ನ ನಡೆಸಿದ್ದಾರೆ. ಕೇಶವ ಮೂರ್ತಿ ಅವರು ಸಂಸದ ಶ್ರೀನಿವಾಸಪ್ರಸಾದ್ ಅವರ ಪ್ರಭಾವ ಬಳಸಿ ಸ್ಥಾನ ಕೇಳಲಿದ್ದಾರೆ. ಎಸ್‌ಟಿ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ 29ನೇ ವಾರ್ಡ್‌ನ ಸುಧಾ ಮಾತ್ರ ಅರ್ಹರು. ಹಾಗಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಅಲ್ಲಿ ಪೈಪೋಟಿ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ 13ನೇ ವಾರ್ಡಿನ ಕಲಾವತಿ ರವಿಕುಮಾರ್ ಹಾಗೂ 14ನೇ ವಾರ್ಡಿನ ಚಿನ್ನಮ್ಮ ಪ್ರಬಲ ಆಕಾಂಕ್ಷಿಗಳು. ಸತತ ಮೂರನೇ ಬಾರಿ ಗೆಲುವು ಸಾಧಿಸಿರುವುದರಿಂದ ಅಭ್ಯರ್ಥಿಯಾಗ ಲು ಅವಕಾಶ ನೀಡಬೇಕು ಎಂಬುದು ಕಲಾವತಿ ಅವರ ಮನವಿ. ಚಿನ್ನಮ್ಮ ಒಮ್ಮೆ ಅಧ್ಯಕ್ಷರಾಗಿದ್ದರು. ಹಿರಿತನದ ಹಿನ್ನೆಲೆಯಲ್ಲಿ ಮತ್ತೂಮ್ಮೆ ಅಭ್ಯರ್ಥಿಯಾಗಲು ಅವಕಾಶ ಕೋರಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲೂ ಏಕೈಕ ಅಭ್ಯರ್ಥಿ ಇದ್ದಾರೆ. 16ನೇ ವಾರ್ಡ್‌ನ ಚಂದ್ರಕ ಲಾ ಮಾತ್ರ ಸ್ಪರ್ಧೆಗೆ ಅರ್ಹರಾಗಿದ್ದಾರೆ.
ಇನ್ನೊಂದೆಡೆ ಎಸ್‌ಡಿಪಿಐ ಪಕ್ಷದ ಕಾಂಗ್ರೆಸ್‌ನ ಬೆಂಬಲ ಕೋರಿ ತಮಗೇ ಅಧಿಕಾರ ನಡೆಸಲು ಅವಕಾಶ ಕೋರುವ ಸಾಧ್ಯತೆಯೂ ಇದೆ. ಅಧ್ಯಕ್ಷ ಸ್ಥಾನಕ್ಕೆ ಅಲ್ಲಿ 5ನೇ ವಾರ್ಡಿನ ತೌಸಿಯಾ ಮಾತ್ರ ಅರ್ಹರು. ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಅಲ್ಲಿಲ್ಲ. ಇನ್ನೂ ತಮ್ಮ ಪಕ Òಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರಾಜ್ಯ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಆ ಪಕ್ಷದ ಸದಸ್ಯರೊಬ್ಬರು ತಿಳಿಸಿದರು.
ಬಿಎಸ್‌ಪಿ ಪ್ರಕಾಶ್, ಬಸವಣ್ಣ ನಿರ್ಣಾಯಕ! : 17ನೇವಾರ್ಡಿನ ಪಕ್ಷೇತರ ಬಸವಣ್ಣ 27ನೇ ವಾರ್ಡಿನ ಬಿಎಸ್‌ಪಿಯ ಪ್ರಕಾಶ್ ಈಗ ಎರಡೂ ಪಕ್ಷದ ಅಧಿಕಾರಕ್ಕೆ ನಿರ್ಣಾಯಕರು. ಪ್ರಕಾಶ್ ಏನಾದರೂ ಸ್ವತಂತ್ರ ನಿರ್ಧಾರಕೈಗೊಂಡು,ಕಾಂಗ್ರೆಸ್ ಪಕ್ಷದತ್ತ ವಾಲಿದರೆ ಕಾಂಗ್ರೆಸ್‌ಗೆ ಪ್ಲಸ್‌ಪಾಯಿಂಟ್. ಪಕ್ಷೇತರ ಬಸವಣ್ಣ ಅವರನ್ನು ಶಾಸಕ ಪುಟ್ಟ ರಂಗಶೆಟ್ಟಿ ಮನವೊಲಿಸುತ್ತಾರೆ ಎಂಬ ಮಾತುಗಳಿವೆ.
–ಕೆ.ಎಸ್. ಬನಶಂಕರ ಆರಾಧ್ಯ