Advertisement

Bihar; ಬಿಜೆಪಿ ನಡೆಸೀತೇ ಮಹಾ ಪ್ರಯೋಗ?: ಜೆಡಿಯುಗೆ ಆತಂಕ

11:44 PM Dec 07, 2024 | Team Udayavani |

ಪಟ್ನಾ: ಮಹಾರಾಷ್ಟ್ರ ಚುನಾವಣೆಯಲ್ಲಿ ಮಾಡಿದ್ದ ಪ್ರಯೋಗವನ್ನೇ ಬಿಜೆಪಿ 2025ರ ಬಿಹಾರ ವಿಧಾನಸಭೆ­ಯಲ್ಲೂ ನಡೆಸೀತೇ ಎಂಬ ಅಳುಕು ಈಗ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುಗೆ ಶುರುವಾಗಿದೆ ಎನ್ನಲಾಗಿದೆ. ಮಹಾರಾಷ್ಟ್ರ­ದಲ್ಲಿ ಏಕನಾಥ ಶಿಂಧೆ ನೇತೃತ್ವ ದಲ್ಲಿ ಚುನಾ­ವಣೆ ಎದುರಿಸಲಾಗುತ್ತದೆ ಎಂದು ಬಿಜೆಪಿ ಹೇಳಿದ್ದರಿಂದ ಶಿಂಧೆ ಸಿಎಂ ಆಗಿಯೇ ಮುಂದು­ವರಿಯುವ ನಿರೀಕ್ಷೆ ಹೊಂದಿದ್ದರು. ಆದರೆ ಗೆದ್ದ ಬಳಿಕ ಸಿಎಂ ಹುದ್ದೆ ಫ‌ಡ್ನವೀಸ್‌ ಪಾಲಾಯಿತು.

Advertisement

ಒಂದು ವೇಳೆ 243 ಕ್ಷೇತ್ರಗಳನ್ನು ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಬೇಕಾ­ಗುವ 122 ಕ್ಷೇತ್ರಗಳನ್ನು ಬಿಜೆಪಿ ಪಡೆದುಕೊಂಡರೆ ಸಿಎಂ ಹುದ್ದೆ ತನಗೇ ಬೇಕು ಎಂದು ಬಿಜೆಪಿ ಕೇಳಿಬಿಟ್ಟರೆ ಎಂಬ ಅಳುಕು ಜೆಡಿಯುನದ್ದು ಎಂದು ಮಾಧ್ಯಮ ವೊಂದು ವರದಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಸರು ಬಹಿರಂಗಪಡಿಸಲಿಚ್ಛಿಸದ ಜೆಡಿಯು ನಾಯಕ, ಬಿಹಾರ ಮಾದರಿ ಅಧಿಕಾರ ಹಂಚಿಕೆ ಜಾರಿ ಮಾಡ­ಬೇಕು ಎಂಬ ಶಿಂಧೆ ಬೇಡಿಕೆಯನ್ನು ಬಿಜೆಪಿ ತಿರಸ್ಕರಿಸಿತ್ತು ಎಂದಿದ್ದಾರೆ. ಬಿಹಾರದಲ್ಲಿ ಸಿಎಂ ನಿತೀಶ್‌ ಪ್ರಭಾವವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮಹಾ­ರಾಷ್ಟ್ರ ಫ‌ಲಿತಾಂಶದಿಂದ ಜೆಡಿಯುಗೆ ಆಘಾತವಾಗಿ­ದ್ದರೂ, 2 ರಾಜ್ಯಗಳ ಪರಿಸ್ಥಿತಿ ಬೇರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next