Advertisement

ಐಒಎ ಆಡಳಿತಕ್ಕೆ ತಟಸ್ಥ ವ್ಯಕ್ತಿ ನೇಮಕ: ಸುಪ್ರೀಂ ಕೋರ್ಟ್‌

10:56 PM Sep 19, 2022 | Team Udayavani |

ಹೊಸದಿಲ್ಲಿ: ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎ)ನ ಆಡಳಿತ ವ್ಯವಹಾರ ನಡೆಸಲು ತಟಸ್ಥ ವ್ಯಕ್ತಿಯನ್ನು ನೇಮಿಸು ವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ ಮತ್ತು ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಯೊಂದಿಗೆ ಸಂವಹನ ನಡೆಸುವಂತೆ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗೆ ಸೂಚಿಸಿದೆ.

Advertisement

ತನ್ನ ಆಡಳಿತದ ಸಮಸ್ಯೆಗಳನ್ನು ಪರಿಹರಿಸಿ ಮತ್ತು ಡಿಸೆಂಬರ್‌ನೊಳಗೆ ಚುನಾವಣೆಗಳನ್ನು ನಡೆಸುವಂತೆ ಐಒಸಿ ಕಳೆದ ಸೆ. 8ರಂದು ಐಒಎಗೆ ಅಂತಿಮ ಎಚ್ಚರಿಕೆಯನ್ನು ನೀಡಿತ್ತು. ಒಂದು ವೇಳೆ ವಿಫಲವಾದರೆ ಸಂಸ್ಥೆಯು ಭಾರತವನ್ನು ನಿಷೇಧಿಸುತ್ತದೆ ಎಂದು ತಿಳಿಸಿತ್ತು.

ಲಾಸನ್ನೆಯಲ್ಲಿ ಸಭೆ ಸೇರಿದ ಐಒಸಿಯ ಕಾರ್ಯಕಾರಿ ಮಂಡ ಳಿಯು ನರಿಂದರ್‌ಬಾತ್ರಾ ಅವರನ್ನು ಐಒಎ ​​ಅಧ್ಯಕ್ಷ ಸ್ಥಾನದಿಂದ ವಜಾಗೊ ಳಿಸಿದ ಅನಂತರ ಯಾವುದೇ “ಪ್ರಭಾರ/ ಮಧ್ಯಾಂತರ ಅಧ್ಯಕ್ಷರನ್ನು” ಪರಿಗಣಿಸ ದಿರಲು ನಿರ್ಧರಿಸಿದೆ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಅವರ ಜತೆ ಮುಖ್ಯ ವಿಷಯವಾಗಿ ವ್ಯವಹರಿಸುವುದಾಗಿ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next